ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಸ್ತಕವೆ ಜಗವ ಗೆಲ್ಲುವ ದಾರಿವೆಂದು ತೋರಿ ಹೋದವರು ಅವರು
ನಿತ್ಯ ದಿನಗಳ ಸುಟ್ಟುಕೊಂಡು ಬೆಳಕಿದೆಂದು ತೋರಿ ಹೋದವರು ಅವರು

ರಕ್ತ ಬೆವರುಗಳುಬೆರೆದು  ಅಕ್ಕರದ ರೂಪ ಪಡೆದವು ಜಗಕೆ ಪ್ರಕಾಶವಾಗಲು
ಹಗಲು ರಾತ್ರಿಗಳನೊಂದಾಗಿಸಿ ಸಂಪದವಿದೆಂದು ತೋರಿ ಹೋದವರು ಅವರು

ದೇಶಕಾಲ ಸಂಬಂಧಗಳಾಚೆ ಸಂಪರ್ಕವು ಸಾಧ್ಯವಾಯಿತು ಅವರಿಗೆ
ಲೆಕ್ಕಣಿಕೆ ಹುಟ್ಟು‌ಹಾಕಿ ಪುಸ್ತಕದ ದೋಣಿಯಿದೆಂದು ತೋರಿ ಹೋದವರು ಅವರು

ವಿದ್ಯೆ ಹುಡುಕಿ ಬಂದ  ಎಳೆಯ ಜೀವಗಳ ಕುಲಗೋತ್ರ ಎಣಿಸಲಿಲ್ಲ
ದೀರ್ಘದಾರಿಯನು ದಾಟಲು ದಾರಿಯಿದೆಂದು ತೋರಿ ಹೋದವರು ಅವರು

ನೆಲದ ಮೇಲಿದ್ದ ಜೋಗಿಯನೂ ಅಂತಸ್ತಿಗೇರಿಸಲು ಮಾರ್ಗವದಾಗಿತ್ತು
ಕೋಶವೇ ದೇಶದಾಚೆಗೆ ಸಾಗುವ ಏಣಿಯಿದೆಂದು ತೋರಿದರು ಅವರು


About The Author

Leave a Reply

You cannot copy content of this page

Scroll to Top