ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗುರುವಿನುಪದೇಶದಲಿ ಮನದತಮ ಕಳೆಯುವುದು
ಹರಿಯುವುದು ಚೇತನದ ಸವಿಹೊನಲದು
ಪರಿಧಿಯನು ದಾಟುವುವು ಸುಜ್ಞಾನದ ಕಿರಣಗಳು
ತರುತಲಿವೆ ಹೊಸಬೆಳಕು ನರಹರಿಸುತೆ

ಚಿಂತನವು ಸರಿ ದಾರಿ ಹಿಡಿದು ಸಾಗುತಲಿರಲು
ಮಂಥನವು ಸತತವೂ ನಡೆಯುತಿರಲು
ನಿಂತ ನೀರಾಗದೆ ಹರಿದಿರಲು ಬಾಳಿದುವೆ ಸಂತತವು ಗುರುವಿರಲಿ ನರಹರಿಸುತೆ

ಅಕ್ಷರದ ತಿಳಿವದನು ಲಕ್ಷ್ಯದಲಿ ಕಲಿಸುತಲಿ
ಕಕ್ಷೆಯಲಿ ಕಾಪಿಡುತ ನೋಡಿದವರು
ಚಕ್ಷುವಿನ ಮಣಿಯಂತೆ ರಕ್ಷಿಸುವ ರೀತಿಯಲಿ
ಯಕ್ಷಿಣಿಯ ಮಾಡಿದರು ನರಹರಿಸುತೆ

ಅರಿವಿರದಬೋಧರನು ಗುರಿಯೆಡೆಗೆ ಕರೆದೊಯ್ದ
ಗುರುಗಳಿಗೆ ವಂದಿಸುವೆನಭಿಮಾನದಿ
ಅರಿವಿರದ ವೇಳೆಯಲಿ ಕೊರತೆಯನು ತೋರದೆಲೆ
ಪರಿವಿಡಿದಗೆ ವಂದನೆ ನರಹರಿಸುತೆ


About The Author

2 thoughts on “ಗುರು ಪೂರ್ಣಿಮಾ ವಿಶೇಷ ಸುಜಾತಾ ರವೀಶ್”

  1. ಸೊಗಸಾದ ಮುಕ್ತಕಗಳು. ಅರ್ಥಗರ್ಭಿತ ವೈಚಾರಿಕವಾದ ಸಾಲುಗಳು. ಬಹಳ ಪ್ರಿಯವಾಯಿತು

  2. ಬಹಳ ಚೆಂದದ ಮುಕ್ತಕಗಳು.ಅರ್ಥಪೂರ್ಣ ಸಕಾಲಿಕ ಕೂಡಾ

Leave a Reply

You cannot copy content of this page

Scroll to Top