ಕಾವ್ಯ ಸಂಗಾತಿ
ಎಮ್ಮಾರ್ಕೆ
ಹೇಳು ಬಾ ಚಂದ್ರಮ

ಅಲ್ಲಿ ನೀನು,ಇಲ್ಲಿ ನಾನು
ದೂರ ದೂರ ಚಂದ್ರಮ,
ದೂರ ದೂರ ಇರುವಲ್ಲೇ
ಅದೆಂತಹ ಸಂಭ್ರಮ
ಹೇಳು ಬಾ ಚಂದ್ರಮ,
ನೀ ಹೇಳು ಬಾ ಚಂದ್ರಮ
ನೀನು ಕೈಗೆ ಇಟುಕಲಾರೆ
ನನ್ನ ತಲೆಗೆ ಮೊಟಕಲಾರೆ
ನಿನ್ನ ಸುತ್ತ ಮಿನುಗು ತಾರೆ
ನನ್ನ ಒಳಗೆ ಒಲವ ಧಾರೆ
ಇದುವೇ ಅದ್ಭುತ ಸಂಗಮ
ನೋಟವೆನಿತು ವಿಹಂಗಮ
ನೀ ಬೆಳದಿಂಗಳನು ತರುವೆ
ನಾ ಅದರಂಗಳದಿ ಇರುವೆ
ಅಮವಾಸೆಗೆ ನೀ ಅಗಲುವೆ
ಹುಣ್ಣಿಮೆಗೆ ನಾ ಕಾಯುವೆ
ಕಾಯುವಿಕೆಯು ನಿರಂತರ
ಕಳೆವುದೆಂತು ಈ ಅಂತರ
ನೀನು ಎಂದೂ ಸ್ಪಂದಿಸುವೆ
ಬಳಿಗೆ ಬಂದು ಸಂಧಿಸುವೆ
ದಕ್ಕದುದ ಬಯಸಿಬಿಕ್ಕುವೆ
ತೋಳ ತೆಕ್ಕೆಗೆಂದು ಸಿಕ್ಕುವೆ
ಎಲ್ಲದಕೂ ನೀ ನಿರುತ್ತರ
ನೀಡಲಾರೆಯಾ ಉತ್ತರ
———————–
ಎಮ್ಮಾರ್ಕೆ





1 thought on “ಎಮ್ಮಾರ್ಕೆ ಅವರ ಕವಿತೆ-ಹೇಳು ಬಾ ಚಂದ್ರಮ”