ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹುಡಿಗೆಯೊಬ್ಬಳಿಂದ
ಬಂದ ಮಿಂಚಿನ
ಸಂದೇಶ ಓದಿದ
ಮುದಕನಿಗೆ
ಮೂಡಿತು ಸಂಚಲನ
ಹಚ್ಚಿದ ಬಿಳಿ‌ಕೂದಲಿಗೆ
ಕರಿ ಬಣ್ಣ .ಇದ್ದ
ಅರಿವೆಗಳನ್ನೆ
ಮತ್ತೆ ನೆಟ್ಟಗಾಗಿಸಿ
ಇಸ್ತ್ರಿಮಾಡಿಸಿ
ಹೊರಟವನವಳು
ಕೊಟ್ಟಿದ್ದ ಗುಪ್ತ
ಜಾಗೆಯ ಕಡೆಗೆ
ಅವಳ ಸಂದೇಶವನರಸಿ

ಇವನಂತೆಯೆ ಅತ್ತಲೂ
ನಡೆದಿತ್ತು ತಯಾರಿ
ಮುಖದ ಸುಕ್ಕುಗಳಿಗೆ
ಬಣ್ಣ ಸವರಿ
ಮಟ್ಟಸವಾದ ಸೀರೆಯನ್ನೆ
ರಾತ್ರಿಯಲ್ಲ ತೀಡಿ
ನೇರ್ಪುಗೊಳಿಸಿ
ಸಂಧ್ಯೆಯಾಗುವದೆ ತಡ
ಅರಸಿ ಹೊರಟಳು.
ಹುಡುಗನ ಕನಸಿ

ಅಂತೆ ಬಂದೇ ಬಿಟ್ಟಿತು
ಅವರಿತ್ತ ಸಂದೇಶದ
ಗುಪ್ತ ಜಾಗ !

ಬಹಳ ಹೊತ್ತಿನವರೆಗೆ
ಕಾದರು ಕಾದೇ ಕಾದರು.
ಹುಡುಗನಿಗಾಗಿ
ಅವಳು
ಹುಡುಗಿಗಾಗಿ
ಅವನು
ಆದರೆ ಅವನ ಕಡೆಗೂ
ಬರಲೇ ಇಲ್ಲ ಒ‌ಂ ದು
ಸೊಳ್ಳೆಯೂ

ಆತ ದೂರದಲ್ಲಿ ನಿಂತೆ ಇದ್ದ
ಶತಪಥ ತಿರುಗುತ್ತ
ಇವಳೂ ಉಗುರು ಕಚ್ಚುತ್ತ
ಕಡೆಗೂ ತಡೆಯಲಾಗದೆ
ಮುದುಕಿ ಆರ್ ..ಯು
ಎಂದು ಉದ್ಘರಿಸುವದಕೂ
ಹೊರಟಿತ್ತು ಅತ್ತಲೊಂದು
ಗೊಗ್ಗರು ದನಿಯ ಅವವೆ
ಎರಡು‌ ಪದಗಳ ಧ್ವನಿ
ಕಡೆಗೂ ಗೊತ್ತಾಯಿತು
ಇಬ್ಬರ ಗುಟ್ಟು ರಟ್ಟಾಯಿತು
ಹದಿನಾರಲ್ಲ ಅರವತ್ತೆಂದು ಅರ್ಥವಾಯಿತು!

ಸಂಜೆಯ ಸೂರ್ಯ
ಕಣ್ಣು‌ಮಿಟುಕಿಸಿ
ಸಂಜ್ಞೆ ಕೊಟ್ಟ .
ನಾನೂ ನಿಮ್ಮಂತೆ
ಈಗ ದಣಿದ ಮುದುಕ
ಹೊರಟಿದ್ದೇನೆ
ವೃದ್ಧೆ ರಜನಿಯನ್ನರಸಿ.
ಎಂದಂತಾಯಿತು

ಅವರಿಬ್ಬರ ಕಣ್ಣಲಿ
ಒಂದು ಸತ್ಯದ ಮಿಂಚು
ಇಬ್ಬರ ಕಣ್ಣಲಿ
ಹೊಳೆದಂತಾಯಿತು
ಅವಳ ಜೋತು ಬಿದ್ದ ಮುಖದ ಚರ್ಮದಲು
ಅವನ ಬಿಳಿಕೂದಲಿನ
ಮೂಲದ ನೆರಿಗೆಯೊಳು
ಒಂದಿಷ್ಟು
ಗಾಳಿ ತುಸುವೆ
ರೋಮಾಂಚನ
ಮೂಡಿಸಿತು
ಬಿರು ಬೇಸಿಗೆಯ ಆ
ಒಣ ಸಂಜೆಯಲು
ಹಿತವಾದ ಗಾಳಿ ಬೀಸಿತು
ಅರಸಿ ನಡೆದರು
ತಮಗಾಗಿ ಕಾದಿದ್ದ ಏಕಾಂತದ
ಒಂಟಿಕಲ್ಲ ಬೆಂಚನರಸಿ

ದೂರದಲ್ಲೆಲ್ಲೋ
ಜೋಡಿ ಹಕ್ಕಿಯ
ಕುಹೂ ಕೇಳಿತು

ಸಂಜೆ ಧನ್ಯವಾಯಿತು


About The Author

Leave a Reply

You cannot copy content of this page

Scroll to Top