ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು ಮಾಗಿಯ ಚಳಿ ತಣ್ಣನೆಯ ಮಾಗಿಯ ಚಳಿ ಮೈ ಸೋಕಿರಲುನಿನ್ನದೇ ಸವಿ ನೆನಪು ಕಾಡಿರಲುಮನಸು ಹೃದಯ ಮುದವೇರಲುಸೊಗಸಾಗಿ ಹಳೆ ನೆನಪು ಸೋಕಿರಲು ಸೆಳೆಯುತಿದೆ ಮನ ನಿನ್ನೆಡೆಗೆ ವಾಲಿಹೃದಯವನು ಇರಿಸಿರುವೆ ನಿನಗಾಗಿ ಖಾಲಿಒಂದಾಗಿ ಆಡೋಣ ಬಾ ಜೀವನ ಜೋಕಾಲಿಸೇರಿ ಜೀವನದ ಪಾಠವ ಕಲಿ ನೀನಿಲ್ಲದ ಬದುಕು ಬರೀ ನೀರಸನೀನಿರೆ ಜೊತೆಯಲ್ಲಿ ಮನ ಉಲ್ಲಾಸನಿನ್ನೊಲವು ಬೇಕಿದೆ ಬಾಳಿಗೆ ಸಂತಸ ಅರಿತುಕೊ ನನ್ನೆದೆಯ ಕೂಗಿನ ಮನಸ ಹೊಸಬಾಳಿನ ನೂತನ ಸಂಭ್ರಮ ನಿಶ್ಚಿತಹೂ ಚೆಲ್ಲಿ ಕೋರುವೆ ನಿನಗೆ ಸ್ವಾಗತಹಾರಾಡಿ ಕುಣಿದಿರುವೆ ನವಿಲಂತೆ ನಲಿಯುತನೀನೆಂದೆಂದು ನನ್ನವನೇ ಬಾಳಲ್ಲಿ ಶಾಶ್ವತ. ಲತಾ ಎ ಆರ್ ಬಾಳೆಹೊನ್ನೂರು
ಧಾರಾವಾಹಿ ಸಂಗಾತಿ ಕಂತು-ಆರು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ “ಮಾತಾಡೋ ಮಾತಾಡೋ ಆತುಮದ ಲಿಂಗವೇ!! ಮುನಿಸುವುದೇತಕ್ಕೆ ಅನಿಮಿತ್ಯವಾಗಿ ನೀಎನ್ನಯ್ಯ ಮಾತಾಡು, ಚನ್ನೀಗ ಚರಲಿಂಗವೆ!! ನಂಬಿದೆ ನಂಬಿರುವೆ ಸಾಂಬ ನಿನ್ನಯ ಪಾದಕಂಬನಿ ಸುರಿಯುವವೊ ಶಂಭೋ ನೀ ಮಾತನಾಡೊ ಅಂಗೈಯದೊಳು ಬಂದು ಲಿಂಗರೂಪವ ತಾಳಿ ಕಂಗೊಳಿಸುವ ಶಿವನೆ ಮಂಗಳಮಯ ಲಿಂಗವೇ!! (“ತಾರಕ ತಂಬೂರಿ” ಕವನ ಸಂಕಲನ) ನಂಬಿರುವೆ ನಿನ್ನನ್ನೇ ಅಂತ ಅಂಗೈಯಲ್ಲಿ ಲಿಂಗವನ್ನು ಹಿಡಿದ…… ಎಳೆ ವಯಸ್ಸಿನ ಜಯದೇವಿ ತಾಯಿಯವರು ಸಂಸಾರದ ಕಷ್ಟಗಳ ಹೊರೆಹೊರಲಾಗದೆ ನೊಂದು ಆ ಲಿಂಗನನ್ನೆ ಬೇಡಿಕೊಳ್ಳುತ್ತಿದ್ದರು……. ನೋವಿನ ನೆರಳಲ್ಲಿ ದಿನಗಳನ್ನು ಎಣಿಸುತ್ತಿದ್ದ ಸೊಸೆಗೆ, ಅತ್ತೆಯ ಕಠೋರ ಮಾತುಗಳು ಮತ್ತು ದೌರ್ಜನ್ಯದ ನಡೆ ಬಲು ಹಿಂಸಿಸುತಿತ್ತು. ಪ್ರತಿದಿನವೂ ಅವರ ಮನಸ್ಸಿನಲ್ಲಿ ಬದುಕಿನ ಹೋರಾಟ—ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ.ಕಣ್ಣೀರನ್ನು ಒಳಗೇ ಹತ್ತಿಕ್ಕಿ, ಮನೆಯ ಗೋಡೆಗಳ ನಡುವೆ ತನ್ನ ನೋವನ್ನು ಹೂತು ಬದುಕುತ್ತಿದ್ದ ಜಯದೇವಿ ತಾಯಿಯವರು ಬಸವಣ್ಣನ ವಚನವನ್ನು ಯಾವಾಗಲೂ ಹೇಳುತ್ತಿದ್ದರಂತೆ, ತಂದೆ ನೀನು ತಾಯಿ ನೀನು ಬಂದು ನೀನು ಬಳಗ ನೀನು”, …….. ನನ್ನ ಸುಖ ದುಃಖವು ನಿನ್ನದೇ…. ಅನ್ನುವ ಅರ್ಪಣೆಯ ಭಾವ ಬೆರುರಲಾರಂಭಿಸಿತ್ತು. ಲಿಗಾಡೆಯವರ ಮನೆ ಜಯನಿಕೀತನ ತಾಯಿ ಸಂಗಪ್ಪನವರು ಹೇಳುವಂತೆ “ಸಹನೆಯಿಂದ ಇರು ಸಿದ್ದರಾಮ ಕಾಯುತ್ತಾನೆ ಅಂತ ಹೇಳುವ ಮಾತು ನೆನಪಿಟ್ಟುಕೊಂಡು ಜೀವನದ ದೋಣಿ ಸಾಗಿಸುತಿದಂತೆ…..sss ಜೀವನದಲ್ಲಿ ಸಂತಸದ ಅಲೆಗಳು ಅಪ್ಪಳಿಸಿದವು….ನೋವಿನ ಮೌನದ ಮಧ್ಯೆ ಒಂದು ದಿನ, ಅವರೊಳಗೆ ನಿಶ್ಶಬ್ದವಾಗಿ ಹೊಳೆಯುವ ಬೆಳಕು ಹುಟ್ಟಿತು…ತಾನು ಬಸೂರಿಯಾದ ಸುದ್ದಿ ಹೃದಯಕ್ಕೆ ತಂಪು ನೀಡಿತು…..!!!! ನೋವಿನ ಭಾರ ಕ್ಷಣ ಕಾಲದಲ್ಲಿ ಮಾಯವಾಗಿ ಹೋಯಿತೆನೊ ಅನ್ನಿಸಿತ್ತು.ಅವರಿಗೆ ಮೊದಲ ಬಾರಿಗೆ ತನ್ನದೇ ಆದ ಒಂದು ಆಂಶವು ಲೋಕಕ್ಕೆ ಬರುವದು… ತನಗಾಗಿಇನ್ನೊಂದು ಲೋಕವಿದೆ ಎನ್ನುವ ಭರವಸೆ ನೀಡತು, ಅವರು ಹೊಟ್ಟೆಗೆ ಕೈಯಿಟ್ಟು ಮೃದುವಾಗಿ ನಗುತ್ತಿದ್ದರು. ಆ ನಗು ಯಾರಿಗೂ ಕಾಣದಿದ್ದರೂ, ಅದು ಉತ್ಸವದ ಕ್ಷಣಗಳಾಗಿದ್ದವು.ಮಗುವಿನ ಸಣ್ಣ ಚಲನೆ-ಒಲನೆಯು….., ಅವರಿಗೆ ಮಾತಾಡುವ ಧೈರ್ಯ ಕಲಿಸಿತು— ಪ್ರತಿಯೊಂದು ಉಸಿರಾಟವೂ ಹೊಸ ಅರ್ಥ ಪಡೆದಿತು; ಪ್ರತಿಯೊಂದು ಕ್ಷಣವು ನಿರೀಕ್ಷೆಯ ಬೆಳಕಾಗಿ ಮೂಡಿತು.ನೋವಿನ ನಡುವೆ ಹುಟ್ಟಿದ ಆ ಆನಂದ ಕ್ಷಣಗಳು, ಅವರ ಬದುಕಿಗೆ ಅರ್ಥ ನೀಡಿದವು.ದೌರ್ಜನ್ಯದಿಂದ ಕಲುಷಿತವಾದ ಮನಸ್ಸಿನಲ್ಲಿ, ತಾಯ್ತನದ ಸ್ಪರ್ಶವು ಔಷಧಿಯಂತೆ ಕೆಲಸಮಾಡಿತು. ಆ ಮಗು ಅವರಿಗೆ ಶಕ್ತಿಯಾಯಿತು, ಭರವಸೆಯಾಯಿತು…!!! ಇನ್ನೇನು…. ನಿನ್ನೆವರೆಗೆ ಕಣ್ಣಲ್ಲಿ ಕಿಡಿ ತುಂಬಿಕೊಂಡು ಮಾತಾಡುತ್ತಿದ್ದ… .. “ನಿನಗೆ ಮಕ್ಕಳಾಗ ಯಾವ ಲಕ್ಷಣಗಳು ಕಾಣುವುದಿಲ್ಲ ನಾನು ಬೇರೆ ಮದುವೆ ಮಾಡ್ತೀನಿ ನನ್ನ ಮಗನಿಗೆ” ಅಂತ ಹೆದರಿಸುತ್ತಿದ್ದ …ಅತ್ತೆಯ ಹೃದಯದಲ್ಲಿ, ಒಮ್ಮಿಂದೊಮ್ಮೆಲೆ ಅನಿರೀಕ್ಷಿತವಾಗಿ ಸೊಸೆಯ ಬಸುರಿತನದ ಸಂತಸವು ಮೃದುತ್ವ ಮೂಡಿಸಿತು. ಸೊಸೆಯೊಳಗೆ ಜೀವ ಮೂಡಿದೆ ಎಂಬ ಸತ್ಯ ತಿಳಿದ ಕ್ಷಣ, ಆಕೆಯ ಕಠೋರತೆ ಕ್ಷಣಾರ್ಧದಲ್ಲಿ ಕರಗಿ ಹೋಗಿತ್ತು.ಕಾಡುತ್ತಿದ್ದ ಅಸಮಾಧಾನ ಮನಸ್ಸು, ತಾನೇ ಅರಿಯದಂತೆ ಮಗು ಬರುವ ನೆನಪುಗಳಲಿ ತೆಲಾಡಲಾರಂಭಿಸಿತು.ಸೊಸೆಯ ಹೊಟ್ಟೆಯ ಮೇಲೆ ಕೈ ಇಟ್ಟು ಇಟ್ಟು ನೋಡುವರಂತೆ ಅತ್ತೆ“ಇವಳೊಳಗೆ ನನ್ನ ಮನೆಯ ಭವಿಷ್ಯ ಉಸಿರಾಡುತ್ತಿದೆ” ಎಂಬ ಭಾವನೆಯು ಎದೆಗಿಳಿದು ಪ್ರೀತಿ ಉಕ್ಕಿ ಹರಿಯುತ್ತಿರೆ……ಬಿರುಸಾದ ಮಾತುಗಳ ಮೃದು ಎಚ್ಚರಿಕೆಯ ಮಾತು ಗಳಾದವು……!!!ಅತ್ತೆಗೆ..ಸೊಸೆಗೆ ಕಣ್ಣು ತಪ್ಪಿಸಿ ನೋಡಿದರೂ, ಆ ನೋಟದಲ್ಲಿ ಕಾಳಜಿ ಇತ್ತು. ಬಸೂರಿಯಾಗಿರುವ ಸೊಸೆಯಲ್ಲಿ ತಾನು ಹಗಲಿರಳು ಕಾಣಿಸುತ್ತಿರುವ ಕನಸಿನ ಪ್ರತಿಬಿಂಬ ಕಂಡಂತೆ ಆಯಿತು.ತಾನೇ ತಾಯಿ ಆದಷ್ಟು ಸಂತಸ ತಂದಿತ್ತು. ಕಠೋರತೆಯ ಹಿಂದೆ ಹೂತುಹೋದ ತಾಯಿಯ ಹೃದಯ, ಆ ಕ್ಷಣಗಳಲ್ಲಿ ನಿಧಾನವಾಗಿ ಹೊರಸುಸಲಾರಂಭಿಸಿತು.ನಿನ್ನೆವರೆಗೆ ನೋವಿನ ಮೂಲವಾಗಿದ್ದ ಅತ್ತೆಯೇ, ಆ ದಿನದಿಂದ ಸೊಸೆಗೆ ಧೈರ್ಯವಾಗಿ ನಿಂತಳು. ಬಸೂರಿಯಾದ ಆ ಸತ್ಯ, ಇಬ್ಬರ ನಡುವಿನ ಗೋಡೆಯನ್ನು ಕರಗಿಸಿ, ಪ್ರೀತಿಗೆ ದಾರಿ ಮಾಡಿಕೊಟ್ಟಿತು…..!!!! ಜಯದೇವಿ ತಾಯಿಯವರು ವಾಸವಾದ ಕೋಣೆ ಮಕ್ಕಳಿಗಾಗಿ ಪ್ರಯಾಗಬಾಯಿಯು ಕಂಡ ಕಂಡ ದೇವರಿಗೆ ಹರಕೆಯನ್ನು ಹೊತ್ತು ನೂರಾರು ದೇವರಗಳನ್ನು ಜಗಲಿಯ ಮೇಲೆ ಇಟ್ಟು ಪೂಜೆ ಮಾಡುತ್ತಿದ್ದರು. ತಿಳಿದು ತಿಳಿಯದೇ ಅನೇಕ ತರದ ಪೂಜೆಗಳಲ್ಲಿ ನಿರತರಾಗುತ್ತಿದ್ದರು. ಇಂದು ಅವರ ಕನಸು ನನಸಾಗಲಿರುವದೆಂದು ಅವರ ಸಂತಸಕ್ಕೆ ಮೇರೆ ಇರಲಿಲ್ಲ.ತಾಯಿ ಸಂಗವ್ವನವರು ಸಂತಸದಿಂದ ಮಗಳ ಬಯಕೆಯ ತರಹದ ಅಡಿಗೆ ಮಾಡಿ ಉಣಿಸಲಾರಂಭಿಸಿದರು. ಸರ್ವಸಾಮಾನ್ಯವಾಗಿ ಮಹಾರಾಷ್ಟ್ರದಲ್ಲಿ (ಚೊರ್ ಚೋಳಿ) ಕಳ್ಳ ಕುಬಸ ಮಾಡಿ….. ಮುಂದೆ ದೊಡ್ಡ ಕುಬಸದ ಕಾರ್ಯವನ್ನು ಮಾಡುವಂತೆ ಐದನೇ ತಿಂಗಳಿಗೆ ಸಿಮಂತದ ದೊಡ್ಡ ಕಾರ್ಯಕ್ರಮವನ್ನು ಮಾಡಿ ಎಲ್ಲ ಅತ್ತೆಯಂದಿರಿಗೆ ಭರ್ಜರಿಯಾದ ಪಿತಾಂಬರಾದ ಸೀರೆಯನ್ನು ಉಡಿಸಿ ಅವರನ್ನೆಲ್ಲ ಆನಂದ ಪಡಿಸಿದರು. ಮೊದಲ ಸಲ ಗರ್ಭಿಣಿ ಆದವರಿಗೆ ಅನೇಕ ತರದ ಸೀಮಂತದ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತದೆ. ಬೆಳದಿಂಗಳ ಕುಬಸು ,ಸೂರ್ಯೋದಯ ಕುಬಸು (ಜೋಪಾಳ) ಉಯ್ಯಾಲೆ ಕುಬಸ ,ನಾವೆಯ ಕುಬಸ, ಸಮುದ್ರ ತೀರದ ಕುಬುಸ , ಒಳಕುಬಸ ಹೊರ ಕುಬಸ,ದೇವರೆದುರಿನ ಕುಬಸ, ಸಣ್ಣ ಕುಬಸ ,ದೊಡ್ಡ ಕುಬಸ…. ಹೀಗೆ ಅನೇಕ ತರದ ಕುಬಸುಗಳನ್ನು ಮಾಡಲಾಗುವದು ಅವುಗಳನ್ನೆಲ್ಲವನ್ನು ಆಚರಿಸಲಾಯಿತು. ಇಲ್ಲಿ ಬೆಳದಿಂಗಳ ಕುಬಸ ಅಂದರೆ ಚಂದ್ರನ ದಿವ್ಯ ಬೆಳಕಿನಲ್ಲಿ ಆ ಬೆಳಕಿನ ಬಣ್ಣದ ಸೀರೆಯನ್ನು ಉಡಿಸಿ ಹೂವು ಮೂಡಿಸಿ ಆ ಬಿಳಿ ಬಣ್ಣದ ಸಿಹಿ ಊಟವನ್ನು ತಯಾರಾಸಿ ಉಣಬಡಿಸುವರು. ಇನ್ನು ಸೂರ್ಯೋದಯದ ಕುಬುಸ ಅಂದರೆ ಸೂರ್ಯನ ಬಣ್ಣದ ಸೀರೆ ಉಡಿಸಿ ಅದೇ ಬಣ್ಣದ ಹೂಗಳನ್ನು ಮೂಡಿಸಿ ಸೂರ್ಯನ ಕಿರಣಗಳ ಮಧ್ಯ ಕೂಡಿಸಿ,ಹೊಂಬಣ್ಣದ ಮೃಷ್ಟಾನ್ನ ಅಡುಗೆ ಮಾಡಿ ಉಣ ಬಡಿಸುವರು. “ಉಯ್ಯಾಲೆಯ ಕುಬುಸು”ಅಂದರೆ ಉಯ್ಯಾಲೆಗೆ ಹೂವುಗಳಿಂದ ಅಲಂಕರಿಸಿ ಬಣ್ಣ ಬಣ್ಣದ ಬಟ್ಟೆ ವಸ್ತ್ರಗಳನ್ನು ಉಡುಗೆ ತೊಡಿಸಿ ತರ ತರಹದ ಅಡುಗೆ ಉಣಬಡಿಸುವರು .ಇನ್ನು “ನಾವೆಯ ಕುಬಸು”ಎಂದರೆ ದೋಣಿಯಲಿ ಕುಡಿಸಿ ನೇರವೆರಿಸುವರು. ಶಿವಯೋಗಿ ಸಿದ್ದರಾಮೇಶ್ವರರು ಕಟ್ಟಿದ ಕೆರೆಯಲ್ಲಿ ದೋಣಿಗಳಲಿ ಕುಬುಸ ಹೂಡಲಾಯಿತು.ಶಿವಯೋಗಿ ಸಿದ್ದರಾಮೇಶ್ವರನ ದರ್ಶನಕ್ಕೆ ಬಂದ ಯಾತ್ರಿಕರು ಧೋಣಿಗಳಲ್ಲಿ ವಿಹರಿಸ ಬಹುದಾಗಿದೆ. ಈಗಲೂ ಭಕ್ತಾದಿಗಳು ದೋಣಿಯಲ್ಲಿ ಕುಳಿತು ಆನಂದಿಸುವ ವ್ಯವಸ್ಥೆ ಇದೆ.ಜಯದೇವಿ ತಾಯಿಯವರಿಗಾಗಿಯೇ ಒಂದು ದೊಡ್ಡ ದೋಣಿಯನ್ನು ಅಲಂಕರಿಸಿ ಕೆರೆಯ ಮಧ್ಯದಲ್ಲಿ ಸಿಮಂತದ ಆಚರಣೆ ಮಾಡಲಾಯಿತು.ದೇವರೆದುರಿನ ಕುಬಸು ಅಂದರೆ ವಿಶೇಷವಾಗಿ ಸಿದ್ದರಾಮನ ಗರ್ಭಗುಡಿಯ ಎದುರು ಕೂಡಿಸಿ ಅವನೆದುರಿಗೆ ಕುಬಸನ್ನು ಮಾಡಿ ಆನಂದಿಸಿದರು. ಅಲ್ಲಿ ಹತ್ತಿರದಲ್ಲಿರುವ ರೇವಣಸಿದ್ದೇಶ್ವರ ದೇವಾಲಯದಲ್ಲಿ ಕುಬಸಿನ ಕಾರ್ಯ ಹಮ್ಮಿಕೊಳ್ಳಲಾಗಿತ್ತು.ಅನೇಕಾಅನೇಕ ತರದ ಕುಬುಸಗಳನ್ನು ಮಾಡಿ ಕಣ್ಮನ ತುಂಬಿಕೊಂಡರು ಅತ್ತೆಯ ಮನೆಯವರು ಹಾಗೂ ತವರಿನವರು.ಇನ್ನೂ ಬಂಧು-ಬಳಗದವರು ಅಂದರೆ ದಿನಕ್ಕೆ ಮೂರು ನಾಲ್ಕು ಮನೆಯವರಿಂದ ಆಮಂತ್ರಣ ಬರುವುದು ಅಲ್ಲಿ ಎಲ್ಲಾ ಕಡೆಗೂ ಹೋಗಿ ಅವರ ಆದರ ಆಥಿತ್ಯವನ್ನು ಸ್ವೀಕರಿಸಿ ಊಟ ಮಾಡಲೇ ಬೇಕಿತ್ತು. ಆದರೆ ಜಯದೇವಿ ತಾಯಿಯವರು ಅತ್ಯಂತ ನಾಜಕಿನ ಆರೋಗ್ಯದ ಸ್ಥಿತಿ ಇದ್ದಿದ್ದ ಕಾರಣ ಹೆಚ್ಚು ಉಣ್ಣಲಾಗುತ್ತಿರಲಿಲ್ಲ.ಆದರೂ ಬಳಗದವರ ಪ್ರೀತಿಯ ಒತ್ತಾಯಕ್ಕೆ ಮಣಿದು ಸ್ವಲ್ಪ ಹೆಚ್ಚಿಗೆ ಊಟ ಮಾಡಬೇಕಾಗುತ್ತಿತ್ತು. ಹೀಗಾಗಿ ಬಹಳಷ್ಟು ಸೋತು ಸೋತು ಬರುತ್ತಿದ್ದರು. ಅಂತ ತಾಯಿಯವರು ಹೇಳುತ್ತಿದ್ದರು. ಅದು ಮುಂದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು ಅಂತ ಹೇಳುತ್ತಿದರು.“ಯಾರ ಒತ್ತಾಯಕ್ಕು ನಾವು ಊಟವನ್ನು ಹೆಚ್ಚಿಗೆ ಮಾಡಬಾರದು ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟನ್ನೇ ನಾವು ಸ್ವೀಕರಿಸಬೇಕು” ಮುಂದೆ ದೀರ್ಘಕಾಲದ ದುಷ್ಪರಿಣಾಮಗಳು ಶರೀರದ ಮೇಲೆ ಆಗುವ ಅನ್ನುತ್ತಿದ್ದರು. ಜಯದೇವಿ ತಾಯಿಯವರು ಪತಿ ಚೆನ್ನಮಲ್ಲಪ್ಪ ಲಿಗಾಡೆಯವ ಜೊತೆ ಅದೊಂದು ದಿನ ಮಗು ಭೂಮಿಗೆ ಬರುವ ಸಮಯವು ಬಂತ್ತು .ಅತ್ಯಂತ ಸುಂದರವಾದ ಮಲ್ಲಿಕಾರ್ಜುನನ್ನೇ ಹೊಲುವ ಮಗನನ್ನು ಜನ್ಮ ಕೊಟ್ಟರು. ಸೋನ್ನಲಿಗಿಯ ಸಿದ್ದರಾಮೇಶ್ವರರು ಆರಾಧಿಸುವ ದೈವ ಸಾಕ್ಷಾತ್ ಮಲ್ಲಿಕಾರ್ಜುನನೇ ಹುಟ್ಟಿ ಬಂದನು ಎನ್ನುವ ಸಂತಸದಲ್ಲಿ ಆ ಮಗುವಿಗೆ ಮಲ್ಲಿಕಾರ್ಜುನ ಅಂತನೇ ಹೆಸರಿಸಲಾಯಿತುಅತ್ತೆಯಂದಿರಗೆ ಎಲ್ಲಿಇಲ್ಲದ ಸಂತಸ … ಅದೆಷ್ಟೋ ದಿನಗಳಿಂದ ಮಕ್ಕಳಿಗಾಗಿ ಪರಿತಪಿಸುತ್ತಿರುವ ಲಿಗಾಡೆಯ ಮನೆತನದಲ್ಲಿ ಗಂಡು ಮಗ ಜನಿಸಿತು ಹೇಳತೀರದ ಆನಂದ ತುಂಬಿತುಳುತ್ತಿತ್ತು . ಆದರೆ ವಿಧಿಯ ಆಟವೇ ಬೇರೆಯಾಗಿತ್ತು…ಮಗು ಹುಟ್ಟಿದ ಸಲ್ಪ ದಿನದಲ್ಲಿ ತೀರಿಕೊಂಡಿತ್ತು. ಅದೇ ತಾನೇ ಸಂತಸ ಗೊಂಡಿರುವ ಎರಡು ಮನೆಗಳಲ್ಲಿ ಕತ್ತಲೆ ಆವರಿಸಿ ದಂತಾಗಿತ್ತು …… ಅತಿವ ನೋವುಉಂಟು ಮಾಡಿತು-ಬರಿದಾದ ಮಡಿಲು…… ಖಾಲಿತನವಷ್ಟೇ ಉಳದಿತ್ತು.ಸುಂದರವಾದ ಗಂಡು ಮಗುವಿನ ಉಸಿರಿನ ತಾಪ ಇನ್ನೂ ತಾಯಿಯ ಎದೆಯಲ್ಲೇ ಉಳಿದಿತ್ತು. ಮುದ್ದು ಮಗುವಿನ ಅಳು…..ನಿದ್ರೆಯಲ್ಲೂ ನಗುವ-ನಗೆ….ಇಗ ಆ ನಗು-ಅಳು ಮೌನವಾಗಿವೆ. ಹಾಸಿಗೆಯ ಮೇಲೆ ಮಡಚಿಟ್ಟ ಚಿಕ್ಕ ಚಿಕ್ಕ ಬಟ್ಟೆಗಳ ನೋಡಿ ತಾಯಿಯ ಕಣ್ಣಿರು ಮಳೆಯಾಗಿ ಹರಿದವು. ಅಳು ಕೇಳಿಸದೇ ಹೃದಯವೇ ಕಿತ್ತು ತಿನ್ನುತ್ತಿತ್ತು……ಒಮ್ಮೆ ಅವನನ್ನು ಹೊತ್ತ ಕೈಗಳು ಇದೀಗ ಖಾಲಿಯಾಗಿ ಗಾಳಿಯನ್ನು ಅಪ್ಪಿಕೊಳ್ಳುತ್ತಿವೆ……ಹಾಲು ತುಂಬಿದ ಎದೆ ಮಗುವಿಲ್ಲದ ನೋವಿನಿಂದ ಕಲ್ಲಾಗಿತ್ತು……. ಮನ ಕಲ್ಲಾಗಿತ್ತು….ssssss ಮುಂದೆ ತಾಯಿಯವರು ಇದನ್ನು ಬಹಳ ಅತ್ಯಂತ ಸುಂದರವಾಗಿ ವರ್ಣಿಸುತ್ತಾರೆ…… ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ!! ತಾಯಿಯ ಗರ್ಭದಲ್ಲಿ ಕೈಕಾಲುಗಳ ಕಟ್ಟಿಬಾವಿಯೊಳು ಈಸಲು ಇಳಿಸಿದರೆಂದು!! ಮುಸುಕಿನೊಳಗೆ ಕಟ್ಟಿ ಬಿಸಿ ಎಡಬಲದಲ್ಲಿ ಉಸಿರಿಸಲು ನಿನಗೆ ಬರಲಿಲ್ಲವೆಂದು !! ಬರಿ ಕಾಯದಿಂದಲಿ ಧರೆಮೇಲೆ ಬೀಳುತಮುಟ್ಟು ಹೇಸಿಕೆಯಲಿ ಹೊರಳಾಡಿದೆನೆಂದು!!ಹಿಂದಣ ಜನುಮದ ತಾಯಿ ತಂದೆಗಳಿಲ್ಲಬಂದು ಬಳಗ ಎನಗೆ ಇಂದಿಲ್ಲವೆಂದು !! ಮೊಲೆ ಹಾಲು ಉಣಿಸುತ ಬಲು ಪ್ರೀತಿಯಲಿತಾಯಿ ಜಾಲದೊಳಗೆ ನಿನಗೆ ಕೊಳ್ಳುವಳೆಂದು!! ಹಿಂದಣ ಸುಖ ದುಃಖ ಇಂದು-ನೆನ್ನೆ ನೆನೆದುಬಿಕ್ಕಿಬಿಕ್ಕಿ ಅಳುವಿ ಏನು ತಿಳಿಯದೆಂದು!! ಹಿಂದಣದ ಪರಿ ಮತ್ತೆ ಮುಂದೆ ಬರುವುದೆಂದು ಬಂಧನ ಇದು ಈಗ ಬೇಸರಗೊಂಡು !! ಒಂಟಿಗನಾಗಿ ಬಂದು ಹೊಂಟು ಹೋಗುವದೇ ನೆಂಟರು ಎನಗಿಲ್ಲ ಯಾರಿಲ್ಲವೆಂದು,ಹೋದೆಯಾ!!ಅಳುತ್ತಿದ್ಯಾ ಕಂದಾ ಅಳುವೆಯಾ? ನಿನ್ನ ಹಿಂದಣ ಜನುಮದ ಕೊಳೆ ತೊಳೆಯಲೆಂದು !!ಪಲ್ಲವಿ (ತಾರಕ ತಂಬೂರಿ-ಕವನ ಸಂಕಲನ)ಈ ಕವನದಿ ಅಡಕವಾದ ಸಾರಾಂಶ ಅತ್ಯಂತ ಗಂಭೀರವಾದ-ತಾತ್ವಿಕ ಹಾಗೂ ಕರುಣಾಜನಕವಾದ ಭಾವವನ್ನು ಹೊತ್ತುಕೊಂಡಿದೆ.ಈ ಕವನವು ಮಗು ಅಳುವಿಕೆಗೆ ಕಾರಣವಾಗಿರುವ ಅಜ್ಞಾತ -ನೋವಿನ ಹಿಂದೆ ಇರುವ ಹಿಂದಿನ ಜನ್ಮದ ಪಾಪ–ಪುಣ್ಯ, ಸುಖ–ದುಃಖ ಮತ್ತು ಜೀವನದ ಅನಿವಾರ್ಯ ಬಂಧನಗಳನ್ನು ಪ್ರಶ್ನಿಸುವ ತಾಯಿಯ ಅಂತರಾಳದ ಮಾತುಗಳಾಗಿ ರೂಪಗೊಂಡಿವೆ.ತಾಯಿ ಮಗುವಿನ ಅಳುವನ್ನು ಕೇವಲ ಹಸಿವು ಅಥವಾ ಅಸೌಖ್ಯವೆಂದು ನೋಡದೆ, “ನಿನ್ನ ಹಿಂದಿನ ಜನ್ಮದ ನೋವುಗಳು ಈಗ ಅಳುವಾಗಿ ಹೊರಹೊಮ್ಮುತ್ತಿವೆಯೇ?” ಎಂದು ಭಾವಿಸುತ್ತ ಗರ್ಭದಲ್ಲೇ ಅನುಭವಿಸುವ ಬಂಧನ,ಜನನದ ವೇಳೆ ಉಸಿರಾಟದ ಸಂಕಟ,ಬಟ್ಟೆಯಿಲ್ಲದ ದೇಹದೊಂದಿಗೆ ಈ ಲೋಕಕ್ಕೆ ಬೀಳುವ ಅಸಹಾಯಕತೆ,ಹೋದ ಜನುಮದಲ್ಲಿ ಇದ್ದ ತಾಯಿ–ತಂದೆ ಬಂಧು–ಬಳಗವಿಲ್ಲದ ಏಕಾಂತತೆ.. ಹಿಂದಣ ಜನುಮದ ಜೀವನ,ಮೊಲೆಹಾಲು, ತಾಯಿಯ ಪ್ರೀತಿ ಸಿಗುವುದೇ ಎಂಬ ಅನಿಶ್ಚಿತತೆ….. ಇವೆಲ್ಲವನ್ನು ಹಿಂದಿನ ಜನ್ಮದ ಕರ್ಮಫಲಗಳ ಪರಿಣಾಮವಾಗಿ “ಮನುಷ್ಯ ಒಂಟಿಯಾಗಿ ಬಂದು,ಒಂಟಿಯಾಗಿಯೇ ಹೋಗುವವನು”—ಎಂಬ ಜೀವನದ ಸತ್ಯವನ್ನು ತಿಳಿಸಲಾಗಿದೆ. ಬಂಧುಗಳು, ಸಂಬಂಧಗಳು ಎಲ್ಲವೂ ಕ್ಷಣಿಕವೆಂಬ ತತ್ವವನ್ನೂ ಈ ಕವನ ಒತ್ತಿಹೇಳುತ್ತದೆ. ಅಂತಿಮವಾಗಿ ಮಾನವ ಜೀವನವು ಕರ್ಮಬಂಧನದಿಂದ ನಿಯಂತ್ರಿತ, ನೋವು ಸಹಜ, ಅಳುವು ಅಜ್ಞಾನದಿಂದ ಹೊರಡುವ ಪ್ರತಿಕ್ರಿಯೆ ಎಂಬ ತಾತ್ವಿಕ ಸಂದೇಶವನ್ನು ಸಾರುತ್ತದೆ. ಒಟ್ಟಿನಲ್ಲಿ ಮಗುವಿನ ಅಳುವಿನ ಮೂಲಕ ಮಾನವ ಜನ್ಮದ ನೋವು, ಕರ್ಮಸಿದ್ಧಾಂತ ಮತ್ತು ಬದುಕಿನ ಏಕಾಂತ ಸತ್ಯವನ್ನು ಪ್ರಶ್ನಿಸುವ ತಾತ್ವಿಕತೆ ಭರಿತವಾದ ಆಧ್ಯಾತ್ಮಿಕ ಮೆರಗು ಈ ಕವನಕ್ಕಿದೆ. ಹೀಗೆ ಗಾಢವಾದ ನೋವನ್ನು ಹೊತ್ತ ತಾಯಿ, ಕೈಯಲ್ಲಿ ಆಡುವ ಚೊಚ್ಚಲ ಮಗನನ್ನು ಕಳೆದುಕೊಂಡು ಬರಿ ಕೈಯಿಂದ ತವರು ಮನೆಯಿಂದ ಗಂಡನ ಮನೆಗೆ ಹೋಗುವ ಹೃದಯಾಂತಕ ಸನ್ನಿವೇಶ ಮುಂದಿನವಾರ ನೋಡೋಣ……….( ಮುಂದುವರೆಯುವುದು) ಸವಿತಾ ದೇಶಮುಖ ಡಾ. ಜಯದೇವಿತಾಯಿ ಲಿಗಾಡೆಯವರ ಮೊಮ್ಮಗಳು, ತಂದೆ-ಡಾ. ಶಂಕರಣ್ಣ ಮೂಗಿ (ಸೋವಿಯತ್ ಲ್ಯಾಂಡ್
ಧಾರಾವಾಹಿ ಸಂಗಾತಿ-110 ಒಬ್ಬ ಅಮ್ಮನಕಥೆ ರುಕ್ಮಿಣಿ ನಾಯರ್ ಬದಲಾದ ವಾಸ್ತವ್ಯ ರೈಟರ್ ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು. ಸುಮತಿ ಟೀಚರ್ ಮತ್ತು ಮಕ್ಕಳು ತೋಟದ ದೊಡ್ಡ ಬಂಗಲೆಯ ಹತ್ತಿರವಿರುವ ಮನೆಯ ಕಡೆಗೆ ಪ್ರಯಾಣ ಬೆಳೆಸಲು ಬೇಕಾದ ಸೌಕರ್ಯವನ್ನು ಮಾಡಿಕೊಟ್ಟರು. ತೋಟದ ಲಾರಿಯನ್ನು ತರಿಸಿ, ಕೆಲಸಗಾರರ ಸಹಾಯದಿಂದ ಸುಮತಿಯ ಬಳಿಯಿದ್ದ ಅಲ್ಪಸ್ವಲ್ಪ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ಸುಮತಿ ವಾಸಿಸಬೇಕಾದ ಮನೆಯ ಬಳಿಗೆ ಕಳುಹಿಸಿಕೊಟ್ಟರು. ಸಾಹುಕಾರರು ಸೂಚಿಸಿದ ಪರಿಹಾರದದಂತೆ ಸುಮತಿ ಮತ್ತು ಮಕ್ಕಳು ದೊಡ್ಡ ತೋಟದ ಬಂಗಲೆ ಹತ್ತಿರ ಇರುವ ಮನೆಯಲ್ಲಿ ಹೊಸದಾಗಿ ವಾಸ್ತವ್ಯ ಹೂಡಿದರು. ಅವರಿಗೆ ಚಿರಪರಿಚಿತವಾದ ಸ್ಥಳವಾಗಿದ್ದ ಕಾರಣ ಅಂತಹಾ ದೊಡ್ಡ ವ್ಯತ್ಯಾಸವೇನೂ ಅನ್ನಿಸಲಿಲ್ಲ. ಆದರೂ ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇರಲಿಲ್ಲ. ಸುಮತಿ ಪ್ರತಿದಿನವೂ ನಡೆದು ಅದೇ ಶಾಲೆಗೆ ಹೋಗುತ್ತಿದ್ದಳು. ಮಕ್ಕಳಿಬ್ಬರು ಬಿಡುವಿರುವಾಗ ಅಮ್ಮನ ಜೊತೆ ಶಾಲೆಯ ಬಳಿ ತೆರಳುತ್ತಿದ್ದರು. ನವೋದಯ ಶಾಲೆಯಲ್ಲಿ ಓದುತ್ತಿದ್ದ ಕೊನೆಯ ಮಗಳು ಈ ಬಾರಿಯೂ ರಜಕ್ಕೆ ಬಂದಳು. ಹೊಸ ವಾಸ್ತವ್ಯ ಅವಳಿಗೂ ಖುಷಿ ಕೊಟ್ಟಿತು. ಆದರೆ ಮೂವರಿಗೂ ಮೊದಲಿನಂತೆ ಸ್ವಚ್ಛಂದವಾಗಿ ತೋಟವನ್ನು ಸುತ್ತಲು ಸಾಧ್ಯವಿರಲಿಲ್ಲ. ಅಲ್ಲಿನ ಪರಿಸರವೇ ಬೇರೆ ಇಲ್ಲಿನ ಪರಿಸರವೇ ಬೇರೆ. ಎರಡನೇ ಮಗಳು ದ್ವಿತೀಯ ಪಿಯುಸಿಯಲ್ಲಿ, ಮೂರನೇ ಮಗಳು ಹತ್ತನೇ ತರಗತಿಯಲ್ಲಿ ಹಾಗೂ ಮೂರನೇ ಮಗಳು ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅವರಿಗೆ ಅಭ್ಯಾಸ ಮಾಡಲು ಹೆಚ್ಚು ಸಮಯ ಬೇಕಾಗಿರುತ್ತಿತ್ತು. ಮಕ್ಕಳು ಮೂವರೂ ಓದಿನಲ್ಲಿ ಬಹಳ ಚುರುಕಾಗಿದ್ದುದರಿಂದ ಸುಮತಿಗೆ ಅವರ ವ್ಯಾಸಂಗದ ಬಗ್ಗೆ ಯಾವುದೇ ಚಿಂತೆ ಇರಲಿಲ್ಲ. ಬದಲಿಗೆ ತನ್ನ ಮಕ್ಕಳು ಇನ್ನೇನು ಬೆಳೆದು ದೊಡ್ಡವರಾಗಿದ್ದಾರೆ. ಎಲ್ಲರೂ ಸಾಧ್ಯವಾದಷ್ಟು ವಿದ್ಯಾಭ್ಯಾಸವನ್ನು ಮುಗಿಸಿ ಒಳ್ಳೆಯ ಕೆಲಸಗಳಿಗೆ ಸೇರುತ್ತಾರೆ ಎಂಬ ಭರವಸೆ ಇತ್ತು. ಇಬ್ಬರೂ ಹೆಣ್ಣು ಮಕ್ಕಳು ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಓದುತ್ತಿದ್ದ ಕಾರಣ ಅವರಿಗೆ ಹೆಚ್ಚಿನ ಫೀಸ್ ಹಣವನ್ನು ಭರಿಸುವಂತಿರಲಿಲ್ಲ. ಹಾಗೂ ಇಬ್ಬರೂ ಪಠ್ಯ ವಿಷಯಗಳಲ್ಲಿ ಉತ್ತಮರಾಗಿದ್ದ ಕಾರಣ ಸ್ಪೈಸಸ್ ಬೋರ್ಡ್ ನಿಂದ ಅವರಿಬ್ಬರಿಗೂ ಪ್ರತಿ ವರ್ಷವೂ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಮೂರನೇ ಮಗಳು ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾರಣ ಅವಳ ಎಲ್ಲಾ ಖರ್ಚುಗಳನ್ನು ಸರ್ಕಾರವೇ ಭರಿಸುತ್ತಿತ್ತು. ಕಡುಬಡತನದ ಜೀವನವಾದರೂ ಅಮ್ಮ ಮಕ್ಕಳು ಸಂತೋಷದಿಂದಲೇ ಬದುಕುತ್ತಿದ್ದರು. ಈಗೀಗ ಸುಮತಿಗೆ ಕೇರಳದ ತನ್ನ ಮನೆ ಅಪ್ಪ ಅಮ್ಮ, ಅಕ್ಕ, ತಮ್ಮಂದಿರು, ತಂಗಿ ಹಾಗೂ ಸಂಬಂಧಿಕರ ನೆನಪು ಬಹಳವಾಗಿ ಕಾಡುತ್ತಿತ್ತು. ಅಕ್ಕ ಸಕಲೇಶಪುರದಲ್ಲಿ ಇರುವುದರಿಂದ ಗುರುವಾರ ಸಂತೆಗೆ ಹೋದಾಗ ಕೆಲವೊಮ್ಮೆ ಅಕ್ಕನ ಮನೆಗೆ ಹೋಗಿ ಅಕ್ಕನನ್ನು ಕಂಡು ಮಾತನಾಡಿಸಿ ಬರುತ್ತಿದ್ದಳು. ಒಮ್ಮೊಮ್ಮೆ ಸುಮತಿ ಮತ್ತು ಮಕ್ಕಳು ಅವರ ಮನೆಯಲ್ಲಿ ಒಂದು ರಾತ್ರಿ ಕಳೆದು ಮಾರನೇ ದಿನ ತಮ್ಮ ಮನೆಯ ಕಡೆಗೆ ಹೊರಡುತ್ತಿದ್ದರು. ದೊಡ್ಡಮ್ಮನ ಮಕ್ಕಳಲ್ಲಿ ಕಿರಿಯ ಅಣ್ಣ ಎಂದರೆ ಈ ನಾಲ್ಕು ಹೆಣ್ಣು ಮಕ್ಕಳಿಗೆ ಅಚ್ಚುಮೆಚ್ಚು. ಚಿಕ್ಕಮ್ಮನ ಮಕ್ಕಳನ್ನು ತನ್ನ ಸ್ವಂತ ತಂಗಿಯರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಆತ. ಅವರೆಲ್ಲರೂ ಮನೆಗೆ ಬಂದಾಗ ಹತ್ತಿರದಲ್ಲಿಯೇ ಇರುವ ಥಿಯೇಟರ್ ಗೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸುತಿದ್ದ. ಸುಮತಿಯ ತಮ್ಮಂದಿರು ಇಬ್ಬರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರು. ಹಿರಿಯ ತಮ್ಮ ಹಾಸನದಲ್ಲಿ ವಾಸ್ತವ್ಯವಿರುವಾಗ ಅಪರೂಪಕ್ಕೊಮ್ಮೆ ಅಲ್ಲಿಗೆ ಮಕ್ಕಳೊಂದಿಗೆ ಹೋಗಿ ಬರುತ್ತಿದ್ದಳು. ಈಗ ಅವನು ವರ್ಗಾವಣೆಯಾಗಿ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ ಮೇಲೆ ಅವನನ್ನು ಕಾಣುವುದು ಸಾಧ್ಯವಿರಲಿಲ್ಲ. ಏಕೆಂದರೆ ಬೆಂಗಳೂರು ಬಹಳ ದೂರವಿದ್ದುದರಿಂದ ಹಾಗೂ ಅವಳಲ್ಲಿ ಅಷ್ಟೊಂದು ಹಣವಿರದ ಕಾರಣ ಅಲ್ಲಿಗೆ ಹೋಗಿ ತಮ್ಮನನ್ನು ಭೇಟಿ ಮಾಡಲು ಸಾಧ್ಯವಿರಲಿಲ್ಲ. ಚಿಕ್ಕ ತಮ್ಮನೂ ಕೂಡ ಗೊರೂರಿನಿಂದ ಕುಶಾಲನಗರದ ಹತ್ತಿರವಿರುವ ಪಿರಿಯಾಪಟ್ಟಣದಲ್ಲಿ ಸ್ವಂತ ಮನೆ ಕಟ್ಟಿಕೊಂಡು ವಾಸವಿದ್ದ. ಅಮ್ಮ ತೀರಿ ಹೋದ ನಂತರ ಸುಮತಿ ಎಂದಿಗೂ ಕಿರಿಯ ತಮ್ಮನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಹಿರಿಯ ತಮ್ಮನಿಂದ ಮತ್ತು ಅಕ್ಕನಿಂದ ಅವನ ಯೋಗ ಕ್ಷೇಮದ ವಿಚಾರಗಳು ತಿಳಿಯುತ್ತಿದ್ದವೇ ವಿನಹ ಅವಳೆಂದೂ ಅವನ ಮನೆಗೆ ಹೋಗಿರಲಿಲ್ಲ. ಅವನಿಗೆ ಮದುವೆಯಾಗಿ ನಾಲ್ಕು ಮಕ್ಕಳಿರುವ ವಿಚಾರವು ಅಕ್ಕನಿಂದ ಸುಮತಿಗೆ ತಿಳಿದಿತ್ತು. ತನ್ನ ಕಷ್ಟಕರವಾದ ಜೀವನದ ಬಗ್ಗೆ ಅವನಲ್ಲಿ ಹೇಳಿಕೊಳ್ಳಲು ಸುಮತಿಗೆ ಮನಸ್ಸಿರಲಿಲ್ಲ. ಅದೇಕೋ ಇವರಿಬ್ಬರ ಭೇಟಿ ಸಾಧ್ಯವಾಗಲೇ ಇಲ್ಲ. ಕಾಲವು ಎಲ್ಲವನ್ನೂ ಬದಲು ಮಾಡಿತ್ತು. ಸುಮತಿಗೆ ಕಿರಿಯ ತಮ್ಮನನ್ನು ನೋಡಲೇಬೇಕು ಎಂಬ ಹಂಬಲವೂ ಹೆಚ್ಚಾಗಿತ್ತು. ಆದರೆ ಮಕ್ಕಳನ್ನು ಕರೆದುಕೊಂಡು ತಾನು ಅವನ ಮನೆಗೆ ಹೋಗುವ ಅವಕಾಶವೇ ಇರಲಿಲ್ಲ. ಏಕೆಂದರೆ ಅವಳಿಗೆ ಬರುವ ಸಂಬಳದಲ್ಲಿ ಹೊಟ್ಟೆ ಹೊರೆಯುವುದೇ ಕಷ್ಟಕರವಾಗಿತ್ತು. ದೊಡ್ಡ ತೋಟದ ಮನೆಯಲ್ಲಿ ವಾಸ್ತವ್ಯ ಹೂಡಿದ ಮೇಲೆ ಮಲಯಾಳಿ ಡ್ರೈವರ್ ಕುಟುಂಬದೊಂದಿಗೆ ಸುಮತಿ ಹಾಗೂ ಮಕ್ಕಳು ಹೆಚ್ಚಾಗಿ ಬೆರೆಯಲು ಅವಕಾಶವಾಯಿತು. ಸುಮತಿಯ ಕಷ್ಟ ಸುಖಗಳನ್ನು ಡ್ರೈವರ್ ಹಾಗೂ ಆತನ ಪತ್ನಿ ಕೇಳಿ ತಿಳಿದುಕೊಳ್ಳುತ್ತಿದ್ದರು. ಅವರು ಪಡುತ್ತಿರುವ ಕಷ್ಟವನ್ನು ಕಂಡು ಮರುಗಿ ಸಾಹುಕಾರರ (ಪತ್ನಿ) ಅಮ್ಮ ನಲ್ಲಿ ಡ್ರೈವರ್ ಹೇಳಿಕೊಳ್ಳುತ್ತಿದ್ದರು. ಸುಮತಿಯ ಕಷ್ಟವನ್ನು ಅರಿತ ಅಮ್ಮ ಸುಮತಿಯನ್ನು ಕರೆದು ಬಂಗಲಗೆ ಸೇರಿಕೊಂಡಂತೆ ಇದ್ದ ಸಹಕಾರಿ ಅಂಗಡಿಯಿಂದ ತಿಂಗಳಿಗೆ ಒಂದಿಷ್ಟು ರೇಷನ್ ಕೊಡಿಸುವ ವ್ಯವಸ್ಥೆ ಮಾಡಿದರು. ಹಳೆಯದಾದರೂ ಹೊಸದರಂತೆ ಕಾಣುವ ಸೀರೆಗಳನ್ನು ಹಾಗೂ ತನ್ನ ಮಕ್ಕಳ ಬಟ್ಟೆಗಳನ್ನು ಸುಮತಿಯ ಮಕ್ಕಳಿಗೆ ಕೊಡುತ್ತಿದ್ದರು. ಹಾಗಾಗಿ ಬಟ್ಟೆಬರೆಯ ಬಗ್ಗೆ ಚಿಂತಿಸುವ ಅಗತ್ಯ ಸುಮತಿಗೆ ಇರಲಿಲ್ಲ. ಸುಮತಿಯ ಮಕ್ಕಳು ಬುದ್ಧಿವಂತರು ಎನ್ನುವ ವಿಷಯ ಅಮ್ಮನಿಗೆ ತಿಳಿದಿತ್ತು. ಹಾಗಾಗಿ ಆ ಮಕ್ಕಳ ಬಗ್ಗೆ ಅಮ್ಮನಿಗೆ ಕಾಳಜಿ ಇತ್ತು. ಸುಮತಿಯ ಮಕ್ಕಳಿಬ್ಬರೂ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿದರು. ಸುಮತಿ ಈಗೀಗ ಮೊದಲಿಗಿಂತ ನಿತ್ರಾಣಗೊಳ್ಳುತ್ತಿದ್ದಳು. ಗಾಳಿ,ಮಳೆ, ಬಿಸಿಲು ಎನ್ನದೇ ಸುಮಾರು ದೂರವಿದ್ದ ಶಾಲೆಗೆ ಕಾಲ್ನಡಿಗೆಯಲ್ಲೇ ಹೋಗಿ ಬರುತ್ತಿದ್ದಳು. ಈಗಿಗ ಅವಳಿಗೆ ಹೆಚ್ಚು ಆಯಾಸವಾಗುತ್ತಿತ್ತು. ಆದರೂ ಏನೂ ಮಾಡುವಂತಿರಲಿಲ್ಲ. ಮಕ್ಕಳ ಓದು ಮುಗಿದು ಒಳ್ಳೆಯ ಕೆಲಸ ದೊರಕುವವರೆಗೂ ತಾನು ಹೇಗಾದರೂ ದುಡಿಯಲೇಬೇಕಿತ್ತು.
ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ”
ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ” ಅರಿತು ಬೆರೆತು ನೀ…ಬಾಳಲೆಷ್ಟು ಹರುಷವು ಮನುಜಸಮಾಜ ಕಂಟಕ ಆಗದಿರು ಮನುಜ,?! ಹೃದಯದೊಳು…ಅವಿತಿರುವ ಮಲಿನ ಕಲ್ಮಶಗಳತೊರೆಯ ಬಾರದೇಕೆ ನೀ ಮನುಜ,?! ಜಾತಿ ಧರ್ಮಗಳು…ಚೌಕಟ್ಟಿನೊಳಗಿರಲು ಚೆಂದಮಾನವನಾಗಿ ಬದುಕು ಮನುಜ,! ಧರ್ಮ ಸಂಘರ್ಷಕ್ಕಲ್ಲ…ಶಾಂತಿಯೇ ಧರ್ಮಗಳ ಸಾರಪ್ರೀತಿಯೊಂದೇ ಮೋಕ್ಷಕ್ಕೆ ದಾರಿ ನೇರ.! ಹಮೀದ್ ಹಸನ್ ಮಾಡೂರು.
ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ” Read Post »
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ “ಬಿಡದ ನಂಟು”
ಕಾವ್ಯ ಸಂಗಾತಿ ಡಾ ಸಾವಿತ್ರಿ ಕಮಲಾಪೂರ “ಬಿಡದ ನಂಟು” ನನಗೂ ನಿನಗೂ ಎಷ್ಟೊಂದು ನಂಟುಬಿಡದ ಬಾಂಧವ್ಯಕ್ಕೆ ಬೆಸೆದ ಗಂಟುನನಗೀಗ ವಯಸ್ಸು ಐವತ್ತುಅರವತ್ತಕ್ಕೆ ಅರಳು ಮರಳುಆಗಿಲ್ಲ ಬಿಡುತೆರೆದ ಕಂಗಳಲ್ಲಿ ದಿನವೂ ಓದುವೆಅದು ಬಿಡುವು ಇದ್ದಾಗನೀನೋ ಮೌನಎಲ್ಲವನ್ನೂ ಓದಿ ಅರ್ಥೈಸಿಕೊಂಡುಸಾಗಬೇಕು ಹೊತ್ತಿಗೆಅದೆಷ್ಟು ನಿನಗೆ ಕುತೂಹಲನನಗೂ ಕೂಡಾಕ್ಷಣ ಹೊತ್ತು ಕೈಯಲ್ಲಿ ಅಗಲಿದರೆ ಸಾಕುಹುಡುಕಾಟ ಜೀವ ಹೋದಂತೆಭಯ ಬೇರೆಎಲ್ಲವನ್ನೂ ಹಿಡಿದಿಟ್ಟಿರುವಹೆಸರು ಅವರ ನಂಬರುಯಾವಾಗಲೋ ಒಮ್ಮೆ ಅಗಲಿಮರೆಯಾಗಿದ್ದೆ ನೋಡುನನ್ನ ಫಜಿತಿಕರೆಗಳ ಮೇಲೆ ಕರೆಎಲ್ಲಿರ್ರಿ ?ಮೆಡಂಏನ್ ಇದು ?ಎತ್ತುದೇ ಇಲ್ಲ ನೋಡ್ರಿ !ಮೆಸೆಜ್ ನೋಡಲಾಕ್ ಆಗುದಿಲ್ಲ ಎನ್ರಿ? ನಾವ್ ನಿಮಗ್ ಕರೆ ಮಾಡಿತಿಳಿಸಬೇಕ್ ಎನ್ರಿ ?ಒಂಚೂರು ನಿಮಗ್ ಬುದ್ಧಿ ಇಲ್ಲ ಏನ್ರೀ ?ನೋಡಿ ಅದೆಷ್ಟು ನನಗೂ ನಿನಗೂ ಬಿಟ್ಟಿರಲಾರದ ನಂಟುಬೆಸೆದುಕೊಂಡು ಬಿಟ್ಟಿದೆ ಅಂಟುನಮ್ಮ ಮನಿಯಾಗ ನಮ್ಮ ಅವ್ವ ಒಂದು ಸಲ ಬೈದುಕೊಳ್ಳಾಗ ಗಂಟು ಹಾಕೋಂಡ್ ಬಿಡುಇಪ್ಪತ್ನಾಲ್ಕು ತಾಸು ಬರೀ ಕೈಯ್ಯಾಗ ಬೇಕು ನಿನಗಜನರಾದರೂ ಏನಾಂದರು? ಅದಕ್ಕಂತಲೇಹೆಸರ್ ಬಂದಿರಬೇಕ್ ನೋಡ್ರಿಜಂಗಮವಾಣಿಬಾಳ್ ಶ್ಯಾನಾಕಿರೀ ನಮ್ಮ ಜಂಗಮವಾಣಿತಡ್ರಿ ಮತ್ ಒಂದು ಕರೆ ಬಂತುಎತ್ತ ಲಿಲ್ಲ ಅಂದ್ರ ಕಾಲ ಕೆದರಿಜಗಳಕ್ಕ ಬಂದಾರುಹುಷಾರ್ ರೀ !ನನ್ನಂಗ ಆಗಬ್ಯಾಡ್ರಿಬುದ್ಧಿ ಐತೋ ಇಲ್ಲೋ ಅಂತಾರಿ.. ಡಾ ಸಾವಿತ್ರಿ ಕಮಲಾಪೂರ
ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ “ಬಿಡದ ನಂಟು” Read Post »
“ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಸಣ್ಣಕಥೆ ಪೃಥ್ವಿರಾಜ್ ಟಿ ಬಿ
ಕಥಾ ಸಂಗಾತಿ ಪೃಥ್ವಿರಾಜ್ ಟಿ ಬಿ “ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಗ್ರಾಮದ ಅಂಚಿನಲ್ಲಿ ನಿಂತಿದ್ದ ಆ ಹಳೆಯ ಬಂಗಲೆ ಯಾರಿಗೂ ಸೇರಿದಂತೆ ಕಾಣುತ್ತಿರಲಿಲ್ಲ. ಒಮ್ಮೆ ಅದು ಭವ್ಯವಾಗಿತ್ತು ಎಂದು ಹೇಳಲು ಅದರ ಎತ್ತರದ ಗೋಡೆಗಳು, ದೊಡ್ಡ ಕಬ್ಬಿಣದ ಗೇಟು, ಅರ್ಧ ಕುಸಿದ ಬಾಲ್ಕನಿ ಸಾಕ್ಷಿಯಾಗಿದ್ದವು. ಈಗ ಅದರ ಗೋಡೆಗಳ ಮೇಲೆ ಹಚ್ಚಿದ ಬಿಳಿ ಬಣ್ಣ ಮಂಕಾಗಿ ಬೂದು ಬಣ್ಣದಂತೆ ಕಾಣುತ್ತಿತ್ತು. ಕಿಟಕಿಗಳಲ್ಲಿ ಒಡೆದ ಗಾಜುಗಳು ಗಾಳಿ ಬೀಸಿದಾಗ ವಿಚಿತ್ರ ಶಬ್ದ ಮಾಡುತ್ತವೆ. ರಾತ್ರಿಯಾದರೆ ಆ ಬಂಗಲೆಯಿಂದ ಯಾರೋ ನರಳಾಡುವಂತೆ ಕೇಳಿಸುವ ಶಬ್ದ ಊರಿನ ಮಕ್ಕಳಿಗೆ ನಿದ್ರೆಯೇ ಬರದಂತೆ ಮಾಡುತ್ತಿತ್ತು. ಬಂಗಲೆಯ ಪಕ್ಕದಲ್ಲೇ ಒಂದು ವಿಶಾಲವಾದ ಆಟದ ಮೈದಾನ. ಪ್ರತಿ ಸಂಜೆ ಅಲ್ಲಿ ಹುಡುಗರ ಗುಂಪು ಕ್ರಿಕೆಟ್ ಆಡುತ್ತಿರುತ್ತದೆ. ನಗುವಿನ ಕೂಗು, ಚೆಂಡಿನ ಸದ್ದು, ಸೋಲು–ಗೆಲುವಿನ ಜಗಳ—ಎಲ್ಲವೂ ಆ ಮೈದಾನದ ಜೀವಾಳ. ಆದರೆ ಆಟ ಆಡುತ್ತಾ ಇದ್ದರೂ ಯಾರೂ ಆ ಬಂಗಲೆಯ ಕಡೆಗೆ ನೋಡುವ ಧೈರ್ಯ ಮಾಡುತ್ತಿರಲಿಲ್ಲ. “ಅದು ಭೂತ ಬಂಗಲೆ”, “ಅಲ್ಲಿ ಆತ್ಮ ಇದೆ”, “ಹೋದವರು ಮರಳಿ ಬಂದಿಲ್ಲ” ಎಂಬ ಮಾತುಗಳು ಮಕ್ಕಳ ನಡುವೆ ಹರಡಿದ್ದವು. ಆ ಹುಡುಗರಲ್ಲಿ ಒಬ್ಬನ ಹೆಸರು ಕಾರ್ತಿಕ್. ಅವನು ಇತರರಿಗಿಂತ ಸ್ವಲ್ಪ ಧೈರ್ಯಶಾಲಿ, ಆದರೆ ಒಳಗೆ ತುಂಬಾ ಸಂವೇದನಾಶೀಲ ಹುಡುಗ. ಅವನ ಕಣ್ಣುಗಳಲ್ಲಿ ಸದಾ ಕುತೂಹಲದ ಹೊಳಪು. ಆ ದಿನ ಸಂಜೆ ಆಟ ನಡೆಯುತ್ತಿತ್ತು. ಕಾರ್ತಿಕ್‌ನ ಸ್ನೇಹಿತ ರವಿ ದೊಡ್ಡ ಹೊಡೆತ ಹೊಡೆದ. ಬಾಲ್ ನೇರವಾಗಿ ಬಂಗಲೆಯ ಹತ್ತಿರ ಹೋಗಿ ಬಿದ್ದಿತು. ಎಲ್ಲ ಹುಡುಗರು ಒಬ್ಬರನ್ನೊಬ್ಬರು ನೋಡಿಕೊಂಡರು.“ಯಾರು ಹೋಗ್ತೀರಾ?” ಎಂದು ಒಬ್ಬನು ಕೇಳಿದ.ಕ್ಷಣಕಾಲ ಮೌನ. ಯಾರೂ ಮುಂದೆ ಬರಲಿಲ್ಲ. ಕೊನೆಗೆ ಕಾರ್ತಿಕ್ ಧೈರ್ಯ ಮಾಡಿ, “ನಾನು ಹೋಗ್ತೀನಿ” ಎಂದು ಹೇಳಿದ.ಅವನು ನಿಧಾನವಾಗಿ ಬಂಗಲೆಯ ಕಡೆಗೆ ನಡೆದು ಹೋದ. ಗೇಟಿನ ಹತ್ತಿರ ಬಂದಾಗ ತಣ್ಣನೆಯ ಗಾಳಿ ಅವನ ಮೈಮೇಲೆ ಹರಿದಂತೆ ಆಯಿತು. ಒಣ ಎಲೆಗಳು ಅವನ ಕಾಲಿಗೆ ಸಪ್ಪಳಿಸಿದವು. ಆ ಕ್ಷಣಕ್ಕೆ ಅವನಿಗೆ ಯಾರೋ ಹಿಂದಿನಿಂದ ಉಸಿರಾಡುತ್ತಿರುವಂತೆ ಭಾಸವಾಯಿತು. ಹೃದಯ ಜೋರಾಗಿ ಬಡಿದಿತು. “ಇದು ಕೇವಲ ಕಲ್ಪನೆ” ಎಂದು ತನ್ನನ್ನು ತಾನೇ ಸಮಾಧಾನ ಮಾಡಿಕೊಂಡು ಬಾಲ್ ತೆಗೆದುಕೊಳ್ಳಲು ಕೈ ಚಾಚಿದ.ಅಷ್ಟರಲ್ಲಿ ಒಳಗಿನಿಂದ ಯಾವುದೋ ನರಳಾಟದ ಶಬ್ದ—ಮಂದವಾದ, ನೋವಿನಿಂದ ತುಂಬಿದ ಶಬ್ದ—ಅವನ ಕಿವಿಗೆ ಬಿತ್ತು. ಕಾರ್ತಿಕ್ ಬೆಚ್ಚಿಬಿದ್ದ. ಕೈಯಲ್ಲಿ ಬಾಲ್ ಹಿಡಿದು ಓಡಿದ. ಸ್ನೇಹಿತರ ಬಳಿ ಬಂದು ತಲೆಸುತ್ತಿ ಕುಳಿತ.“ಏನಾಯ್ತು?” ಎಂದು ಎಲ್ಲರೂ ಕೇಳಿದರು.ಕಾರ್ತಿಕ್ ಶಬ್ದ ಕೇಳಿದ್ದನ್ನು ಹೇಳಿದ. ಹುಡುಗರ ಮುಖದಲ್ಲಿ ಭಯ ಮೂಡಿತು. ಆ ದಿನದ ಆಟ ಅಲ್ಲಿಯೇ ಮುಗಿಯಿತು. ಆ ದಿನದಿಂದ ಕಾರ್ತಿಕ್ ಮನಸ್ಸು ಅಶಾಂತ. ರಾತ್ರಿ ಮಲಗಿದಾಗಲೂ ಅವನ ಕಿವಿಗೆ ಅದೇ ಶಬ್ದ ಕೇಳಿಸುತ್ತಿರುವಂತೆ ಭಾಸ. ಕಣ್ಣು ಮುಚ್ಚಿದರೆ ಬಂಗಲೆ, ಕತ್ತಲೆ ದಾರಿಗಳು, ಮುರಿದ ಕಿಟಕಿಗಳು ಕಣ್ಣ ಮುಂದೆ ತೇಲುತ್ತವೆ.ಒಂದು ರಾತ್ರಿ ಅವನು ವಿಚಿತ್ರ ಕನಸು ಕಂಡ. ಆ ಬಂಗಲೆಯ ಗೇಟಿನ ಒಳಗೆ ಮಣ್ಣಿನಲ್ಲಿ ಸ್ಪಷ್ಟವಾಗಿ ಕಾಣುವ ಒಂಟಿ ಹೆಜ್ಜೆ ಗುರುತು. ಕೇವಲ ಒಂದೇ ಹೆಜ್ಜೆ—ಎರಡನೇ ಹೆಜ್ಜೆ ಇಲ್ಲ. ಆ ಗುರುತು ಅವನತ್ತ ಬರುತ್ತಿರುವಂತೆ ಭಾಸವಾಯಿತು. ಹೃದಯ ಬಡಿದುಕೊಂಡು ಅವನು ಎಚ್ಚರಗೊಂಡ. “ಒಂದು ಹೆಜ್ಜೆ ಮಾತ್ರ ಹೇಗೆ?” ಎಂದು ಅವನು ಯೋಚಿಸಿದ. ಆ ಕನಸು ಅವನ ಮನಸ್ಸನ್ನು ಬಿಡಲೇ ಇಲ್ಲ. ಮರುದಿನ ಬೆಳಿಗ್ಗೆ ಕುತೂಹಲ ಮತ್ತು ಭಯ ಎರಡೂ ಸೇರಿ ಅವನನ್ನು ಬಂಗಲೆಯ ಕಡೆಗೆ ಎಳೆದವು. ಶಾಲೆಗೆ ಹೋಗುವ ಮುನ್ನ ಸ್ವಲ್ಪ ದೂರದಿಂದ ಅವನು ನೋಡಿದ. ಆಶ್ಚರ್ಯ! ನಿಜವಾಗಿಯೂ ಗೇಟಿನ ಬಳಿ ಮಣ್ಣಿನಲ್ಲಿ ಒಂದೇ ಹೆಜ್ಜೆ ಗುರುತು ಕಾಣಿಸುತ್ತಿತ್ತು. ಅವನ ಕೈಕಾಲು ತಣ್ಣಗಾದವು.ಅವನು ಗೇಟಿನ ಹತ್ತಿರ ಹೋಗಲು ಯತ್ನಿಸಿದ. ಅಷ್ಟರಲ್ಲಿ ಊರಿನ ಒಬ್ಬ ವಯಸ್ಸಾದ ಮಹಿಳೆ ಅವನನ್ನು ನೋಡಿ ಕೂಗಿದರು,“ಏಯ್ ಹುಡುಗಾ! ಅಲ್ಲಿ ಏನೋ ಮಾಡ್ತಿಯಾ? ಹೋಗೋ ಮನೆಗೆ!”ಕಾರ್ತಿಕ್ ಬೆಚ್ಚಿಬಿದ್ದು ಹಿಂದಕ್ಕೆ ಸರಿದ. ಆದರೆ ಆ ಹೆಜ್ಜೆ ಗುರುತು ಅವನ ಮನಸ್ಸಿನಲ್ಲಿ ಇನ್ನಷ್ಟು ಗಾಢವಾಗಿ ಉಳಿಯಿತು. ಆ ರಾತ್ರಿ ಅವನು ನಿದ್ರೆ ಮಾಡಲಿಲ್ಲ. “ನಿಜವೇನಿದೆ ಅಲ್ಲಿ?” ಎಂಬ ಪ್ರಶ್ನೆ ಅವನನ್ನು ಕಾಡುತ್ತಿತ್ತು. ಕೊನೆಗೆ ಧೈರ್ಯ ಮಾಡಿಕೊಂಡು, ಮರುದಿನ ಯಾರಿಗೂ ತಿಳಿಯದಂತೆ ಮತ್ತೆ ಬಂಗಲೆಗೆ ಹೋಗುವ ನಿರ್ಧಾರ ಮಾಡಿದ. ಸೂರ್ಯ ಮಧ್ಯಾಕಾಶದಲ್ಲಿದ್ದ ಸಮಯ. ಗೇಟು ನಿಧಾನವಾಗಿ ಕಿರುಚುತ್ತ ತೆರೆದಿತು. ಒಳಗೆ ಕಾಲಿಟ್ಟಾಗ ಬಂಗಲೆಯೊಳಗಿನ ವಾಸನೆ ಹಳೆಯ ಮಣ್ಣಿನ, ಧೂಳಿನ, ಒಣ ಮರದ ವಾಸನೆಯಿಂದ ತುಂಬಿತ್ತು. ಗೋಡೆಗಳ ಮೇಲೆ ಹಳೆಯ ಚಿತ್ರಗಳು, ಮುರಿದ ಕುರ್ಚಿಗಳು, ಬಿದ್ದ ಕಾಗದಗಳು. ಪ್ರತಿಯೊಂದು ಹೆಜ್ಜೆಯೂ ಪ್ರತಿಧ್ವನಿಯಂತೆ ಕೇಳಿಸುತ್ತಿತ್ತು.ಅಷ್ಟರಲ್ಲಿ ಒಳಗಿನಿಂದ ನಿಧಾನವಾದ ಚಲನೆಯ ಶಬ್ದ. ಕಾರ್ತಿಕ್ ಉಸಿರು ಹಿಡಿದು ನಿಂತ. ಒಂದು ಕೋಣೆಯ ಬಾಗಿಲು ತೆರೆದು ಹೊರಬಂದದ್ದು—ಒಬ್ಬ ಮುದುಕ. ಅವನ ಮುಖದಲ್ಲಿ ದಟ್ಟವಾದ ಬಿಳಿ ಗಡ್ಡ, ಕಣ್ಣುಗಳಲ್ಲಿ ಅಪಾರ ನೋವು. ಅವನಿಗೆ ಒಂದೇ ಕಾಲು ಮಾತ್ರ ಇತ್ತು; ಮತ್ತೊಂದು ಕಾಲು ಯಾವುದೋ ಅಪಘಾತದಲ್ಲಿ ಕಳೆದುಕೊಂಡಿದ್ದ.ಕಾರ್ತಿಕ್‌ಗೆ ಕ್ಷಣಕಾಲ ಮಾತೇ ಬರಲಿಲ್ಲ. ಭಯಕ್ಕಿಂತ ಹೆಚ್ಚು ಅವನ ಮನಸ್ಸಿನಲ್ಲಿ ಕರುಣೆ ಮೂಡಿತು.“ಭಯಪಡಬೇಡ ಮಗನೇ,” ಎಂದು ಮುದುಕ ನಿಧಾನವಾಗಿ ಹೇಳಿದರು. “ನಿನ್ನ ಕನಸಿನಲ್ಲಿ ಕಂಡ ಒಂಟಿ ಹೆಜ್ಜೆ ನಾನು.”ಮುದುಕ ತನ್ನ ಕಥೆ ಹೇಳಲು ಶುರುಮಾಡಿದರು. ಒಮ್ಮೆ ಈ ಬಂಗಲೆ ಅವನ ಹೆಮ್ಮೆಯ ಮನೆ. ಅವನು ದೊಡ್ಡ ವ್ಯಾಪಾರಿ. ಅವನಿಗೆ ಅಪಾರ ಸ್ನೇಹಿತರು ಇದ್ದರು. ಆದರೆ ಅವನ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡವರು ಅವನ ಆಸ್ತಿಯನ್ನು ಕಬಳಿಸಿದರು. ಒಂದು ಅಪಘಾತದಲ್ಲಿ ಅವನು ಕಾಲು ಕಳೆದುಕೊಂಡ. ಸ್ನೇಹಿತರೆಂದವರು ದೂರ ಸರಿದರು. ಕುಟುಂಬವೂ ಅವನನ್ನು ಬಿಟ್ಟು ಹೋದರು. ಕೊನೆಗೆ ಅವನು ಒಂಟಿಯಾಗಿ ಈ ಬಂಗಲೆಯಲ್ಲೇ ಉಳಿದ.“ನೋವಿನಿಂದ ಕೆಲವೊಮ್ಮೆ ನಾನೇ ನನ್ನನ್ನು ನಿಂದಿಸುತ್ತೇನೆ. ಅದೇ ಶಬ್ದ ನೀನು ಕೇಳಿದ್ದು,” ಎಂದು ಕಣ್ಣೀರಿನಿಂದ ಹೇಳಿದರು.ಕಾರ್ತಿಕ್‌ನ ಕಣ್ಣುಗಳು ತುಂಬಿಬಂದವು. ಅವನಿಗೆ ಭಯ ಅಲ್ಲ, ಅಪಾರ ದುಃಖ ಮತ್ತು ಸಹಾನುಭೂತಿ ಉಕ್ಕಿತು. “ನಾನು ಮತ್ತೆ ಬರುತ್ತೇನೆ,” ಎಂದು ಅವನು ಹೇಳಿದ.ಆ ದಿನದಿಂದ ಕಾರ್ತಿಕ್ ಆ ಮುದುಕನಿಗೆ ಆಹಾರ ತಂದು ಕೊಡಲು, ಮಾತನಾಡಲು ಬರುತ್ತಿದ್ದ. ಬಂಗಲೆ ಈಗ ಅವನಿಗೆ ಭಯದ ಸ್ಥಳವಲ್ಲ, ಮಾನವೀಯತೆಯ ಪಾಠ ಕಲಿಸಿದ ಸ್ಥಳವಾಯಿತು.ಒಂಟಿ ಹೆಜ್ಜೆ—ಭಯದ ಸಂಕೇತವಲ್ಲ, ಒಂಟಿತನದ ಸಂಕೇತ ಎಂದು ಅವನಿಗೆ ಅರ್ಥವಾಯಿತು. ಪೃಥ್ವಿರಾಜ್ ಟಿ ಬಿ
“ಒಂಟಿ ಹೆಜ್ಜೆ(ಹುಡುಕಾಟದಲ್ಲಿ)” ಸಣ್ಣಕಥೆ ಪೃಥ್ವಿರಾಜ್ ಟಿ ಬಿ Read Post »
ಡಾ ಡೋ ನಾ ವೆಂಕಟೇಶ ಕವಿತೆ “ಕೋಡು”
ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕೋಡು” ಬರಬಹುದೇ ಇಂಥಕ್ಯೂ ಆರ್ ಕೋಡ್ ಗಳು –ಮುಖಕ್ಕೆ ಹಿಡಿದಾಗ ನಿನ್ನ ನಖಶಿಖಾಂತ ಹೇಳುವ ಜಾತಕಗಳು. ನಿನ್ನ ಜೋಳಿಗೆಯಲ್ಲಿಯ ಹಣ ಪ್ರಪಂಚಕ್ಕೆ ಇಟ್ಟಿರುವ ಪಣ, ನಿನ್ನ ಹಿಂದು ಮುಂದಿನವರ ಆಸೆ ದುರಾಸೆಗಳ ಕ್ಷಣ. ಕಾಯುತ್ತಿದ್ದೇನೆ ಆ ಕೋಡಿಗೆನಿನ್ನ ನೈತಿಕದ ಭೌತಿಕದಇಹ ಪರ ಆಸ್ತಿಗಳ ಮುತ್ತಿಗೆಗೆದುರಾಸೆಗೆ ದುರ್ದಾನಕ್ಕೆ! ಸಿಗುವುದು ಯಾವಾಗಲೋತೀರದ ದಾಹಕ್ಕೆಎಲ್ಲರ ಮುಖ ಕೈ ಕಾಲು ದೇಹಕ್ಕೆ ಮರ್ಜಿ ಹಿಡಿಯುವಹೊತ್ತು ಗೊತ್ತಿಗೆ ಒಳಗೆಲ್ಲ ಹೊರಗೆಹೊರಗೆಲ್ಲ ಒಳಗೆ,ಬರಲಿದೆಯೇ ಇಂಥ ಕೋಡುಸ್ವಿಚ್ ಆಫ್ ಮಾಡಲಿದೆಯೇಎಲ್ಲರ ಮೂಡು! ಡಾ ಡೋ ನಾ ವೆಂಕಟೇಶ
ಡಾ ಡೋ ನಾ ವೆಂಕಟೇಶ ಕವಿತೆ “ಕೋಡು” Read Post »
ಸಾವಿಲ್ಲದ ಶರಣರು ಮಾಲಿಕೆ,”ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು.ಡಾ ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣರ ಸಂಗಾತಿ ಡಾ ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು ಮಾಲಿಕೆ, “ಅಮೋಘಸಿದ್ಧ ಪರಂಪರೆಯ ಶ್ರೇಷ್ಠ ಸಾಧಕ ಶಿವಯೋಗಿ ಶ್ರೀ ಯಲ್ಲಾಲಿಂಗರು. ಕುರುಬರ ಕುಲಗುರು ಒಡೆಯರ ಶಾಖೆಯೊಂದರ ಪ್ರಮುಖ ಸಿದ್ಧ ಅಮೋಘಸಿದ್ಧ ಅಪ್ಪಟ ಜನಪದರ ದೈವ. ಈತನ ಮಟ್ಟಿಗೆ ಜನಪದರ ನಂಬಿಕೆಯೇ ಚರಿತ್ರೆ; ಭಂಡಾರದ ಮಳೆ ಸುರಿದಲ್ಲೇ ಜಾತ್ರೆ. ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಜನಮಾನಸದಲ್ಲಿ ಕುರುಬರ ಇನ್ನೋರ್ವ ಕುಲಗುರುವಾದ ರೇವಣಸಿದ್ಧರಷ್ಟೇ ಪ್ರಖ್ಯಾತನಾಗಿದ್ದಾನೆ. ಆದರೆ ರೇವಣಸಿದ್ಧನಿಗಿರುವಂತೆ ಈತನ ಕುರಿತು ಶಾಸನಾಧಾರಗಳಾಗಲಿ, ಶಿಷ್ಟಕಾವ್ಯಗಳಾಗಲಿ ಇಲ್ಲ. ಈತನ ಜೀವಂತಿಕೆ ಇರುವುದು ಜನಪದರ ಮೌಖಿಕ ಸಾಮಗ್ರಿಗಳಲ್ಲಿ. ಅಮೋಘಸಿದ್ಧನ ಮೂಲ ನೆಲೆ ವಿಜಯಪುರದಿಂದ ಹತ್ತನ್ನೆರಡು ಕಿಲೋ ಮೀಟರ್ ದೂರದ ಅರಿಕೇರಿ ಸಮೀಪದ ಮುಮ್ಮೆಟಗುಡ್ಡ. ಇವನ ಜಾತ್ರೆಯನ್ನು ಜನ ಇಂದಿಗೂ ಮುಮ್ಮಡಪ್ಪನ ಜಾತ್ರೆ ಎಂದೇ ಕರೆಯುತ್ತಾರೆ. ಅಮೋಘಸಿದ್ಧನನ್ನು ಕೈಲಾಸದಲ್ಲಿ ಉದ್ಭವಿಸಿ ಭೂಲೋಕದಲ್ಲಿ ಅವತರಿಸಿದಂತೆ ಪಾರಂಪರಿಕ ಪುರಾಣ ಕಥನದಲ್ಲಿ ಕಲ್ಪಿಸಿಕೊಂಡಿರುವುದರಿಂದ ಈತ ಕಾಲಾತೀತನಾಗಿ ಗೋಚರಿಸುತ್ತಾನೆ. ಆ ಪ್ರಕಾರ ಈತ ಅವತರಿಸಿದ ನಂತರ ಉತ್ತರ ಭಾರತದ ಹಸ್ತಿನಾವತಿಯಲ್ಲಿ ಕೆಲ ದಿನವಿದ್ದು ಪಾಂಡವರು ಕೈಕೊಂಡ ಯಾಗದಲ್ಲಿ ಪಾಲ್ಗೊಳ್ಳುತ್ತಾನೆ. ಕುಂತಿಯಿಂದ ಸೇವೆ ಪಡೆದು ವಾರದ ಒಡೆಯ ಅನ್ನಿಸಿಕೊಳ್ಳುತ್ತಾನೆ. ಅಮೋಘಸಿದ್ಧನ ಮಗನಾದ ಬಿಳಿಯಾನಿಸಿದ್ದನು ಕಲ್ಯಾಣಪಟ್ಟಣಕ್ಕೆ ಹೋಗಿ ಅಲ್ಲಿನ ಮಡಿವಂತ ಲಿಂಗಾಯತರಿಗೆ ನೀವೆಲ್ಲ ಕಟ್ಟುಲಿಂಗದವರಾದರೆ ನಾನು ಹುಟ್ಟುಲಿಂಗದವನು ಎಂಬುದನ್ನು ಸಾಬೀತುಪಡಿಸುತ್ತಾನೆ. ಅಮೋಘಸಿದ್ಧನ ಮೊದಲ ಮಗನಾದ ಅವತಾರ ಅವಧೂಸಿದ್ಧ ವಿಜಾಪುರದ ಶೇಖಾಶಾಹಿಗಳೊಂದಿಗೆ ಕಾದಾಡಿದ್ದು ಹಾಗೂ ಅಮೋಘಸಿದ್ಧನ ಮೊಮ್ಮಗನಾದ ಮಲಕಾರಿಸಿದ್ಧನು ಆನೆಗುಂದಿ ಅರಸರೊಂದಿಗೆ ಹಾಗೂ ಸುರಪುರದ ದೊರೆಗಳೊಂದಿಗೆ ಹಸು ಮೇಯಿಸುವ ಜಾಗೆಯ ವಿಷಯದಲ್ಲಿ ಹಾಕ್ಯಾಡಿದ ವಿವರ ಜನಪದ ಮೌಖಿಕ ಸಾಮಗ್ರಿಗಳಲ್ಲಿ ನೈಜವಾಗಿ ದೊರೆಯುತ್ತವೆ. …ಹೀಗೆ ತಂದೆ-ಮಗ-ಮೊಮ್ಮಗ ಮೂರು ತಲೆಮಾರುಗಳ ಈ ಕಥನದಲ್ಲಿ ಹಸ್ತಿನಾವತಿಯ ದ್ವಾಪರಯುಗ, ಕಲ್ಯಾಣದ ಬಸವಯುಗ, ವಿಜಾಪುರದ ಶಾಹಿಕಾಲ, ಆನೆಗುಂದಿಯ ವಿಜಯನಗರದ ಕಾಲ ಹಾಗೂ ಸುರಪುರದ ಪಾಳೆಗಾರರ ಕಾಲ ಸೇರಿದಂತೆ ವಿವಿಧ ಕಾಲಘಟ್ಟದಲ್ಲಿ ಇವರು ಗೋಚರಿಸುತ್ತಾರಾದ್ದರಿಂದ ಯಾವುದೇ ಕಾಲದ ಚೌಕಟ್ಟಿಗೆ ಸಿಗದೆ ಇಡೀ ಪರಂಪರೆ ಕಾಲಾತೀತವಾಗಿ ತೋರುತ್ತದೆ. ಜನಪದರ ನಾಲಗೆಯ ನಂಬಿಕೆಗಳನ್ನೇ ನೆಚ್ಚಿ ತಲತಲಾಂತರಗಳಲ್ಲಿ ಹರಿದು ಬರುವ ಅಮೋಘಸಿದ್ದನ ಕಥನ ಪುರಾಣೀಕರಣಗೊಂಡು ಕಾಲದ ಹಂಗನ್ನು ಹರಿದುಕೊಳ್ಳುವ ಪರಿಯೇ ವಿಸ್ಮಯಕಾರಿಯಾದದ್ದು. ಈ ವಿಸ್ಮಯಕಾರಿ ಕಥನವನ್ನು ಅಮೋಘಸಿದ್ದ ಪರಂಪರೆಯ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿರುವ ಡಾ.ಚನ್ನಪ್ಪ ಕಟ್ಟಿಯವರು ಕಟ್ಟಿಕೊಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ಶಿವಪ್ಪ-ಕಾಶಿಬಾಯಿ ದಂಪತಿಗಳ ಮಗನಾಗಿ ಶ್ರೀ ಯಲ್ಲಾಲಿಂಗರು ಜನಿಸಿದರು. ಬಾಲ್ಯದಿಂದಲೇ ಶಿವಧ್ಯಾನದಲ್ಲಿದ್ದ ಇವರು, ಮುಗಳಖೋಡದ ಸ್ಮಶಾನಭೂಮಿಯನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು, ಭಿಕ್ಷಾಟನೆ, ಸಮಾಜ ಸೇವೆ ಹಾಗೂ ದಾಸೋಹದ ಮೂಲಕ ಭಕ್ತರಿಗೆ ಮಾರ್ಗದರ್ಶನ ನೀಡಿದ ಮಹಾ ಸಿದ್ಧಿಪುರುಷರು. ಯಲ್ಲಾಲಿಂಗ ಮಹಾರಾಜರ ಜೀವನದ ಪ್ರಮುಖಾಂಶಗಳು: ಬಾಲ್ಯ ಮತ್ತು ಕಾಯಕ ಬಾಲ್ಯದಲ್ಲಿ ಕುರಿ ಕಾಯುವ ಕಾಯಕ ಮಾಡುತ್ತಿದ್ದ ಯಲ್ಲಪ್ಪ, ಇಪ್ಪತ್ತರ ಹರೆಯದಲ್ಲಿ ಕುಸ್ತಿಪಟುವಾಗಿದ್ದರು. ವೈವಾಹಿಕ ಜೀವನ: ಮನೆಯವರ ಒತ್ತಾಯದ ಮೇರೆಗೆ ಹೊನ್ನಮ್ಮ ಎಂಬುವರೊಂದಿಗೆ ವಿವಾಹವಾದರು. ಕರ್ಮಭೂಮಿ: ಮುಗಳಖೋಡ ಗ್ರಾಮದ ಸ್ಮಶಾನ ಭೂಮಿಯನ್ನು ಮುಕ್ತಿ ಮಂದಿರವನ್ನಾಗಿ ಮಾಡಿಕೊಂಡು, ಅಧ್ಯಾತ್ಮಿಕ ಜೀವನ ನಡೆಸಿದರು. *ಸಿದ್ಧಿ ಮತ್ತು ಸಮಾಜ ಸೇವೆ: ಸಿದ್ಧಲಿಂಗರ ಆಶೀರ್ವಾದ ಪಡೆದಿದ್ದ ಯಲ್ಲಾಲಿಂಗರು, ಸುತ್ತಮುತ್ತಲಿನ ಗ್ರಾಮದ ಜನರಿಗೆ ಸತ್ಯದ ಮಾರ್ಗ ತೋರಿಸುತ್ತಿದ್ದರು. ಮುಗಳಖೋಡ ಮಠ: ಯಲ್ಲಾಲಿಂಗ ಮಹಾರಾಜರ ಕರ್ತೃ ಗದ್ದುಗೆ ಮುಗಳಖೋಡದಲ್ಲಿದ್ದು, ಇದು ಭಕ್ತರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 24 ಗಂಟೆಗಳ ಕಾಲ ದಾಸೋಹ (ಅನ್ನದಾನ) ನಡೆಯುತ್ತದೆ. ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರು ಉತ್ತರದ ಕರ್ನಾಟಕದಲ್ಲಿ ಅತ್ಯಂತ ಪೂಜನೀಯರಾಗಿದ್ದು, ಅವರ ಜೀವನ ಸತ್ಯ, ಭಕ್ತಿ ಮತ್ತು ಸೇವಾ ಮನೋಭಾಕ್ಕೆ ಸಾಕ್ಷಿಯಾಗಿದೆ. ಅಮೋಘ ಸಿದ್ಧ ಪರಂಪರೆಯ ಶ್ರೀ ಸಿದ್ಧಲಿಂಗರ ಆಶೀರ್ವಾದ ಕೃಪೆಯಿಂದ ತಮ್ಮ ಬದುಕನ್ನು ಶಿವಯೋಗ ಸಾಧನಕ್ಕೆ ಮೀಸಲಿಟ್ಟವರು ಪೂಜ್ಯರಾದ ಶ್ರೀ ಯಲ್ಲಾಲಿಂಗರು. ಮುಗುಳುಖೋಡ ಮುತ್ಯಾ ಎಂದು ಜನರು ಕರೆಯುತ್ತಿದ್ದರು. ಮೈಲಾರಲಿಂಗ ಎಂದರೆ ಮೈಯಲ್ಲಿ ಆರು ಲಿಂಗ ಗುರು ಲಿಂಗ ಜಂಗಮ ಲಿಂಗ ಹೀಗೆ. ಆದರೆ ಯಲ್ಲಾಲಿಂಗವೆಂದರೆ ಇಡೀ ಕಾಯ ಶರೀರವೇ ಲಿಂಗ ಎಲ್ಲವೂ ಲಿಂಗ ಎಂಬಂತೆ ಬಸವ ತತ್ವಕ್ಕೆ ಅನುಗುಣವಾಗಿ ಬಾಳಿ ಬದುಕಿದ ನಾವು ಕಂಡ ಶ್ರೇಷ್ಠ ಶಿವಯೋಗ ಸಾಧಕರು. ಬಡವರ ಪಾಲಿನ ಆಶಾಕಿರಣ ಭಕ್ತರ ನಂಬಿಕೆಯ ಶ್ರೇಷ್ಠ ಶಿವಯೋಗ ಸಾಧಕರು ಯಲ್ಲಾಲಿಂಗರು. ಬಂದ ಭಕ್ತರಿಗೆ ಅಂಬಲಿ ನೀಡಿ ಪ್ರೀತಿ ಗೌರವ ವಿಶ್ವಾಸದಿಂದ ಮಾತನಾಡಿ ಅವರ ದುಗುಡು ದುಮ್ಮಾನಗಳನ್ನು ದೂರು ಮಾಡುತ್ತಿದ್ದರು. ಜಿಡಗಾ ಮುಗುಳುಖೋಡ ಬೆಳಗಾವಿಯ ಶ್ರೀನಗರದಲ್ಲಿ ಇವರ ಮಠವಿದೆ. ಯಲ್ಲಾಲಿಂಗರ ನಂತರ ಶ್ರೀ ಸಿದ್ಧರಾಮಸ್ವಾಮಿಗಳು ಮತ್ತೆ ಈಗ ಶ್ರೀ ಡಾ ಮುರುಘರಾಜೇಂದ್ರ ಶ್ರೀಗಳು ತಮ್ಮ ದಿವ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಹೊರಟಿದ್ದಾರೆ.ಇಂತಹ ಪೂಜ್ಯರನ್ನು ಹೊಂದಿದ ನಮ್ಮ ಕರ್ನಾಟಕದ ನೆಲವೇ ಪಾವನ ಸುಕ್ಷೇತ್ರ. ಇವರಿಗೆ ಭಕ್ತಿಪೂರ್ವಕ ಶರಣಾರ್ಥಿಗಳು. ________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
“ಯಶಸ್ಸಿನ ಪಯಣದ ಹಾದಿ -1” ವೀಣಾ ಹೇಮಂತ್ ಗೌಡ ಪಾಟೀಲ್
ಯಶಸ್ಸಿನ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ “ಯಶಸ್ಸಿನ ಪಯಣದ ಹಾದಿ -1” ಬದುಕಿನಲ್ಲಿ ಏನನ್ನಾದರೂ ಮಹತ್ತರವಾದದನ್ನು ಸಾಧಿಸಬೇಕು, ಯಶಸ್ವಿಯಾಗಬೇಕು, ಸಮಾಜದಲ್ಲಿ ಗಣ್ಯ ಸ್ಥಾನವನ್ನು ಹೊಂದಬೇಕು ಎಂದು ಯಾವ ವ್ಯಕ್ತಿ ಬಯಸುವುದಿಲ್ಲ ಹೇಳಿ? ಬಹುಷಃ ಪ್ರತಿಯೊಬ್ಬ ಮನುಷ್ಯನ ಅಂತರಾಳದಲ್ಲಿ ಈ ಒಂದು ಹಂಬಲ ಇದ್ದೇ ಇರುತ್ತದೆ. ಆದರೆ ಕೇವಲ ಹಂಬಲ ಇದ್ದರೆ ಸಾಲದು ಅದಕ್ಕೆ ತಕ್ಕ ಪ್ರಯತ್ನವು ಬೇಕು.ವ್ಯಾಯಾಮ ಮಾಡಿದರೆ ದೇಹ ಗಟ್ಟಿಮುಟ್ಟಾಗುತ್ತದೆ ಸ್ನಾಯುಗಳು ಬಲಶಾಲಿಯಾಗುತ್ತವೆ ಸರಳವಾಗಿ ರಕ್ತ ಪರಿಚಲನೆ ಆಗುತ್ತದೆ ಆರೋಗ್ಯ ಸುಧಾರಿಸುತ್ತದೆ ನಿಜ ಹಾಗೆಂದು ಆ ವ್ಯಾಯಾಮವನ್ನು ನಾವು ಮಾಡುವುದು ಬಿಟ್ಟು ನಮ್ಮ ಜೊತೆಗಿರುವವರಿಗೆ ಇಲ್ಲವೇ ಕೆಲಸದವರಿಗೆ ಸಂಬಳ ಕೊಟ್ಟು ವ್ಯಾಯಾಮ ಮಾಡಿಸಿದರೆ ನಮ್ಮ ದೇಹ ಗಟ್ಟಿಯಾಗುವುದಿಲ್ಲ ಅಲ್ವೇ ಸ್ನೇಹಿತರೆ ?ನಮ್ಮ ತನು ಮನಗಳು ಗಟ್ಟಿಯಾಗಲು ನಾವೇ ಕಸರತ್ತು ಮಾಡಬೇಕು ಹೊರತು ಬೇರೆಯವರಲ್ಲ ಅಂತೆಯೇ ನಮ್ಮ ಬದುಕಿನ ಯಶಸ್ಸಿಗೆ ನಾವುಗಳು ಪ್ರಯತ್ನ ಪಡಬೇಕೆ ಹೊರತು ಇನ್ನೊಬ್ಬರಲ್ಲ.ನಮ್ಮ ಪಾಲಕರು ನಮಗೆ ಜನ್ಮ ನೀಡಿರುತ್ತಾರೆ ಅವರ ಕನಸಿನ ಕೂಸುಗಳು ನಾವು ನಿಜ ಅವರು ನಮಗೆ ದಾರಿ ತೋರುತ್ತಾರೆ, ಆ ದಾರಿಯಲ್ಲಿ ನಡೆಯಲು ಪ್ರೇರೇಪಿಸುತ್ತಾರೆ ಹಾಗೂ ಆ ದಾರಿಯಲ್ಲಿ ಸಾಗಲು ಬೇಕಾಗುವ ಎಲ್ಲಾ ರೀತಿಯ ಸಹಾಯ, ಸಹಕಾರಗಳನ್ನು ಒದಗಿಸುತ್ತಾರೆ ಆದರೆ ಆ ದಾರಿಯನ್ನು ನಡೆಯಬೇಕಾದವರು ನಾವೇ ಹೊರತು ಬೇರೆಯವರಲ್ಲ.ಯಶಸ್ಸು ನಮ್ಮ ಕನಸಿನ ಕೂಸು. ಒಂದೊಮ್ಮೆ ಸತತ ಪರಿಶ್ರಮದ ನಂತರ ಅದನ್ನು ಪಡೆದ ವ್ಯಕ್ತಿ ಧನ್ಯತಾ ಭಾವದಿಂದ ನನ್ನ ಯಶಸ್ವಿಗೆ ನನ್ನ ಪಾಲಕರು, ಗುರುಗಳು, ಒಡಹುಟ್ಟಿದವರು, ಸ್ನೇಹಿತರು, ಬಂಧುಗಳು, ಸಂಗಾತಿ ಮಕ್ಕಳ ಸಹಕಾರ ಕಾರಣ ಎಂದು ಹೇಳಬಹುದು ಆದರೆ ಖುದ್ದು ಪ್ರಯತ್ನ ಪಟ್ಟಿರುವುದು ಮಾತ್ರ ಅವರೇ ಆಗಿರುತ್ತಾರಲ್ಲವೇ? ಯಶಸ್ಸಿಗೆ ನೂರಾರು ಜನ ಪಾಲುದಾರರು ಆದರೆ ಸೋಲು ಅನಾಥ, ಒಬ್ಬಂಟಿ, ತಬ್ಬಲಿ. ತಮ್ಮದೇ ಬದುಕಿನಲ್ಲಿ ತಾವು ಕೈಗೊಂಡ ನಿರ್ಧಾರಗಳ ಫಲವಾಗಿ ಅನುಭವಿಸುವ ಸೋಲನ್ನು ಯಾರೂ ಕೇವಲ ತಮ್ಮ ಆಯ್ಕೆಯ ಪರಿಣಾಮ ಎಂದು ಖಂಡಿತವಾಗಿಯೂ ಒಪ್ಪಿಕೊಳ್ಳುವುದಿಲ್ಲ…. ಬದಲಾಗಿ ತನ್ನ ಬದುಕಿನ ಎಲ್ಲಾ ಅವಘಡಗಳಿಗೆ ನಾನು ಹುಟ್ಟಿರುವ ದೇಶ ಸರಿ ಇಲ್ಲ, ಬದುಕುತ್ತಿರುವ ಪ್ರದೇಶದ ವ್ಯವಸ್ಥೆ ಸರಿಯಾಗಿಲ್ಲ ತನ್ನ ಹೆತ್ತವರು ತನಗೆ ಬೇಕಾದ ರೀತಿಯ ವ್ಯವಸ್ಥೆಗಳನ್ನು ಒದಗಿಸಿ ಕೊಡಲಿಲ್ಲ, ತನ್ನ ಸಹೋದ್ಯೋಗಿಗಳು, ಸಂಗಾತಿ ಕುಟುಂಬ ಹೀಗೆ ತನ್ನ ಸುತ್ತಲಿನ ಎಲ್ಲರೂ ತನಗೆ ಸಹಾಯ ಸಹಕಾರ ನೀಡಲಿಲ್ಲ ಮನೆಯಲ್ಲಿ ತಾವು ಬಯಸಿದ ಅನುಕೂಲತೆಗಳು ಇಲ್ಲ…. ಆದ್ದರಿಂದಲೇ ನನಗೆ ಗೆಲುವು ಅಸಾಧ್ಯವಾಯಿತು ಎಂದು ಹೇಳುತ್ತಾರೆ.ನನ್ನ ಸೋಲಿಗೆ ಬದುಕಿನಲ್ಲಿ ನನ್ನ ಆಯ್ಕೆಗಳೇ ಕಾರಣ ನನ್ನ ಯೋಜನೆಗಳು ಸರಿಯಾಗಿರಲಿಲ್ಲ. ಮಾಡಬೇಕಾದ ವಯಸ್ಸಿನಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳನ್ನು ನಾನು ಮಾಡಲಿಲ್ಲ ಎಂದು ತಮಗೆ ತಾವೇ ಎಂದೂ ಹೇಳಿಕೊಳ್ಳುವುದಿಲ್ಲ…… ಇಲ್ಲಿಯೇ ಮನುಷ್ಯ ತಪ್ಪುವುದು.ಇಡೀ ಜಗತ್ತಿಗೆ ನಮ್ಮ ಸೋಲು ಗೆಲುವುಗಳ ಪರಿಭಾಷೆಯನ್ನು ನಾವು ಒತ್ತಿ ಹೇಳಬಹುದು. ಆದರೆ ನಮ್ಮದೇ ಆತ್ಮಕ್ಕೆ, ನಮ್ಮ ಮನಸ್ಸಿಗೆ ನಾವು ಸುಳ್ಳು ಹೇಳಲು, ತಪ್ಪು ಉತ್ತರ ಕೊಡಲು, ಸಮಜಾಯಿಷಿ ಕೊಡಲು ಸಾಧ್ಯವಾಗುತ್ತದೆಯೇ? ಒಂದೊಮ್ಮೆ ಸಾಧ್ಯವಾಗುತ್ತದೆ ಎಂದಾದರೆ ಖಂಡಿತವಾಗಿಯೂ ನಾವು ಆತ್ಮ ವಂಚನೆ ಮಾಡಿಕೊಳ್ಳುತ್ತಿದ್ದೇವೆ ಎಂದೇ ಅರ್ಥ… ಏಕೆಂದರೆ ನಾವು ಇಡೀ ಜಗತ್ತನ್ನು ಮೋಸ ಮಾಡಬಹುದು, ವಂಚಿಸಬಹುದು ಆದರೆ ವೈಯಕ್ತಿಕವಾಗಿ ನಮ್ಮ ಅಂತರಾತ್ಮವನ್ನು ಎಂದಿಗೂ ವಂಚಿಸಲು ಸಾಧ್ಯವಿಲ್ಲ ಅಲ್ಲವೇ?ಆದ್ದರಿಂದ ಸ್ನೇಹಿತರೆ…ತಮ್ಮ ಸೋಲು ಗೆಲುವುಗಳಿಗೆ ನಾವೇ ಹೊಣೆಗಾರರಾಗೋಣ. ನಮ್ಮ ಬದುಕಿನಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತವೆ. ನಾವು ಹಾಕಿಕೊಳ್ಳುವ ಯೋಜನೆಗಳ ಸಾಧಕ ಬಾಧಕಗಳ ಅರಿವು ನಮಗೆ ಇರಬೇಕು. ನಮ್ಮ ಯೋಜನೆಗಳಲ್ಲಿ ಸತ್ವವಿದ್ದರೆ ಹಾಗೂ ನಮ್ಮ ಪ್ರಯತ್ನವನ್ನು ನಾವು 100 ಶೇಕಡ ಹಾಕಿದಲ್ಲಿ ಖಂಡಿತವಾಗಿಯೂ ಗೆಲುವು ನಮ್ಮದಾಗುತ್ತದೆ ಒಂದೊಮ್ಮೆ ಗೆಲ್ಲದಿದ್ದರೂ ಪರವಾಗಿಲ್ಲ ಸೋಲು ಕಲಿಸುವ ಅನುಭವದ ಪಾಠ ಅದಕ್ಕಿಂತ ದೊಡ್ಡದು. ಮತ್ತೊಂದು ಹೊಸ ಗೆಲುವಿಗೆ ಅದು ನಮ್ಮನ್ನು ತಯಾರು ಮಾಡುತ್ತದೆ… ಆದರೆ ಈ ಬಾರಿ ಹಿಂದಿನ ವಿಫಲತೆಯ ಕಾರಣಗಳು ನಮ್ಮನ್ನು ಜಾಗೃತಗೊಳಿಸಿಹಳೆಯ ತಪ್ಪುಗಳು ಮರುಕಳಿಸದಂತೆ ನಮ್ಮನ್ನು ಎಚ್ಚರಿಸುತ್ತಾ ಹೊಸ ಸಾದ್ಯತೆಗಳ ಕುರಿತು ನಮಗೆ ತಿಳುವಳಿಕೆ ಹೇಳುತ್ತಾ ಹೊಸ ಗೆಲುವಿಗೆ ದಾರಿ ತೋರುತ್ತವೆ.ಎಷ್ಟೋ ಬಾರಿ ಬದುಕಿನ ಹಾದಿಯಲ್ಲಿ ಏನೆಲ್ಲ ಪ್ರಯತ್ನ ಮಾಡಿಯೂ ಕೂಡ ಯಶಸ್ಸು ದಕ್ಕುವುದಿಲ್ಲ… ಹಾಗೆಂದು ನಿರಾಶರಾಗುವುದು ಬೇಕಿಲ್ಲ. ಯಶಸ್ಸಿನ ಏಣಿಯನ್ನು ಏರುವುದು ಅಷ್ಟು ಸುಲಭವಲ್ಲ ಒಂದೇ ಒಂದು ಹಂತದ ಎಡವುವಿಕೆಯು ಕೂಡ ನಮ್ಮನ್ನು ಇನ್ನಿಲ್ಲದಂತೆ ಕೆಳಗೆ ತಳ್ಳುತ್ತದೆ…. ಆದ್ದರಿಂದ ಬದುಕಿನಲ್ಲಿ ಸದಾ ಜಾಗೃತ ಸ್ಥಿತಿ ನಮ್ಮದಾಗಿರಬೇಕು. ಮತ್ತೆ ಹೊಸ ಉತ್ಸಾಹದಿಂದ ಒಡಗೂಡಿ ಪ್ರಯತ್ನವನ್ನು ಮುಂದುವರಿಸಬೇಕು.ಬದುಕಿನಲ್ಲಿ ನಮಗೆ ಸದಾ ಎರಡು ಆಯ್ಕೆಗಳಿರುತ್ತವೆಮೊದಲನೆಯದ್ದು ಬದುಕು ಬರುವಂತೆಯೇ ಅದನ್ನು ಸ್ವೀಕರಿಸುವುದು ಎರಡನೆಯದ್ದು ಬದುಕಿನಲ್ಲಿ ನಮ್ಮದೇ ಆದ ಕೆಲವು ಗುರಿ ಮತ್ತು ಉದ್ದೇಶಗಳನ್ನು ಹೊಂದಿ ಅವುಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸುವುದು.ಮೊದಲನೆಯದ್ದು ಅತ್ಯಂತ ಸುಲಭ.. ಬದುಕು ಬಂದ ರೀತಿಯಲ್ಲಿ ಅದನ್ನು ಸ್ವೀಕರಿಸುತ್ತಾ ಮುಂದೆ ಸಾಗುವುದು. ಬೇರೆ ಯಾವುದೇ ಆಯ್ಕೆಗಳು ಇಲ್ಲದೆ ಇದ್ದಾಗಲೂ ಕೂಡ ನಾವು ಮೊದಲ ಆಯ್ಕೆಯನ್ನು ನಮ್ಮದಾಗಿಸಿಕೊಳ್ಳುತ್ತೇವೆ. ಬದುಕಿನಲ್ಲಿ ಯಾವುದೇ ರೀತಿಯ ಏರಿಳಿತಗಳು ಬೇಡ ಎಂದಲ್ಲ ಅದೊಂದು ರೀತಿಯ ಸಂತೃಪ್ತ ಭಾವ ಎಂದು ತೋರಬಹುದು. ಇರುವುದರಿಂದಯೇ ತೃಪ್ತರಾಗುವುದು….ಆದರೆ ಅದೊಂದು ಏಕತಾನತೆಯನ್ನು ಹುಟ್ಟು ಹಾಕುವ ಭಾವ. ಬದುಕಿನ ಒಂದು ಹಂತದಲ್ಲಿ ಈ ರೀತಿಯ ಭಾವ ನಮ್ಮಲ್ಲಿ ನೀರಸತೆಯನ್ನು ಉಂಟು ಮಾಡಿ ನಮ್ಮ ಕುರಿತು ನಮಗೆ ಜಿಗುಪ್ಸೆಯನ್ನು ಹುಟ್ಟಿಸಬಹುದು.ಬದುಕಿನಲ್ಲಿ ನಾನೇನೂ ಮಾಡಲು ಸಾಧ್ಯವಾಗಲಿಲ್ಲ ಎಂದು ತೋರಬಹುದು ಇಲ್ಲವೇ ಬೇರೆಯವರು ತಮ್ಮ ಬದುಕಿನಲ್ಲಿ ಸಾಧಿಸಿದ್ದನ್ನು ಕಂಡು ಹೆಮ್ಮೆಪಡುವುದರ ಜೊತೆಗೆ ತಾವು ಪ್ರಯತ್ನ ಪಡಲಿಲ್ಲ ಎಂಬ ಕುರಿತು ಪಶ್ಚಾತಾಪವಾಗಬಹುದು ಇಲ್ಲವೇ ಅವರ ಕುರಿತು ಅಸೂಯೆ ಪಡುವಂತಾಗಬಹುದು ತಮ್ಮಿಂದ ಸಾಧ್ಯವಾಗದ್ದು ಬೇರೆಯವರಿಗೆ ಸಾಧ್ಯವಾಗಿದೆ ಎಂದಾದರೆ ಅವರು ವಾಮ ಮಾರ್ಗವನ್ನು ಅನುಸರಿಸಿದ್ದಾರೆ ಎಂಬ ಕುತ್ಸಿತ ಮನೋಭಾವ ಉಂಟಾಗಬಹುದು….. ಇದನ್ನು ಬಿಟ್ಟರೆ ಇವರಲ್ಲಿ ಅಷ್ಟೇನೂ ದೊಡ್ಡ ಪ್ರಮಾದವಿಲ್ಲ.ನಿಜವಾಗಿಯೂ ನೀವು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಆಶಿಸಿದ್ದರೆ ಸಾಧಿಸಲೇಬೇಕು ಎಂಬ ಹಂಬಲ ನಿಮಗಿದ್ದರೆ ನೀವು ಎರಡನೆಯ ಆಯ್ಕೆಯನ್ನು ನಿಮ್ಮದಾಗಿಸಿಕೊಳ್ಳುತ್ತೀರಿ ಅಂತಹ ಆಯ್ಕೆಯನ್ನು ಕೇವಲ ಬಾಯಿಮಾತಿನ ಇಲ್ಲವೇ ಆ ಕ್ಷಣದಲ್ಲಿ ನೀವು ಮಾಡಿದ ಕ್ಷಣಿಕ ನಿರ್ಧಾರವಾದರೆ ನೀವು ಸೋಲುತ್ತೀರಿ, ಹತಾಶರಾಗಿ ಬೇಗನೆ ಕೈ ಚೆಲ್ಲುತ್ತೀರಿ ಇಲ್ಲವೇ ನಿಮ್ಮ ನಿರ್ಧಾರವನ್ನು ಕೈಬಿಡುತ್ತೀರಿ. ಬದಲಾಗಿ ನಿಮ್ಮ ಗುರಿ ಹಾಗೂ ಉದ್ದೇಶ ನಿಮ್ಮ ಮನದಾಳದ ಭಾವನೆಯಾಗಿ ಪ್ರತಿಕ್ಷಣವೂ ನಿಮ್ಮನ್ನು ಆ ಉದ್ದೇಶಕ್ಕಾಗಿ ತುಡಿಯುವಂತೆ ಕಾರ್ಯಪ್ರವೃತ್ತರಾಗುವಂತೆ ಮಾಡಿದರೆ ಖಂಡಿತವಾಗಿಯೂ ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ. ಆ ಸಾಧನೆಗಾಗಿ ತುಡಿಯುವಂತೆ ಕಾರ್ಯ ಪ್ರವೃತ್ತರಾಗುವಂತೆ ಸದಾ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳುತ್ತೀರಿ.ಸೋಲುಗಳನ್ನು ಸವಾಲುಗಳಾಗಿ ಸ್ವೀಕರಿಸಿ ಬರುವ ಎಲ್ಲಾ ಎಡರು ತೊಡರುಗಳನ್ನು ಸಾಧನೆಯ ಹಾದಿಯ ಕಲ್ಲು ಮುಳ್ಳುಗಳು ಎಂಬಂತೆ ಸಕಾರಾತ್ಮಕವಾಗಿ ಭಾವಿಸಿ ಅವುಗಳನ್ನು ನಿವಾರಿಸಿಕೊಳ್ಳುತ್ತಾ ಮುಂದೆ ಸಾಗುವಿರಿ.ಗುರಿಯ ಉದ್ದೇಶ ಹಾಗೂ ಸಾಧನೆಗೆ ಕೇವಲ ಬಾಹ್ಯ ಚಟುವಟಿಕೆಗಳು ಮಾತ್ರ ಕಾರಣವಾಗುವುದಿಲ್ಲ ನಮ್ಮ ವೈಯುಕ್ತಿಕ ಬದುಕಿನಲ್ಲಿ ನಾವು ರೂಢಿಸಿಕೊಳ್ಳುವ ಕೆಲಸಗಳು ಕೂಡ ನಮ್ಮ ಯಶಸ್ಸಿನ ಬದುಕಿಗೆ ತಮ್ಮ ಪಾಲನ್ನು ಸಲ್ಲಿಸುತ್ತವೆ. (ಈ ಕುರಿತು ಮತ್ತಷ್ಟು ಮಾತುಕತೆಗಳು ಮುಂದಿನ ಲೇಖನದಲ್ಲಿ) ವೀಣಾ ಹೇಮಂತ್ ಗೌಡ ಪಾಟೀಲ್
“ಯಶಸ್ಸಿನ ಪಯಣದ ಹಾದಿ -1” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಚಂದ್ರು ಪಿ ಹಾಸನ್ “ಪ್ರೇಮಗಂಗೆ”
ಕಾವ್ಯ ಸಂಗಾತಿ ಚಂದ್ರು ಪಿ ಹಾಸನ್ “ಪ್ರೇಮಗಂಗೆ” ಪ್ರೇಮಗಂಗೆ ಓ ನನ್ನೊಲವಗಂಗೆ ಎನ್ನೆದೆಯಾಳದಿ ಜನ್ಮಿಸಿದ ಪ್ರೇಮಗಂಗೆನಿನ್ನ ಚಲನವಲನ ನನ್ನವಳ ಕೂಗಿದೆ ನೀ ಮಿಡಿದ ಬಡಿತದ ಕಲರವಒಮ್ಮೆ ಕಾಣುವ ಹಂಬಲ ತಂದಿದೆ ಬಂಜರು ಭೂಮಿಯಲ್ಲಿ ಮಳೆಗರೆದು ಹಸಿರು ಹಸನಾಗಿ ಹರಡುವಂತೆನಿನ್ನ ನವಿರಾದ ಹರಿವಿನ ಅರಿವು ಮನದಲ್ಲಿ ಸೊಗಸಾದ ಆಸೆ ಚಿಗುರಿಸಿಪ್ರೇಮದ ಕಾರಂಜಿಯನ್ನು ಚಿಮ್ಮುತ್ತಿದೆ. ನೀರಿನ ಜುಳುಜುಳು ನಾದ ಕೇಳಿ ಹಕ್ಕಿಪಿಕ್ಕಿಗಳು ಚಿಲಿಪಿಲಿ ಎನ್ನುವಂತೆಹೃದಯದ ಅರಗಿಣಿ ಬಡಿತವ ಎಬ್ಬಿಸಿಭಾವ ಅಲೆಗಳು ನರನಾಡಿಯಲ್ಲಿ ಹರಡಿನಿನ್ನ ಹೆಸರಿನ ತುಡಿತವ ಮಿಡಿಯುತ್ತಿದೆ ಸ್ವಚ್ಛಂದದ ನೀರಿನ ಕಣಕಣದ ಹರಿವು ಧರೆಗೆ ಸೇರಿ ಘಮಘಮಿಸುವಂತೆಎನ್ನ ನೀರೆಯ ಒಲವು ತನುವೆಲ್ಲ ಹರಡಿ ಮುಖಕಮಲ ಮಿನುಗಿಸಿ ಅಡಗಿದೆಯೇ ಅಂತರಗಂಗೆ ಓ ನನ್ನ ಪ್ರೇಮಗಂಗೆ ಚಂದ್ರು ಪಿ ಹಾಸನ್
ಚಂದ್ರು ಪಿ ಹಾಸನ್ “ಪ್ರೇಮಗಂಗೆ” Read Post »









