ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಸಿರೊಳು ಉಸುರಲಾರದಷ್ಟು ನೋವಂತೂ ಇದೆ
ಇನ್ನೆಷ್ಟು ಮುಚ್ಚಿಡುವೆ ಹೇಳಿ ಬಿಡುವೆಯಾ?
ಕಂಬನಿ ಹನಿ ಕಣ್ಣುಗಳಲ್ಲೇ ಹೆಪ್ಪುಗಟ್ಟಿಯಾಗಿದೆ
ಮತ್ತೆಷ್ಟು ಉಪ್ಪಿಡುವೆ ಹೇಳಿ ಬಿಡುವೆಯಾ?

ಕೈ ಕೈ ಹಿಡಿದದ್ದು ಮನಸೆರಡು ಕೂಡಿ
ಮಿಡಿದದ್ದಂತೂ ನಿಜವಲ್ಲವೆ
ಸತ್ಯವ ನೇಪಥ್ಯಕ್ಕೆ ಸರಿಸಿ ಮಿಥ್ಯವನೇಕೆ
ಮಥಿಸುವೆ ಹೇಳಿ ಬಿಡುವೆಯಾ?

ಬೆರಳು-ಬೆರಳು,ಬೆನ್ನು-ಬೆನ್ನು ಸೋ(ತಾ)ಕಿಸಿದ
ಘಳಿಗೆಗಳದು ಲೆಕ್ಕವುಂಟೆ
ಬಾರಿ ಬಾರಿ ಬಳಿ ಬಂದಣಕಿಸಿದಷ್ಟು ದೂರವೇಕೆ
ಸರಿಯುವೆ ಹೇಳಿ ಬಿಡುವೆಯಾ?

ನನ್ನ ಅಗಲಿರಲಾರೆಂದು ಮುಗಿಲಿಗೂ
ಕೇಳುವಂತೆ ಕೂಗಿದ್ದೆ ಅಂದು
ಆ ಗಗನ ಮೌನ ಮುರಿದರೂ ನೀನೇಕೆ
ಸುಮ್ಮನಿರುವೆ ಹೇಳಿ ಬಿಡುವೆಯಾ

ಹೊಳೆವ ನಕ್ಷತ್ರಗಳ ಎಣಿಸಿ ಎದೆಗಿಳಿಸಿ-
-ಕೊಳ್ಳಬೇಕೆಂಬ ಬಯಕೆಯುಂಟು
ಎದೆ(ಬೇ)ಗುದಿಯ ತಣಿಸದೆ ನೀನೇಕಿಂದು
ನಿಲುಕದಿರುವೆ ಹೇಳಿ ಬಿಡುವೆಯಾ?

ಮದಿರಾಮಂದಿರದಲ್ಲೀಗ ಒಂಟಿಯಾಗಿ
ಕುಳಿತಿರುವೆನು ಮೌನಧ್ಯಾನದಲ್ಲಿ
ಈ ಕುಂಬಾರನ ಕುಂಭದಿ ಬಿಂಬ ತೋರದೇಕೆ
ಹೋಗಿರುವೆ ಹೇಳಿ ಬಿಡುವೆಯಾ

—-

About The Author

Leave a Reply

You cannot copy content of this page

Scroll to Top