ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಹಾಮನೆಯ ಮಗಳು
ಉರಿಯು೦ಡ ಕರ್ಪುರ
ಕದಳಿಯ ಕತ್ತಲೆಯ
ಬೆಳಗುವ ಮಹಾಬೆಳಗು
ಅಕ್ಕರೆಯ ಅಕ್ಕ
ಮಹಾದೇವಿಯಕ್ಕ

ತೊರೆದು ಕೌಶಿಕನರಮನೆ
ಹೊರಟಳು ಕಲ್ಯಾಣಕೆ
ತುಂಡು ಕಂಬಳಿ ಹೊತ್ತು
ತವರು ಮೋಹವ ಬಿಟ್ಟು
ತರು ಗುಲ್ಮ ಲತೆ ಹೂವು
ಪಶು ಪಕ್ಷಿ ದುಂಬಿಯ ಸ್ನೇಹ ತೊಟ್ಟು

ಮಗಳೆ೦ದು ಕರೆದೊಯ್ದ
ಅನುಭವದ ಮಂಟಪಕೆ
ಅಣ್ಣ ಬಸವಣ್ಣ ಶರಣರ ದಂಡು
ಅಲ್ಲಮರ ಪ್ರಶ್ನೆಗೆ ಕೊಟ್ಟಳು ಉತ್ತರ ಅಪರೂಪದ ಅನುಭಾವ
ಚೆಲುವಿನ ಚಿತ್ಕಳೆ ಜ್ಞಾನದ ಜ್ಯೋತಿ

ಉಡತಡಿಯ ಉಡುಗೊರೆ
ಕಲ್ಯಾಣದ ಐಸಿರಿ
ಶ್ರೀಶೈಲಕೆ ನಡೆ ನಿಂತಳು
ಗುರು ಲಿಂಗವಿಡಿದು
ಚೆನ್ನಮಲ್ಲಿಕಾರ್ಜುನರ ನೆರಳು
ಮಹಾಮನೆಯ ಮಹಾಮಗಳು


About The Author

11 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ”

  1. ಭಾಗ್ಯ ಕೋಟಿ

    ಅಕ್ಕನಿಗೆ ಅಕ್ಕರದ ಅಕ್ಷರದಿಂದ ಬರೆದ ನುಡಿಗಳು ಅಮೋಘ

  2. ವಿಶಿಷ್ಟ ಶೀರ್ಷಿಕೆಯಿಂದ ಮೂಡಿ ಬಂದ ಅಕ್ಕನ
    ಕವನ… ಪರಿಪೂರ್ಣವಾದ ಜೀವನ ಚರಿತ್ರೆಯ ಸುಂದರವಾದ ಸಾಲುಗಳಿಂದ ಹೊರಹೊಮ್ಮಿದೆ ಸರ್

    ಸುಧಾ ಪಾಟೀಲ
    ಬೆಳಗಾವಿ

  3. “ಮಹಾಮನೆಯ ಮಹಾಮಗಳು ”
    ಶೀರ್ಷಿಕೆಯಲ್ಲೇ ಕವನದ ಸಾರಾoಶವೆಲ್ಲವೂ ಅಡಗಿ ಅಕ್ಕನ ಬಗೆಗೆ ಬರೆದ ಕವನದ ವಿಶಿಷ್ಟತೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದೆ

  4. ಡಾ ಶರಣಮ್ಮ ಗೋರೆಬಾಳ

    ಅಕ್ಕನ ಇಡೀ ಜೀವನದ ಹಂತಗಳನ್ನು ಕವನದಲ್ಲಿ ಹಿಡಿದಿದ್ದೀರಿ ತುಂಬಾ ಚೆನ್ನಾಗಿದೆ ಕವನ.ಸರ್

  5. ಗೀತಾ ಜಿ ಎಸ್

    ಅಕ್ಕನ ಇಡಿ ಜೀವನ ನಿಮ್ಮ ಕವನದಲ್ಲಿ ಅಡಗಿದೆ ಸರ್

  6. ಉಡುತಡಿಯಲ್ಲಿ ಸಂಜಾತೆಯಾಗಿ, ನಿಸರ್ಗದ ಮಗಳಾಗಿ, ಅನುಭವ ಮಂಟಪದ ಅರಿವಾಗಿ, ಮಹಾಮನೆ ಬೆಳಕಾಗಿ, ಚೆನ್ನಮಲ್ಲಿಕಾರ್ಜುನನಲ್ಲಿ ಒಂದಾಗಿ ಜಗನ್ಮಾತೆಯಾದ ಪರಿಯನ್ನು ಕವನದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.

Leave a Reply

You cannot copy content of this page

Scroll to Top