ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್ ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು. ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು. ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ ವ್ಯವಸ್ಥೆಯನ್ನು ಒಡೆದು ಬೇರೆ ದಾರಿ ಹಿಡಿಯುವುದು ಹೇಗೆ ಮತ್ತು ಅದರ […]
ಅನುವಾದಿತ ಕೃತಿ ಪ್ರಪಂಚ ಪ್ರವೇಶ ಮೊದಲ ನುಡಿ ಅನುವಾದವೆಂಬ ಪದದ ಸರಿಯಾದ ಅರ್ಥ ತಿಳಿಯದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಎರಡು ಭಾಷೆಗಳು ತಿಳಿದಿದ್ದರೆ ಸಾಕು ಅನುವಾದ ತಾನೇ ತಾನಾಗಿ ಆಗುತ್ತದೆ ಎಂದು ತಿಳಿಯುವವರಿದ್ದಾರೆ. ಅನುವಾದವೆಂದರೆ ಅದೊಂದು ಯಾಂತ್ರಿಕವಾದ ಕೆಲಸವೆಂದು ಹೇಳುವವರಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಾಷೆಯ ಮಹತ್ವವೇನು, ಅನುವಾದದ ಮಹತ್ವವೇನು, ಅನುವಾದಕ/ಕಿಯಲ್ಲಿ ಇರಬೇಕಾದ ಪ್ರತಿಭೆಯೇನು, ಪಾಂಡಿತ್ಯವೇನು, ಗುಣಗಳೇನು, ಸೃಜನಶೀಲತೆಯೇನು-ಈ ಯಾವುದರ ಗೊಡವೆಯೂ ಇಲ್ಲದೆ ಸಾಹಿತ್ಯಲೋಕದಲ್ಲಿ ಅನುವಾದಕರಿಗೆ ಮೂಲ ಲೇಖಕರ ನಂತರದ ಸ್ಥಾನ ಕೊಡುವ ಹುನ್ನಾರ ಎಂದಿನಿಂದಲೂ ನಡೆಯುತ್ತಲೇ […]