ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್
ಅನುವಾದ ಸಂಗಾತಿ “ಸ್ನೇಹವೆಂಬ ಬಣ್ಣದ ವಿಷ” ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ ಮುರಳೀ ಮೋಹನ್ ಇಪ್ಪತ್ತು ವರ್ಷಗಳ ಹಿಂದೆ ಒಂದು ಸ್ನೇಹದ ಕೂಟದಲ್ಲಿಸ್ನೇಹವೆಂಬ ಬಣ್ಣದ ವಿಷಸ್ನೇಹದ ಲೇಪ ಹಚ್ಚಿದ ಒಮ್ಮೆಗಿನ ಮಾತುಕತೆ –ಅದು ಮಾತುಕತೆ ಅಲ್ಲಮರೆಯಾಗದ ಗಾಯಕ್ಕೆ ಸವರಿದ ಉಪ್ಪುಕಣ್ಣುಗಳಲ್ಲಿ ಸುಳಿದಾಡಿದ ಸುಡಿಗುಂಡಿಗಳು ಹತ್ತು ವರ್ಷಗಳ ಹಿಂದೆಒಂದು ಮದುವೆ ಮಂಟಪದಲ್ಲಿಮದುವೆಯ ಸಂಭ್ರಮ ತುಟಿಗಳ ನಗುವಾದಾಗಸ್ನೇಹದ ನಗುವಿನೊಂದಿಗೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲವಾಸಿಯಾದ ಪುಣ್ಣಿನ ಮೇಲೆ ಕಾರದ ಮಳೆ ಐದು ವರ್ಷಗಳ ಹಿಂದೆ ಬಜಾರಿನಲ್ಲಿಹರಟೆಗಳ ಗಾಳಿಪಟಗಳನ್ನು ಹಾರಿಸುತ್ತಿದ್ದಾಗಗಾಳಿಯ ಹೊಡೆತದಂತೆ ಒಮ್ಮೆಗಿನ ಮಾತುಕತೆಅದು ಮಾತುಕತೆ ಅಲ್ಲಪಟಕ್ಕನೆ ಮಂಜಾ ದಾರಿಯನ್ನು ಕತ್ತರಿಸಿಕುತ್ತಿಗೆಗೆ ಸುತ್ತಿದ ವಿಷದ ನಗು ನಿನ್ನೆ ಮೊನ್ನೆಯ ರಾತ್ರಿಕನಸಿನಲ್ಲಿ ಕಣ್ಣು ಮುಚ್ಚಲೊಡನೆಕರೆ ಮಾಡಿ ಬಂದುಕುಣಿಯುತ್ತಿದ್ದ ಕನಸುಗಳನ್ನುನೆಟ್ಟಗೆ ಸುಟ್ಟುಹಾಕಿತುಅವಳು ಯಾರೇ ಆಗಿರಲಿ;ಸ್ನೇಹದ ಲೇಪ ಹಚ್ಚಿದ ಕಟುವಾದ ಮುಳ್ಳಿನಿಂದಗುಣವಾಗುತ್ತಿದ್ದ ಹೃದಯಗಾಯವನ್ನು ಕೆದಕಿದಾಗಆ ಕಣ್ಣುಗಳಲ್ಲಿ ಎಷ್ಟು ಮಿನುಗು!ಅವಳೋ ಅಥವಾ ಅವನೋ ಯಾರಾದರೇನು?ನಮ್ಮ ಸುತ್ತಲೂ ಅಂಥವರು ಎಷ್ಟು ಜನವೋ! ತೆಲುಗು ಮೂಲ: ಶೀಲಾ ಸುಭದ್ರಾದೇವಿಕನ್ನಡಕ್ಕೆ: ಕೋಡೀಹಳ್ಳಿ ಮುರಳೀ ಮೋಹನ್
ಶೀಲಾ ಸುಭದ್ರಾದೇವಿಯವರ ತೆಲುಗು ಕವಿತೆ “ಸ್ನೇಹವೆಂಬ ಬಣ್ಣದ ವಿಷ” ಕನ್ನಡಾನುವಾದ ಕೋಡೀಹಳ್ಳಿ ಮುರಳೀ ಮೋಹನ್ Read Post »









