ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅತಿಥಿಯ ಸತ್ಕಾರ
ಬಂಧುಗಳ ವಿಸ್ವಾಸ,
ಹಂಚಿ ತಿನ್ನುವ ಚಾಳಿ
ಅಮ್ಮನ ಬಳುವಳಿ.

ಸಂಸಾರ ಸಾಗರದಿ
ಎಷ್ಟೊಂದು ಅಲೆಗಳು
ತಲೆ ತಗ್ಗಿಸಿ ಈಜು
ಸುಗಮವದು ಬಾಳು.

ಜೀವನದಾಟದಲಿ
ಸೋಲು- ಜಯ ಸಹಜ
ಸೋಲೊಂದೆಮಗೆ ಪಾಠ
ಗೆಲ್ಲಬೇಕೆಂಬ ಹಠ.

ತಪ್ಪನ್ನು ಮರೆಮಾಚಿ
ತನ್ನದೇ ಸರಿ ಎಂದು
ವಾದಿಸುವ ಲೇಖನ
ಅದೇ ಆತ್ಮಕಥನ.

ಸುಗಮ ಕೆಲಸಕೆ
ನರ- ನಾರಾಯಣಗೂ
ಲಂಚವೆಂಬ ಕಾಣಿಕೆ
ಮಂತ್ರದಿ ಹೊಗಳಿಕೆ.

ಗೊತ್ತಿದ್ದೂ ಇಲ್ಲದಂತೆ
ಇರೋದು ಬರೀ ಗತ್ತು
ಸತ್ಯವು ಯಾವಾಗಲೂ
ಒಳ ಮನಕೆ ಗೊತ್ತು.

ಅಳಿಯ ಒಳ್ಳೆಯವ
ಮಗಳ ಮಾತ್ಕೇಳ್ತಾನ,
ಮಗನೇ ನಾಲಾಯಕ್
ಸೊಸೆ ಹೇಳ್ದಂಗ್ಕೇಳ್ತಾನ.

—————————–

About The Author

Leave a Reply

You cannot copy content of this page

Scroll to Top