ಅನುವಾದ ಬರಹ

ರಘುಪತಿ ಸಹಾಯ್ ಫಿರಾಖ್

ಗೋರಖ್ ಪುರಿ ಕವಿತೆ

ರಘುಪತಿಸಹಾಯ್ ಫಿರಾಖ್ ಗೋರಖ್ಪುರಿ ಇವರು ಪ್ರಮುಖ ಉರ್ದುಕವಿಗಳು. ಸಾಹಿರ್ಲೂದಿಯಾನ್ವಿ,ಮಹಮ್ಮದ್ಇಕ್ಬಾಲ್‍‍ರಂತಹ ಅನೇಕ ಹೆಸರಾಂತ ಉರ್ದುಕವಿಗಳಿದ್ದ ಕಾಲದಲ್ಲಿಇವರುಉತ್ತಮಉರ್ದುಕವಿಗಳಾಗಿಪ್ರಸಿದ್ಧಿಪಡೆದರು. ಇವರ ಬೃಹತ್ಕವನಸಂಕಲನ ಗುಲ್-ಏ-ನಗ್ಮಾಕ್ಕೆ ಜ್ಞಾನಪೀಠಪ್ರಶಸ್ತಿಯುದೊರೆಯಿತು. ಇಲ್ಲಿಅನುವಾದಗೊಂಡ ಕವಿತೆಗಳು ಗಜಲುಗಳಂತೆ ಕಂಡರೂ ಗಜಲುಗಳಲ್ಲ. ಇವುಕಾವ್ಯಕಾರಣದಲ್ಲಿಬಂದವು

ಕನ್ನಡಕ್ಕೆ ಅನುವಾದಿಸಿದವರು:

ಆರ್.ವಿಜಯರಾಘವನ್

ಇಂದು ಸಹ ಪ್ರೀತಿಯ ಕಾರವಾನ್

Ray of hope. In the darkness there is always a ray of hope stock photos

ಇಂದೂ ಈಪ್ರೀತಿಯ ಕಾರವಾನ್ ಹಾದುಹೋಗುತ್ತಿದೆ
ಈ ಮೈಲು ಮತ್ತು ಈ ಮೈಲಿಗಲ್ಲನ್ನು ಯಾವತ್ತಿನಂತೆ

ನಿಮ್ಮ ದುಃಖ ಈ ಜಗತ್ತಿನಲ್ಲಿದ್ದ ಎಂದಿನ ದುಷ್ಟ ವಿಷಯವಾಗಿದೆ
ನಮ್ಮ ಕಥೆಯನ್ನು ಇತರರು ಹೇಳುತ್ತಿದ್ದಾರೆಅದೇ ಮೊದಲಿನಂತೆ

ಗುರಿಗಳುಧೂಳಿನಂತೆಹಾರಿಹಾರಿ ಹೋಗುತ್ತಲಿವೆ
ಹಾದುಹೋಗುವಲೋಕದರೀತಿಯೂಮೊದಲಿನಂತೆ

ಕತ್ತಲೆಯಲ್ಲಿಬೆಳಕಿನಲ್ಲಿಪ್ರೀತಿಏನನ್ನೂಕಾಣಲಿಲ್ಲ
ಸಂಜೆಬೆಳಕಿನಪರಿಣಾಮವಿದೆಇಂದಿಗೂಮೊದಲಿನಂತೆ

ಈ ಬದುಕಿನಲ್ಲಿ ಬದುಕ ಒಟ್ಟುಗೂಡಿಸುವಿಕೆ ಪರಿಣಾಮರಹಿತವಾಗಿದೆ
ಭಾರದುಬಾರಿ ಮಧುಕುಡಿಕೆಗಳ ಕುರಿತ ಗೌಜುಗದ್ದಲವಿದೆ ಮೊದಲಿನಂತೆ

ಸಾವಿರಸಾವಿರ ಹಿಂಸೆ ದಬಾವಣಿಕೆಯ ಕಾರ್ಯಗಳಮಾಡು
ಸಾವಿರಗಟ್ಟಲೆ ಬದ್ಧತೆಯ,ದಯೆಯ ಸತ್ಕಾರ್ಯಗಳಮಾಡು
ಗೆಳೆಯನೇ! ನಿನ್ನ ಕುರಿತ ಶಂಕೆ ಅನುಮಾನಗಳು ಉಳಿವವು ಮೊದಲಿನಂತೆ

ಇಂದು, ಮತ್ತೆ, ಪ್ರೀತಿಬೇರ್ಪಟ್ಟಿದೆಎರಡುಲೋಕಗಳಿಂದ
ಜಗತ್ತನ್ನುತೋಳುಗಳಲ್ಲಿಬಿಗಿದಪ್ಪಿದ್ದವಳುಇರುವಳೇಮೊದಲಿನಂತೆ

ಖಿನ್ನತೆಗೆಸಂದ ಪ್ರೀತಿಇಂದಿಗೂಅತಿಖಿನ್ನತೆಗೆಒಳಗಾಗಿಲ್ಲ
ಕಾಣದಂಥಸುಡುವಿಕೆಯಸಣ್ಣಪರಿಣಾಮವುಇದೆಮೊದಲಿನಂತೆ

ಸಾಮೀಪ್ಯವುಕಡಿಮೆಯಿಲ್ಲ, ದೂರವಿರುವಿಕೆಯುಹೆಚ್ಚಿಲ್ಲ
ಆದರೆಇಂದು, ಅನ್ಯೋನ್ಯತೆಯಅರ್ಥವಿರುವುದಾದರೂಎಲ್ಲಿಮೊದಲಿನಂತೆ

ಸ್ಫಟಿಕಮಣಿಯಲ್ಲಿಅತಿಸೂಕ್ಷ್ಮಲೋಪವನುನೀನಗೆನೋಡಲುಸಾಧ್ಯ
ಸ್ಫಟಿಕಮಣಿಯಕಲಾಕಾರನೇ, ಹೇಳು, ನನ್ನಹೃದಯವಿರುವುದೇಮೊದಲಿನಂತೆ

ಒಮ್ಮೆಕಾಮಕ್ಕೆಅಜಾಗರೂಕತೆಯಿಂದಬದುಕನ್ನೊಪ್ಪಿಸಿದರೂ
ಲಾಭನಷ್ಟದಸಮಸ್ಯೆಉಳಿದೇ ಇರುವುದುಮೊದಲಿನಂತೆ

ಇಂದೂಕೊಲ್ಲುವಸೌಂದರ್ಯವಿರುವುದುಪ್ರೀತಿಬೇಟೆಯಾಡುವನೆಲದಲ್ಲಿ
ತನ್ನ ಕಮಾನುಹುಬ್ಬನ್ನುಒಯ್ಯಲೊಯ್ಯುತ್ತಮೊದಲಿನಂತೆ

ನಿಮ್ಮಪ್ರಕಾಂಡಪ್ರವಚನದಕಣ್ಣುಮಾತನಾಡಲುಪ್ರಾರಂಭಿಸಿತು
ಆಅಭಿವ್ಯಕ್ತಿಯಸೌಂದರ್ಯಮಾಂತ್ರಿಕತೆ ಈಗಲೂಇರುವವಾ ಮೊದಲಿನಂತೆ

ಓಫಿರಾಕ್, ಸುಡುವಹೃದಯದಕಪ್ಪುವಿಧಿಯಂತಹಅದೃಷ್ಟವುಮಸುಕಾಗುವುದಿಲ್ಲ
ಈದಿನಮೋಂಬತ್ತಿಯಮೇಲ್ಭಾಗದಲ್ಲಿಹೊಗೆಇದೆ, ಮೊದಲಿನಂತೆ.


2 thoughts on “

  1. ಅನುವಾದ ಮೂಲಕವಿತೆಯಂತೆ ಅನಿಸಿತು. ಸೊಗಸಾಗಿದೆ ಸರ್

  2. ಪ್ರೀತಿಯ ನಿಯಮ ಮತ್ತು ಪ್ರೀತಿಯ ಆಚರಣೆಗಳ ನಡುವಿನ ಹೊಂದಿಸಲಾರದ ಅಂತರವನ್ನು ಎಷ್ಟು ಜನ ಬರೆದಿರಬಹುದು! ಮತ್ತು ಬರೆಯಲು ಇದೊಂದು ಆಜನ್ಮದ ವಿಷಯವೇ ಹೌದು. ಇದನ್ನು ಓದಿದವರು ಸ್ಫೂರ್ತಿಗೊಂಡು ಮತ್ತೊಂದು ಬರೆದರೂ ಮತ್ತೆ ಅದೇ ಅಂತರ,ಅರ್ಥವಾಗದಿರುವಿಕೆ,ಹಳತಾಗುವುದು ಮತ್ತು ಹಳತಾಗದಿರುವಂತೆ ಪ್ರಜ್ಞಾಪೂರ್ವಕ ಅದರತ್ತ ತೊಡಗುವ ಆತ್ಮವಂಚನೆಯ ಕೆಲಸ….
    ಉದ್ದಕ್ಕೂ ದಟ್ಟ ವಿಷಾದ,ಅಸಹಾಯಕತೆ ಮತ್ತು ಸೀಮಿತತೆಗಳ ಮೆರವಣಿಗೆ ಇದೆ…..
    ನಿಮ್ಮ ಅನುವಾದ ಮತ್ತು ಅಭಿರುಚಿ ಎಂದಿಗೂ ವಿಶಿಷ್ಟ ಸರ್….
    ಅಭಿನಂದನೆ..

Leave a Reply

Back To Top