ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅದೇಕೋ ತೆಪ್ಪಗಿದೆ
ಹುತ್ತದೊಳಗಿನ ಹಾವು
ಮರೆತು ಬಿಟ್ಟಿದೆ, ಸೆಟೆದು
ಬುಸುಗುಡುವುದನು…

ಏನು ಮಾಡೀತು
ಹಲ್ಲು ಉದುರಿದ ಮೇಲೆ..?
ಹೆದರುತಿದೆ ಹುಲ್ಲಿಗೂ,
ಬೆದರಿ ಬೆವರುತಿದೆ ಕಲ್ಲಿಗೂ..!

ಕಂಡ ಕಂಡವರ ಕಚ್ಚಿ
ವಿಷವೂಡಿ, ಹೆಡೆ ಬಿಚ್ಚಿ
ಪೌರುಷವ ಮೆರೆದು
ಮಾಯವಾಗಿತ್ತು ಅಂದು…!

ಕಾಲಚಕ್ರ ಬದಲಾಗಿದೆ
ಇಣುಕಿ ನೋಡಿದರೂ
ಕೊಚ್ಚಿ , ಕಿಚ್ಚಿಗೆ ಎಸೆಯುತ್ತಾರೆ
ನರಳಿ ನೊಂದ ಶೋಷಿತ ಜೀವಿಗಳು…!!!!


About The Author

4 thoughts on “ಹಮೀದಾಬೇಗಂ ದೇಸಾಯಿ-ಹುತ್ತದೊಳಗಿನ ಹಾವು”

  1. ಹುತ್ತ ದೊಳಗಿನ ಹಾವು;
    ಈ ಕವಿತೆಯು ಶಕ್ತಿಯ ಬಗ್ಗೆ, ಕಾಲಚಕ್ರದ ಬಗ್ಗೆ ಮತ್ತು ಸಮಾಜದಲ್ಲಿನ ಅಸಮಾನತೆಯ ಬಗ್ಗೆ ಮಾತನಾಡುತ್ತದೆ. ಒಂದು ಕಾಲದಲ್ಲಿ ಬಲಶಾಲಿಯಾಗಿದ್ದವರು ಕೂಡ ಕಾಲಕ್ರಮೇಣ ದುರ್ಬಲರಾಗಬಹುದು ಎಂಬುದನ್ನು ಇದು ಹೇಳುತ್ತದೆ. ಅಲ್ಲದೆ, ಸಮಾಜದಲ್ಲಿ ಶೋಷಿತರಾದವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೋರಾಡಬೇಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.

  2. ಓದಿ ಸ್ಪಂದಿಸಿದ ತಮಗೆ ಧನ್ಯವಾದಗಳು

    ಹಮೀದಾಬೇಗಂ ದೇಸಾಯಿ.ಸಂಕೇಶ್ವರ.

  3. ಹತ್ತು ಹಲವು ಮಜಲುಗಳಲ್ಲಿ ಸಮಾಜ ಮತ್ತು ಬದುಕಿನ ಬೇಗುದಿಯ ಚಿತ್ರಣವನ್ನು ಮಾರ್ಮಿಕವಾಗಿ ಚಿತ್ರಿಸಿದ ರೀತಿ ಕಣ್ತೆರೆಸುವಂತಿದೆ.

  4. ಸ್ಪಂದನೆಗೆ ಧನ್ಯವಾದ ತಮಗೆ

    ಹಮೀದಾಬೇಗಂ ದೇಸಾಯಿ.ಸಂಕೇಶ್ವರ.

Leave a Reply

You cannot copy content of this page

Scroll to Top