ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನಂತೆ ವಾದಿಸಲಾರೆ
ನನಗೆ ಗೊತ್ತು
ನಾನು ಸೋಲುವೆ

ನಿನಗೂ ಗೊತ್ತಿದೆ
ಘರ್ಷಣೆಯಿಂದ
ಏನನ್ನೂ ಗೆಲ್ಲಲಾಗದು

ನಿನ್ನಂತೆ
ಜಿದ್ದು ಮಾಡಲಾರೆ
ನನಗೆ ಗೊತ್ತು
ಈ ಹ್ಯಾವಿನಿಂದ
ಏನೂ ಆಗದು

ನಿನಗೂ ಗೊತ್ತಿದೆ
ಹಠವಾದಿ ಪಡೆದರೂ
ಸಂಪೂರ್ಣ ಅವನದಾಗದು

ನಿನ್ನಂತೆ
ಆರ್ಭಟಿಸಲಾರೆ
ನನಗೆ ಗೊತ್ತು
ಅದೆಲ್ಲ ಭಯವಷ್ಟೇ..

ನಿನಗೂ ಗೊತ್ತಿದೆ
ಗರ್ಝನೆಯ ಮೋಡ
ಹನಿ ಸುರಿಸದು

ಗೊತ್ತಾಗಿಯೂ
ಎರಡು ದಾರಿಗಳು
ಕೊನೆಗೂ
ಎರಡಾಗಿಯೇ ಉಳಿದವು


About The Author

6 thoughts on “ಅನಸೂಯ ಜಹಗೀರದಾರ ಅವರ ಕವಿತೆ- ‘ಎರಡು ದಾರಿ’”

  1. ಮನದಳಲು ಮೂಡಿ ಬಂದ ಕವನ..

    ಹಮೀದಾಬೇಗಂ ದೇಸಾಯಿ.

Leave a Reply

You cannot copy content of this page

Scroll to Top