ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವನ ಬರೆಯುವುದು ಕಷ್ಟ
ಅದನ್ನು ಓದುವುದು ಇನ್ನೂ ಕಷ್ಟ !
ಕವನವೆಂದರೆ ಕೆಲವರಿಗೆ ಕಿರಿಕಿರಿ
ಹಲವರಿಗೆ ಬಲು ಹಿಗ್ಗು !
ಕವನ ಓದದೆಯೂ ವಿಮರ್ಶಿಸುವ
ಹಲವು ವಿಮರ್ಶಕರಿದ್ದಾರೆ !
ಅವನದು ಕವನಗಿವನವೆಂದು
ಕಾಲಹರಣ ಮಾಡುತ್ತಾನೆಂದು
ಟೀಕಿಸುವ ಟೀಕಾಕಾರರಿದ್ದಾರೆ !
ಮತ್ತೆ ಕೆಲವರು ಇವನಿಗೆ ಕವಿಯೆಂಬ
ಸೊಕ್ಕೆಂದು ಧಿಕ್ಕರಿಸುವವರಿದ್ದಾರೆ !
ಕವನದಲ್ಲಿ ಸಣ್ಣ ದೋಷವಾದರೂ
ಹಲವು  ಜನ  ದೊಡ್ಡ ಮಟ್ಟದ
ಟೀಕೆಯನ್ನು ಮಾಡುವವರಿದ್ದಾರೆ !
ಇದೆಲ್ಲದರ ಮಧ್ಯ ಕವನ ಬರೆದು
ಗೆದ್ದು ಬಾಗಬೇಕು ಬೀಗಬೇಕು ಕವಿ !!

————————–

About The Author

Leave a Reply

You cannot copy content of this page

Scroll to Top