ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯ ಸಂಗಾತಿ

ಲತಾಧರಣೇಶ್

ಅನುರಾಗ

ಮಾತು ಮಥಿಸಿ ತನ್ನ ತಾನೇ ಪ್ರೀತಿಸಿದೆ
ಎಲ್ಲೆಲ್ಲಿಯೂ ಸೃಷ್ಟಿಯ ಚೆಲುವು ಹಂಚಿ ಕೂತಿದೆ//
ಅಚ್ಚ ಹಸಿರಿನ ಹೊಚ್ಚ ಹೊಸ ಆಸೆಗಳು ಚಿಮ್ಮಿವೆ
ಹೊಂಗನಸುಗಳೇ,,, ಎಂದು ಬರುವಿರಿ ? ಚಿಂತೆ ಕಳೆದಿದೆ//

ಒಂದೆರಡು ಅಲ್ಲ ಒಲವೇ ಬಲು ಚಂದವಾಗಿದೆ
ಮಿಂಚಿನ ಕಂಗಳಲಿ ಮಂದಹಾಸದ ನಗುವಿದೆ//
ಒಲವೇ ಮನದಲಿ ನೀನಿದ್ದರೆ ಹೊಳೆಯುವ ದೀಪವೇ
ಚೈತ್ರದ ಸುಳಿವಿದೆ ಎದೆಯ ವೇದನೆಗಳು ತೀರಿದೆ//

ಸದ್ದು ಮಾಡದೆ ಮುದ್ದು ಮಾಡಿದ್ದು ನೀನಲ್ಲವೇ?
ತೊರೆದು ಹೋಗದಿರು ಮನವೇ ಭಾವಗಳಲ್ಲಿ ನೆಚ್ಚಿಕೊಂಡಿವೆ//
ಅನುರಾಗದ ಅರ್ಪಣೆಯಲಿ ಹೊಸತು ತಳಿರ ಕಟ್ಟಿರುವೆ
ಹೇಳಲೇನಿದೆ? ಮಿನುಗುವ ಕಣ್ಗಳಲ್ಲಿ ಆಸೆಗಳು ತುಂಬಿವೆ//


About The Author

2 thoughts on “ಲತಾಧರಣೇಶ್ ಕವಿತೆ ಅನುರಾಗ”

Leave a Reply

You cannot copy content of this page

Scroll to Top