ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

೧. ಮಳೆ ಬರಲೆಂದು
ನಮ್ಮೂರ ಮಂದಿ
ಕಡಿದರು ಮಾರಿಗೆ ನೂರಾರು
ಕುರಿ ಕೋಳಿ ಹಂದಿ
ಹರಿದ ರಕ್ತ ನೋಡಿ
ಸುರಿಸಿದ ಮಳೆರಾಯ
ಕಣ್ಣೀರ ಕೋಡಿ.

೨. ನಮ್ಮೂರ ಕೆರೆಗೆ
ಮಳೆಯ ಹನಿ-
ಗಳು ಸೇರಿ
ತುಂಬಿದ ಒಡಲಲ್ಲಿ
ನವ ಮಾಸಗಳ ಸಿರಿ.!

೩. ಹನಿಮೂನ್
ನನಗೆ ಸಿಹಿಯಲ್ಲ
ಏಕೆಂದರೆ ನಮ್ಮೂರ ಕೆರೆ
ಬಾವಿಯಲ್ಲಿ ಹನಿ ನೀರಿಲ್ಲ
ಅದಕ್ಕೆ ಮಳೆರಾಯ
ಇಳೆಗೆ ಇಳಿಯೋ ಮಹಾರಾಯ

About The Author

Leave a Reply

You cannot copy content of this page

Scroll to Top