ಪುಸ್ತಕ ಸಂಗಾತಿ
ನಾನು ಕಸ್ತೂರ್ ಇತ್ತೀಚೆಗೆ ಲೋಕಾರ್ಪಣೆಗೊಂಡ ಡಾ. ಎಚ್.ಎಸ್.ಅನುಪಮಾ ಕೃತಿ. ಲಡಾಯಿ ಪ್ರಕಾಶನದಿಂದ ಪ್ರಕಟಿತ.. ಚಂದ್ರಪ್ರಭಾ ಬಿ. ಒಂದು ಒಳನೋಟು ಭಿನ್ನ ಆಲೋಚನೆ, ಭಿನ್ನ ನಿಲುವಿನ ಡಾ. ಎಚ್.ಎಸ್.ಅನುಪಮಾ ಏನು ಮಾಡಿದರೂ ಅದು ವಿಭಿನ್ನವೇ ಆಗಿರುತ್ತದೆ ಎಂಬ ಮಾತಿಗೆ ಕಸ್ತೂರ್ ಜೀವನ ಕಥನ ಒಂದು ಉದಾಹರಣೆ. ಮೈಸೂರಿನಲ್ಲಿ ಪುಸ್ತಕ ಲೋಕಾರ್ಪಣೆ ಮಾಡುತ್ತ ಮಮತಾ ಸಾಗರ್ ಹೇಳಿದ ಹಾಗೆ ಅನುಪಮಾ ಸ್ವತಃ ನಿವೇದಿಸಿದ ಪ್ರಸ್ತಾವನೆ ರೂಪದ ಬರಹವನ್ನು ಓದಿಯೇ ಪ್ರತಿ ಓದುಗ ಮುಂದೆ ಸಾಗಬೇಕು. ಕೃತಿ ರಚನೆಯ ಹಿನ್ನೆಲೆಯ ಜೊತೆಗೇ […]
ಪುಸ್ತಕ ವಿಮರ್ಶೆ
ಕೃತಿ ಬಿಕರಿಗಿಟ್ಟ ಕನಸು-ಕಾವ್ಯ ಲೇಖಕರು: ದೇವು ಮಾಕೊಂಡ ಡಾ.ವಿಜಯಶ್ರೀ ಇಟ್ಟಣ್ಣವರ ಕವಿಯೊಬ್ಬ ಕಾವ್ಯ ನರ‍್ಮಿತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದರೆ ಕಾವ್ಯ ಪ್ರತಿಭೆ ಅವಶ್ಯ. ಅದನ್ನೇ ಆಲಂಕಾರಿಕರು ‘ಕವಿತ್ವ ಬೀಜಂ ಪ್ರತಿಭಾನಂ’ ಎಂದಿದ್ದಾರೆ. ಹಾಗಾದರೆ ಕಾವ್ಯ ನರ‍್ಮಿತಿಗೆ ಪ್ರತಿಭೆಯೊಂದೇ ಸಾಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ, ಪ್ರತಿಭೆಯ ಜೊತೆಗೆ ಬದುಕಿನ ವಿಭಿನ್ನ ಅನುಭವ, ಆಲೋಚನೆಗಳು ಕವಿಯೊಬ್ಬನನ್ನು ನರ‍್ಮಿಸುತ್ತವೆ. ಹೊಸದನ್ನು ಕಾಣುವ, ಕಾಣಿಸುವ ಮನಸ್ಸು, ಪ್ರಜ್ಞೆ ಕವಿಗೆ ಬೇಕು.ಇದನ್ನೇ ಆಲಂಕಾರಿಕರು ‘ಪ್ರಜ್ಞಾ ನವನವೋನ್ಮೇಶ ಶಾಲಿನಿ’ ಎಂದಿದ್ದಾರೆ. ಜೊತೆಗೆ ಕಟ್ಟಿದ ಕಾವ್ಯವನ್ನು […]
ನಾನು ಓದಿದ ಪುಸ್ತಕ
ಮಣ್ಣಿಗೆ ಬಿದ್ದ ಹೂಗಳು ಬಿದಲೋಟಿ ರಂಗನಾಥ್ ಅರುಣ್ ಕುಮಾರ್ ಬ್ಯಾತ ಬಿದಲೋಟಿ ರಂಗನಾಥ್ ಸರ್ ಜಾಲತಾಣದ ಆತ್ಮೀಯರಾದರೂ ಅವರು ಭೇಟಿ ಆದದ್ದು, ಮೊನ್ನೆ ತುಮಕೂರಿನ ಕಾರ್ಯಕ್ರಮವೊಂದರಲ್ಲಿ. ಮಾತಾಡಿಸಿ ಕೈಗೆರಡು ಪುಸ್ತಕಗಳನಿಟ್ಟು ಓದು ಎಂದರು. ನಾನೂ ಬಿಡುವಿನಲ್ಲಿ ಹಾಗೇ ಕಣ್ಣಾಡಿಸಿದೆ ಒಂದು ಮೂರು ಹತ್ತು ಹೀಗೆ ಎಲ್ಲವೂ ಮುಗಿದುಹೋದವು…ಓದಿಕೊಂಡಾಗ ಉಳಿದ ನನ್ನವೇ ಒಂದಿಷ್ಟೇ ಇಷ್ಟು ಅನಿಸಿಕೆಯನ್ನು ಇಲ್ಲಿ ಬರೆಯುವುದಕ್ಕೆ ಪ್ರಯತ್ನಿಸಿರುವೆ… ಏನು ಮಣ್ಣಿಗೆ ಬಿದ್ದ ಹೂವುಗಳು..? ಯಾಕೆ ಇದೇ ಶೀರ್ಷಿಕೆ ಇಟ್ಟರು ಎಂದು ತಡಕಾಡಿದೆ…! ಒಂದೆರಡು ಸಾಲು ಉತ್ತರ […]
ವೈದೇಹಿ-75
ಇರುವಂತಿಗೆ ವೈದೇಹಿ ಗೌರವ ಗ್ರಂಥ ಸಮರ್ಪಣೆ ದಿನಾಂಕ:01-12-2019 ಭಾನುವಾರ ಬೆಳಿಗ್ಗೆ 10.30ಕ್ಕೆ ಪತ್ರಿಕಾಭವನ, ಶಿವಮೊಗ್ಗ ಸಾಹಿತ್ಯಾಸಕ್ತರಿಗೆ ಸ್ವಾಗತ
ಪುಸ್ತಕ ಸಂಭ್ರಮ
ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. […]
ಪುಸ್ತಕ ಪರಿಚಯ
ಕೃತಿ-ಗುಣ (ಕಾದಂಬರಿ) ಲೇಖಕರು-ಡಾ.ಗುರುಪ್ರಸಾದ್ ಕಾಗಿನೆಲೆ ಛಂದ ಪುಸ್ತಕ ಡಾ.ಅಜಿತ್ ಹರೀಶಿ ಶಿವಮೊಗ್ಗದಲ್ಲಿ ಹುಟ್ಟಿ ಬಳ್ಳಾರಿಯಲ್ಲಿ ಎಂಬಿಬಿಎಸ್.ಎಂಡಿ ಮಾಡಿ ಪ್ರಸ್ತುತ ಅಮೆರಿಕದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸಮಾಡುತ್ತಿರುವ ಗುರುಪ್ರಸಾದರು ಬರೆದಿರುವ ಕಾದಂಬರಿಯಿದು. ಬಿಳಿಯ ಚಾದರ,ಗುಣ ಮತ್ತು ಹಿಜಾಬ್ ಅವರ ಪ್ರಕಟಿತ ಕಾದಂಬರಿಗಳು. ನಿರ್ಗುಣ, ಶಕುಂತಳಾ ಕಥಾಸಂಕಲನಗಳು, ಲೇಖನ ಸಂಗ್ರಹ-ವೈದ್ಯ ಮತ್ತೊಬ್ಬ, ಆಚೀಚೆ ಕಥೆಗಳು- ಸಂಪಾದಿತ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ. ಹಿಂದಿನ ದಶಕದಲ್ಲಿ ಅಮೆರಿಕೆಯಲ್ಲಿ ಘಟಿಸಿರಬಹುದಾದ, ಈ ದಶಕದಲ್ಲಿ ಭಾರತದ ಮಹಾನಗರಗಳಲ್ಲಿ ನಡೆಯುತ್ತಿರಬಹುದಾದ ಮತ್ತು ಮುಂದಿನ ದಿನಮಾನಗಳಲ್ಲಿ ನಾವೇ ಕಾಣಬಹುದಾದ ವಿಶಿಷ್ಟ […]
ಫೋಟೋ ಆಲ್ಬಂ
ಪಂಚವರ್ಣದ ಹಂಸ ಸತ್ಯಮಂಗಲ ಮಹಾದೇವ ಕೃತಿ ಬಿಡುಗಡೆಯ ಸಂಭ್ರಮದ ಕ್ಷಣಗಳು ದಿನಾಂಕ: 04-11-2019 ಬಿಡುಗಡೆ: ಶ್ರೀ ಮಲ್ಲೇಪುರಂ.ಜಿ.ವೆಂಕಟೇಶ್ ಕೃತಿ ಕುರಿತು ಮಾತಾಡಿದವರು: ಡಾ.ಸಿ.ಎನ್. ರಾಮಚಂದ್ರನ್
ಕೃತಿ ಲೋಕಾರ್ಪಣೆ
ಬಂಟಮಲೆ ತಪ್ಪಲಿನಲ್ಲಿ ಪುಸ್ತಕಸಂಭ್ರಮ ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಮುಖ್ಯಸ್ಥ ಶ್ರೀ ಡಾ.ಪುರುಷೋತ್ತಮ ಬಿಳಿಮಲೆಯವರ-“ವಲಸೆ,ಸಂಘರ್ಷ ಮತ್ತು ಸಮನ್ವಯ” ಕೃತಿ ನವೆಂಬರ್ 9 ರಂದು ಲೋಕಾರ್ಪಣೆಗೊಳ್ಳಲಿದೆ. ಕೃತಿಯ ಹೆಸರು-“ವಲಸೆ, ಸಂಘರ್ಷ ಮತ್ತು ಸಮನ್ವಯ” ಲೇಖಕರು-ಡಾ.ಪುರುಷೋತ್ತಮ ಬಿಳಿಮಲೆ ಸ್ಥಳ-ಬಂಟಮಲೆ ತಪ್ಪಲಿನ ಬಿಳಿಮನೆ ಅದ್ಯಕ್ಷತೆ-ಟಿ.ಜಿ.ಮುಡೂರು ಬಿಡುಗಡೆ-ಪ್ರೊ.ಬಿ.ಎ.ವಿವೇಕ ರೈ ಅತಿಥಿಗಳು-ಪ್ರೊ.ಕೆ.ಚಿನ್ನಪ್ಪಗೌಡ ಮತ್ತು ಜಾಕೆ ಮಾದವಗೌಡರು.
ಪುಸ್ತಕ ವಿಮರ್ಶೆ
ಕೃತಿ: ಭಾವಗಳು ಬಸುರಾದಾಗ. ಕವಿ:ಅರುಣ್ ಕೊಪ್ಪ ವಿಮರ್ಶೆ: ಜಿ.ವಿ.ಕೊಪ್ಪಲತೋಟ ಭಾವಗಳು ಬಸುರಾದಾಗ ಕವನ ಸಂಕಲನಕ್ಕೆ ಹಿರಿಯ ಪತ್ರಕರ್ತ ಶ್ರಿÃ ಜಯರಾಮ ಹೆಗಡೆ ಶಿರಸಿ ಮುನ್ನುಡಿ ಬರೆದಿದ್ದಾರೆ. ಬೆನ್ನುಡಿಯಲ್ಲಿ ಸಾಹಿತಿ ಡಾ|| ಬೇರ್ಯರಾಮಕುಮಾರ ಅವರು ಅರುಣಕೊಪ್ಪ ಅವರನ್ನು ಪರಿಚಯಿಸಿದ್ದಾರೆ. ಸಾಲದೂ ಎಂಬಂತೆ ಡಾ|| ಅಜಿತ್ ಹೆಗಡೆ ಹರೀಶಿಯವರೂ ಕೂಡಾ ಇವರನ್ನು ಓದುಗರಿಗೆ ಪರಿಚಯಿಸಿದ್ದಾರೆ. ಇವರ ಮೊದಲ ಕವನ ಸಂಗ್ರಹ ಹನಿಗಳ ಹಂದರ ಎರಡನೆ ಸಾಹಿತ್ಯ ಕೃತಿಯೇ ಭಾವಗಳು ‘ಬಸುರಾದಾಗ’ (ಕವನ ಸಂಕಲನ) ಈ ಸಂಕಲನದಲ್ಲಿ ಸಣ್ಣದು ದೊಡ್ಡದು ಸೇರಿ […]
ಪುಸ್ತಕ ಬಿಡುಗಡೆಯ ಸಂಭ್ರಮ
ಲೋಕಾರ್ಪಣೆ ‘ಪಂಚವರ್ಣದ ಹಂಸ‘ ಸಾಹಿತ್ಯಾಸಕ್ತರಿಗೆ ಸ್ವಾಗತ ಕವಿ ಸತ್ಯಮಂಗಲ ಮಹಾದೇವ ಅವರ ಕವನ ಸಂಕಲನದ ಲೋಕಾರ್ಪಣೆಯ ಕಾರ್ಯಕ್ರಮ ದಿನಾಂಕ: 04/11/2019, ಸೋಮವಾರ ಸಮಯ: ಸಂಜೆ 6 ಗಂಟೆಗೆ ಸ್ಥಳ: ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಸಭಾಂಗಣ