ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

  1. ಮುತ್ತು.!

ಕಣ್ಣಲ್ಲೇ ನಗುವುದು
ಅವಳಿಗಷ್ಟೇ ಗೊತ್ತು
ಅಧರ ಬಿರಿದರಂತು
ಸುರಿದಂತೆ ಮುತ್ತು.!


  1. ಅನ್ವೇಷಣೆ.!

ಜಿದ್ದಿಗೆ ಬಿದ್ದಂತೆ ಕವಿಗಳೆಲ್ಲ
ಹುಡುಕುತಿಹರು ಪ್ರತಿನಿತ್ಯ
ಹೊಸ ಉಪಮಾನ ಉಪಮೇಯ
ವರ್ಣಿಸಲು ಅವಳ ಮುಗುಳ್ನಗೆಯ.!


  1. ಮೋಡಿ.!

ಹಗಲಲ್ಲೂ ಹೊಳೆವ ಬೆಳದಿಂಗಳು
ಅವಳ ಅಧರಗಳಿಂದ ಸ್ಫುರಿವ
ಮನಮೋಹಕ ನಗೆಮುಗುಳು.!

**

  1. ಪೈಪೋಟಿ.!

ಅವಳ ನಗೆ ಹೊಂಬೆಳಕು ನೋಡಲು
ಮುಗಿಲಲ್ಲು ನಕ್ಷತ್ರಗಳ ನೂಕುನುಗ್ಗಲು
ಹುಣ್ಣಿಮೆಚಂದ್ರನು ಮೋಡಗಳೊಳಗವಿತು
ಒಪ್ಪಿಕೊಂಡಿಹನು ಅವಳೆದುರು ಸೋಲು.!


  1. ಶಾಕು..!

ಶಾಕು ಹೊಡೆಯಲು ಮುಟ್ಟಲೇಬೇಕೆಂದಿಲ್ಲ
ವಿದ್ಯುತ್ ಹರಿಯುತ್ತಿರುವ ಕಂಬದ ತಂತಿ
ಕಣ್ಣರಳಿಸಿ ಕುಣಿಸುತ ಹುಬ್ಬುಗಳ ಮೆಲ್ಲ
ಅವಳು ನಗೆ ಚೆಲ್ಲಿದರೆ ಸಾಕೊಂದು ಸರತಿ.!


  1. ಗಾರುಡಿ.!

ಆ ಮುಗಿಲಂಚಿನ ಕಾಮನಬಿಲ್ಲಿನಲಿ
ಸಪ್ತವರ್ಣಗಳ ಸುಂದರ ತೋರಣ.!
ಅವಳಧರದ ಮುಗುಳು ಮಳೆಬಿಲ್ಲಿನಲಿ
ಸಹಸ್ರವರ್ಣಗಳ ಮಧುರ ಹೂರಣ.!


  1. ಸಮ್ಮೋಹನ.!

ಆ ಹುಬ್ಬುಗಳ ಬಿಲ್ಲನು ಬಾಗಿಸಿ
ತುಂಟನೋಟದ ದಾರವೆಳೆದು
ಮೋಹಕ ನಗೆಬಾಣ ಬಿಟ್ಟೊಡನೆ
ಉರಿಬಿಸಿಲು ಬೆಳದಿಂಗಳಾದಂತೆ

ಜೀವಭಾವ ಸೋತು ಶರಣಾದಂತೆ.!

About The Author

Leave a Reply

You cannot copy content of this page

Scroll to Top