ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾಮದಾಹ ತೀರಿಸಿಕೊಳ್ಳಲು ಹಸುಳೆಗಳನ್ನೂ ಬಿಡದ ಕಚ್ಚೆಹರಕ ಪ್ರೇತಗಳ ಅಟ್ಟಹಾಸ
ಹಸಿದ ಅಧಿಕಾರದ ಅಮಲಿನಲ್ಲಿ ಸಗಣಿ ಸಾಲದ ಹೊಟ್ಟೆಬಾಕ ದೆವ್ವಗಳ ಅಟ್ಟಹಾಸ

ಹೆತ್ತ ತಾಯಿಯ ಒಡಲ ಬಡವರ ರಕ್ತ ಬಗೆ ಬಗೆದು ತಿಂದು ತೇಗುತಿಹ ರಕ್ಕಸರು
ಚಟ ವ್ಯಸನಗಳ ದಾಸರಾಗಿ ದರಿದ್ರವ ಎಲ್ಲೆಂದರಲ್ಲಿ ಉಗುಳುವ ಮಿಕಗಳ ಅಟ್ಟಹಾಸ

ಅರಿವು ಆಚಾರ ಅರಿಯದ ವಿಚಾರ ಶೂನ್ಯರ ದಂಡು ದಾಂಡಿಗರ ಹಿಂಡೇ ಕಾಣುತಿದೆ
ಹೇಯ ಕೃತ್ಯಗಳ ಹೇಸದೆ ಮಾಡುತ ಮೆರೆಯುತಿಹ ನರಹಂತಕ ಭೂತಗಳ ಅಟ್ಟಹಾಸ

ಸ್ವತಂತ್ರವೆಂಬುದು ಏತಕ್ಕಾದರೂ ಬಂತೊ ದೇವರೇ ಎನ್ನುವ ಸ್ಥಿತಿ ಇಂದು ಬಂದೊಗಿದೆ
ನಿಯತ್ತು ನಿಷ್ಠೆಯಿರದ ಸುಳ್ಳು ಕಪಟ ನೀಚ ವಂಚಕ ಕಾವಿ ಕಾದಿ ಕಾಕಿಗಳ ಅಟ್ಟಹಾಸ

ಎಲ್ಲೆಲ್ಲೂ ಕೊಲೆ ಸುಲಿಗೆ ಅತ್ಯಾಚಾರಗಳ ಬರ್ಬರ ದೃಶ್ಯಗಳು ನೋಡಲಾಗದು ಅಕಟಕಟ
ಭ್ರಷ್ಟತೆಯ ಗಾವುಲರು ಹದ್ದಿನಂತೆ ಹರಿದು ತಿನ್ನುವ ತಿರುಕ ತಾಟಕಿಗಳ ಅಟ್ಟಹಾಸ

ತೃಪ್ತಿ ಇರದ ಅತೃಪ್ತ ಆತ್ಮಗಳ ಗುರಿಯಿಲ್ಲದ ಹುಚ್ಚು ಅಲೆದಾಟದ ಅಬ್ಬರದ ಸಾಗರ
ಜೊಲ್ಲು ಸುರಿಸುವ ಆಸೆ ಬುರುಕ ಮೋಸದಾಟದ ನರಿಗಳ ಅಟ್ಟಹಾಸ

ವ್ಯವಹಾರದ ವಿಚಾರದಲ್ಲಿ ಕೈಚಳಕ ಕುಶಲತೆ ಚಾಣಾಕ್ಷತೆ ಚತುರತೆ ಏನಿವರ ಖದರ
ನ್ಯಾಯ ದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿ ಅನ್ಯಾಯ ಗೆಲ್ಲಿಸುವ ಕೋಟುಗಳ ಅಟ್ಟಹಾಸ


About The Author

Leave a Reply

You cannot copy content of this page

Scroll to Top