ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎತ್ತರದ ಫಲ್ಗಾಮಾದ -ಬೆಟ್ಟ
ಗುಡ್ಡಗಾಡಿನ ಕಾಡು- ದಟ್ಟ
ನಿಸರ್ಗ-ಸೌಂದರ್ಯದ- ಗುಟ್ಟ
ಹೆಂಡರಮಕ್ಕಳ ನಲುಮೆಗೆ ಕಟ್ಟಿದ- ಚಟ್ಟ

,ಅಂದು ದೂರದಲಿ ಕೇಳಿ ಪಟಾಕ್ಷಿಯ- ಸದ್ದು
ತಿರುಗಿ ನೋಡಲು ಪಿಸ್ತೂಲು ಗುಂಡು-ಮದ್ದು
ಭಯಾನಕ ರಾಕ್ಷಸರು ಅಮಾಯಕರ ಕೊಂದು
ಧರ್ಮವ ಕೇಳಿ ರುಂಡ ಉರುಳಿಸಿದರಂದು…

ಮಮತೆ ಮನೆ ಒಡೆಯನ-ಕಣೆದುರಿನಲಿ
ಮಲಗಿಸಿದರು ರಕ್ತದ ಮಡುವಿನಲಿ
ಗರ ಬಡಿದು ಸಿಡಿಲು ಅಪ್ಪಳಿಸಿತಲಿ
ದುಷ್ಟರ ಕಂಡು ನಡಗುತಿರೆ ಮಗ ಭಯದಲಿ…

ತೊಟ್ಟು ಬಟ್ಟೆ-ಕೈ ರಕ್ತ ಸಿಕ್ತವಾಯಿತು,
ತಂದೆಯ ಬಿಟ್ಟಿರದ ಮಡದಿ- ಮಕ್ಕಳು ಅಂಗಲಾಚಿದರು ಕೊಲ್ಲು ನಮ್ಮನೆಂದು,
ನಡುಗುತಲಿ ಹಿಚುಕಿ ನೂಕಿದವರ ದೂರ…

‘ಸಾವನ್ನು ಸಂಭ್ರಮಿಸಲು’ ಬಿಟ್ಟು ನಡೆದರು
ಭಾರತಾಂಬೆಯ ಬೆನ್ನುಹುರಿಗೆ ಪೆಟ್ಟ ಕೊಟ್ಟರು
ಹಂತಕರು ಗಹಗಹಿಸಿದರು, ಅಮಾಯಕರ ಅಸಹಾಯಕತೆ ನೋಡಿ ಸಂತಸಿಸಿದರು…

ದ್ರೋಹಿಗಳು.. ಎಂಥ ಅಮಾನವೀಯರು
ಅದೆಂಥ ವಿದ್ರೋಹಿಗಳು, ಸತ್ತು ಬಿದ್ದವರ
ಒದ್ದು ಮುಂದೆ ನಡೆದರು ಗೆಲುವಿನ ಹೆಜ್ಜೆಯಲಿ
ಆನಂದಿಸಿದರು- ಸಂತೃಪ್ತಿಯಲ್ಲಿ …..

ಧರ್ಮದ ಹೆಸರಿನಲ್ಲಿ ಯಾಗವ ಹೂಡಿ
ಆಹುತಿಯ ಕೊಟ್ಟರು ಮನೆ ಹಿರಿಯನ
ತನ್ನ ದೇವರಿಗೆ ಸೇವೆ ಸಲ್ಲಿಸಿದನೆಂಬ
ಅಭಿಮಾನ ಬಿಗುಮಾನ ತೋರಿ ಮುನ್ನಡೆದರು…

ಭಾರತಾಂಬೆಯ ತಲೆಯ ಸೆರಗು
ರಕ್ತ ರಂಜಿತವಾಗಿ ನಿಂದಿದೆ ಇಂದು
ಮೂಕಳಾಗಿ ಸಹಿಷ್ಣತೆ- ಸೌಹಾರ್ದತೆಲಿ
ತತ್ತರಿಸಿದೆ ಈ ನಾಡಿನ‌ …ಎದೆಯು ….

ಆದರೆ ಆತಂಕರಿಗೆ ದಯೆಯಲ್ಲಿ ನಯವೆಲ್ಲಿ
ಜಾತಿ ಧರ್ಮಕಾಳಗದಲ್ಲಿ ಅಮಾಯಕರು
ವೀರ ಸ್ವರ್ಗ ವೇರಿ ಹೋದರು ಮರೆಯಾದರು
ಇನತಿರಲು ಜೀವ ಭಾರತ ಮಾತೆಗೆ ಅರ್ಪಿಸಿದರು..

ಸಹನನೆಯ ನೇಸರ ಪಡವಣದೊಳು ಇಳಿದಿರೆ
ಸೇಡಿನ ಕತ್ತಲೆಯು ಎಲ್ಲೆಲ್ಲೂ ಕವಿಯುತಿದೆ
ಯಾರ್ಯಾರು ಬೆಂಕಿಯಲಿ ಸುಟ್ಟುಭಸ್ಮ
ಆಗುವರು, ಜ್ವಾಲೆ ಹೊತ್ತಿ ಉರಿಯುತ್ತಿದೆ ಎಲ್ಲೆಡೆ…

ಭಾರತಾಂಬೆ ಮಕ್ಕಳಿಗಾದ ನೋವನ್ನು
ತೊರೆಯಲುಂಟೆ ಸಹನೆಯಲಿ
ಮೂಕಳಾಗಿ ಸಹಿಸಿ ಸುಮ್ಮನಿರಲುಂಟು….


About The Author

3 thoughts on “ಸವಿತಾ ದೇಶಮುಖ ಅವರ ಕವಿತೆ-ಮೂಕಳ ಮೌನದ ಹಾಡು”

Leave a Reply

You cannot copy content of this page

Scroll to Top