ಕಾವ್ಯ ಸಂಗಾತಿ
ಗಜಲ್
ಜಯಶ್ರೀ.ಭ.ಭಂಡಾರಿ
ಏನೊಂದೂ ಸುಳಿವು ನೀಡದೆ ಎದ್ದು ನಡೆದು ಬಿಟ್ಟೆ ಕನ್ನಡದ ಕಂದಾ.
ಏನಿತ್ತು ಅವಸರ ಅಪ್ಪ ಅಮ್ಮನ ಮಡಿಲು ನೆನಪಾಯಿತೆ ಕಂದಾ.
ಬೆಳಕಿನ ಹಬ್ಬದ ಸಂಭ್ರಮ ಇದಿರು ನೋಡುತಿರುವ ಹೊತ್ತಿನಲ್ಲಿ
ಕಾರ್ಗತ್ತಲಲ್ಲಿ ನೀ ಮುಳುಗಿಸಿ ಹೋದೆಯಲ್ಲ ಕನ್ನಡದ ಕಂದಾ.
ದಿಕ್ಕೇ ತೋಚದ ನಿನ್ನ ಅಭಿಮಾನಿ ಬಳಗ ದಿಕ್ಕೆಟ್ಟರು ಸವ್ಯಸಾಚಿ.
ಅಭಿಮಾನಿಗಳ ಮನದ ಕಣ್ಮಣಿ ಯುವರತ್ನ ನೀ ಕನ್ನಡದ ಕಂದ.
ಪ್ರೆಮದ ಕಾಣಿಕೆಯ ಪುಟ್ಟ ದೊರೆ ಇದೇನಾಟ ರಾಜಕುಮಾರನೆ
ತಡೆಯದ ಆಘಾತ ನೀಡಿ ಮಧ್ಯದಲ್ಲಿ ನಡೆದು ಬಿಟ್ಟೆ ಕನ್ನಡದ ಕಂದ.
ನೀನಿರದ ನಾಡಿನಲ್ಲಿ ಉಸಿರುಗಳು ನಿಡುಸುಯ್ಯತಿವೆ ಸಾರ್ವಭೌಮನೆ
ರಾಜರತ್ನನಿಲ್ಲ ಅನ್ನೊದನ್ನ ಅರಗಿಸಿಕೊಳ್ಳಲಾಗುತ್ತಿಲ್ಲ ಕನ್ನಡದ ಕಂದ.
ಪೃಥ್ವಿಯ ಮೇಲೆ ನಿನ್ನ ಕಾರ್ಯಗಳೆಲ್ಲವೂ ಎಂದಿಗೂ ಪುನೀತವೆ.
ನಿನ್ನ ಹೆಜ್ಜೆ ಗುರುತುಗಳು ಅಳಿಯಲಾರವು ಎಂದೆಂದಿಗೂ ಕನ್ನಡದ ಕಂದಾ.
ನೀನಿರದಿದ್ದರೂ ನೀ ಬೀರಿದ ಘಮ ಸದಾ ಅಜರಾಮರ ಅಪ್ಪು.
ಆಕಾಶದೆತ್ತರಕ್ಕೆ ಏರಿದರೂ ವಿನಯಕೆ ನೀನೆ ಪರ್ಯಾಯ ಕನ್ನಡದ ಕಂದಾ.
ಮತ್ತೆ ಹುಟ್ಟಿ ಬಾ. ಕಾಯುತಿಹುದು ಕರುನಾಡು ನಿನ್ನ ಆಗಮನಕ್ಕಾಗಿ.
ಯಶಧ ಪ್ರತಿಭೆ ಹೊತ್ತ ಮೊತ್ತವೆ ಎಲ್ಲಿ ಮಾಯವಾದೆ ಕನ್ನಡದ ಕಂದಾ
ಇದು ಯಾವ ರೀತಿಯಲ್ಲಿ ಗಜಲ್ ಆಗಿದೆ? ಗಜಲ್ ನಿಯಮವೇ ಇಲ್ಲವಲ್ಲ!!?