ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನೆದೆಯ ಹೊದರಿನಲಿ
ಮೊಳೆತು ಕಣ್ತೆರೆದ ಪ್ರೀತಿ
ಮುಂಗಾರು ಮಳೆಗೆ
ಮೈಯೊಡ್ಡಿ ಮೀಯುತಿದೆ

ಈ ತುಂತುರು ಮಳೆ
ನಿನ್ನ ಬೆಚ್ಚನೆಯ
ಸ್ಪರ್ಶದಂತೆ
ಮೈಯೆಲ್ಲಾ ಹರಿದಾಡುತ್ತದೆ

ನೀ ಸುರಿದ
ಮುತ್ತಿನ ಮಳೆಯ
ಮುಂದೆ ಈ ನಿಸರ್ಗದ
ಮಳೆಯು ಸೋತಿದೆ

ಈ ಚಳಿಯಲ್ಲಿ
ನಿನ್ನ ನೆನಪುಗಳ
ಅಪ್ಪಿಕೊಂಡು
ಬೆಚ್ಚಗಿನ ಬಾವಗಳ
ಹೊದ್ದುಕೊಂಡು
ಸುಖಿಸುವೆ


About The Author

Leave a Reply

You cannot copy content of this page

Scroll to Top