ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಧ್ಯಾತ್ಮಿಕ ಅನ್ವೇಷಣೆಯ
ಅಂತರಂಗದ ಆಚರಣೆಗೆ
ಜೀವಶಕ್ತಿ ನೀಡುವ ಗುರುವಿಗೆ ವಂದನೆ

ಅನವರತವೂ ಅಮ್ಮನಂತೆ
ಅನುಪಮ ಪ್ರೀತಿತೋರಿಸುತ
ಜ್ಞಾನಶಕ್ತಿ ನೀಡುವ ಗುರುವಿಗೆ ವಂದನೆ

ಅಹಂಕಾರ ಮಮಕಾರಗಳ
ಅಳಿಸುತ ಅರಿವಿನರಮನೆಗೆ
ಕರೆದೊಯ್ಯುವ ಗುರುವಿಗೆ ವಂದನೆ

ಅಜ್ಞಾನಂಧಕಾರ ಪರದೆ ಸರಿಸಿ
ಅಮೃತಸುಧೆಯನುಣಿಸುವ
ಅನುಪಮೇಯ ಗುರುವಿಗೆ ವಂದನೆ

ಅಂತರಂಗದ ಪಯಣದಲಿ
ಅನುಭವದ ಆನಂದದಲಿ
ಮುಳುಗೇಳಿಸುವ ಗುರುವಿಗೆ ವಂದನೆ

ಆಷಾಢ ವ್ಯಾಸ ಪೂರ್ಣಿಮೆ
ಗುರು ಪೂರ್ಣಿಮೆ ಚಂದ್ರನ
ಪ್ರಕಾಶ ನೀಡುವ ಗುರುವಿಗೆ ವಂದನೆ

ಗುರು ಹಿಂದೆ ಗುರಿ ಮುಂದೆ
ಇರಲು ಭಯವೇ ಇರದು
ಅಭಯದಾತ ಗುರುವಿಗೆ ವಂದನೆಗಳು

ಗುರುದೇವ ಸುಪ್ತ ಪ್ರಜ್ಞೆಯಲಿ
ಶಿವನ ಗುಪ್ತ ರೂಪ ತೋರಿಸಿ
ಮುಕ್ತನನ್ನಾಗಿ ಮಾಡುವ ಮೋಕ್ಷದಾತನು

ಸರ್ವಧರ್ಮ ಸಂಪ್ರದಾಯದ
ಸಾರ್ವಕಾಲಿಕ ಗುರುತತ್ವಕೆ
ಕೃತಜ್ಞತಾಪೂರ್ವಕ ನನ್ನ ವಂದನೆಗಳು


About The Author

Leave a Reply

You cannot copy content of this page

Scroll to Top