ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಹಿಳಾ ಪ್ರಗತಿಗಿವೆ ಹಲವು ರಹದಾರಿ

ಮಹಿಳೆ ಪ್ರತಿ ಕಾಲಘಟ್ಟದಲ್ಲಿಯೂ ಒಂದೊಂದು ಇತಿಹಾಸ ಸೃಷ್ಟಿಸುತ್ತಾ ಬರುತ್ತಿದ್ದಾಳೆ. ಅದಷ್ಟೇ ಅಲ್ಲದೇ ತನ್ನ ಇರುವಿಕೆಯೂ ಈ ಸಮಾಜಕ್ಕೆ ಬಹಳ ಮುಖ್ಯ ಎಂದು ತೋರಿಸುತ್ತಾ ಬಂದಿದ್ದಾಳೆ. ಎಲ್ಲಾ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸುತ್ತಿದ್ದಾಳೆ. ಇಂತಹ ಮಹಿಳೆ ಸಂವಿಧಾನಾತ್ಮಕವಾಗಿಯೂ ತನಗಿರುವ ಹಕ್ಕುಗಳನ್ನು ಅರಿತರೆ ಮತ್ತಷ್ಟು ಬಲಗೊಳ್ಳುವುದರಲ್ಲಿ ಸಂದೇಹವಿಲ್ಲ.

ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ಸಂವಿಧಾನ ರಚನಾ ಸಭೆಯಲ್ಲಿಯೂ ಸಹಾ 15 ಮಹಿಳಾ ಸದಸ್ಯೆಯರಿದ್ದರು. ಇದಷ್ಟೇ ಅಲ್ಲದೇ ಸಂವಿಧಾನ ಜಾರಿಗೊಂಡ ನಂತರವೂ ಸರ್ಕಾರದ ಎಲ್ಲಾ ಹುದ್ದೆಗಳಲ್ಲಿಯೂ ಹಾಗೂ ಅಧಿಕಾರಗಳಲ್ಲಿಯೂ ಮಹಿಳೆಯರು ತಮ್ಮ ಇರುವಿಕೆ ಹಾಗೂ ನೈಪುಣ್ಯತೆಯನ್ನು ತೋರುಪಡಿಸಿದ್ದಾರೆ. ಹಾಗೆಯೇ ಮಹಿಳೆಯರ ಏಳಿಗೆಗಾಗಿ ಸರ್ಕಾರಗಳು ಹಲವು ಯೋಜನೆಗಳನ್ನೂ ಸಹಾ ರೂಪಿಸಿ ಜಾರಿಗೆ ತರಲಾಗಿದೆ.

ಆದರೆ ಇಂತಹ ಹಲವು ಕಾನೂನುಗಳು, ಯೋಜನೆಗಳು ಮಹಿಳೆಯರು ತಿಳಿಯುವ ಅಗತ್ಯ ಬಹಳ ಇದೆ. ಆಗ ಮಾತ್ರ ಮಹಿಳೆ ರಾಜಕೀಯವಾಗಿ, ಸಾಮಾಜಿಕವಾಗಿ ಅರಿತು ಬೆರೆತು ಬೆಳೆಯಲು ಅಸ್ಪದವಾಗುತ್ತದೆ. ಪ್ರಮುಖವಾಗಿ ” ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ” ಯೂ ಮಹಿಳೆಯರ ಸಬಲೀಕರಣಕಾಗಿಯೇ ಇರುವ ಪ್ರಮುಖ ಇಲಾಖೆಯಾಗಿದೆ.

ಈ ಇಲಾಖೆ ಮಹಿಳೆಯರಿಗೆ, ಕಿಶೋರಿಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕ ಯೋಜನೆಗಳನ್ನು ಹೊಂದಿದೆ. ಮಹಿಳೆಯರಿಗಿರುವ ಯೋಜನೆಗಳನ್ನು ಅವರ ಆರೋಗ್ಯ, ಆರ್ಥಿಕತೆ, ರಕ್ಷಣೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ್ದವುಗಳಾಗಿವೆ. ಇವೆಲ್ಲವೂ ಮಹಿಳೆಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ.

 ಇಲಾಖಾ ಯೋಜನೆಗಳು ಇಲ್ಲಿವೆ.


1. ಉದ್ಯೋಗಿನಿ ಯೋಜನೆ

ಮಹಿಳೆಯರು ಆದಾಯೋತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಳು ಸಾಲ ಮತ್ತು ಸಹಾಯಧನದ ಜೊತೆಗೆ ಉದ್ಯಮಶೀಲತಾ ತರಬೇತಿ ನೀಡುವ ಯೋಜನೆ ಇದಾಗಿದೆ.

2. ಕಿರುಸಾಲ ಯೋಜನೆ

ಆದಯೋತ್ಪನ್ನ ಚಟುವಟಿಕೆ ನಡೆಸಲು ಸ್ತ್ರೀಶಕ್ತಿ ಗುಂಪುಗಳಿಗೆ ಬಡ್ಡಿರಹಿತ ಸಾಲ ಸೌಲಭ್ಯ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

3. ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆ

ಲಿಂಗತ್ವ ಅಲ್ಪಸಂಖ್ಯಾತರು ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು ಸಾಲ ಸೌಲಭ್ಯ ಹಾಗೂ ಉದ್ಯಮಶೀಲತಾ ತರಬೇತಿ ಕೊಡಿಸುವ ಮೂಲಕ ವೃತ್ತಿ ಆರಂಭಿಸಿ ಘನತೆಯ ಜೀವನ ನಡೆಸಲು ಪ್ರೋತ್ಸಾಹ ನೀಡುವುದು ಈ ಯೋಜನೆಯ ಗುರಿಯಾಗಿದೆ.

4. ಚೇತನಾ ಯೋಜನೆ

ಈ ಯೋಜನೆಯಡಿ ಆಸಕ್ತಿಯುಳ್ಳ ಲೈಂಗಿಕ ಕಾರ್ಯಕರ್ತೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಹಾಗೂ ಉದ್ಯಮಶೀಲತಾ ತರಬೇತಿ ಕೊಡಿಸಿ ಘನತೆಯ ಜೀವನ ನಡೆಸಲು ಸಹಾಯಧನ ನೀಡಲಾಗುವುದು.

 5. ಧನಶ್ರೀ ಯೋಜನೆ

HIV ಸೋಂಕಿತ ಸಂತ್ರಸ್ತೆಯರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ನೇರ ಸಾಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

 6. ಸಮೃದ್ಧಿ ಯೋಜನೆ

ಆರ್ಥಿಕವಾಗಿ ಹಿಂದುಳಿದ ಬಿಡಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ನಗರ ಮತ್ತು ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿರುವ ಮಹಿಳಾ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಪ್ರೋತ್ಸಾಹಧನ ಒದಗಿಸುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ನಿರುದ್ಯೋಗ ಸಮಸ್ಯೆಯ ನಿವಾರಣೆ ಈ ಯೋಜನೆಯ ಆಶಯವಾಗಿದೆ.

7. ಮಹಿಳಾ ವಿಶೇಷ ಚಿಕಿತ್ಸಾ ಘಟಕ.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ಸೌಲಭ್ಯ ಅಂದರೆ ತುರ್ತು ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು ಮತ್ತು ಆಪ್ತ ಸಮಾಲೋಚನೆ ವ್ಯವಸ್ಥೆಯನ್ನು ಒದಗಿಸಲು ಆರಂಭವಾದ ಯೋಜನೆ ಇದಾಗಿದೆ.

 ರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಈ ಸಂದರ್ಭದಲ್ಲಿ ಮಹಿಳಾ ಪ್ರಗತಿ ದೇಶದ ಏಳಿಗೆಗೆ ಬಹಳ ಮುಖ್ಯ. ಈ ಎಲ್ಲ ಯೋಜನೆಗಳು ಎಲ್ಲಾ ಮಹಿಳೆಯರ ಅರಿವಿಗೆ ಬಂದಾಗ ಬಹುಶಃ ಮಹಿಳಾ ಸಬಲೀಕರಣ ಮತ್ತೊಂದು ದೊಡ್ಡ ಹಂತ ತಲುಪುವುದರಲ್ಲಿ ಸಹಾಯವಾಗುತ್ತದೆ.


About The Author

Leave a Reply

You cannot copy content of this page

Scroll to Top