ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇವನ ಜಗವಿದು ವಿಸ್ಮಯಗಳ ಗೂಡು
ದೇವ ಕುಂಚದ ಕುಶಲತೆಯ ನೋಡು

ದೃಷ್ಟಿಯಂತೆ ಸೃಷ್ಟಿ ಎನ್ನುವ ಈ ಮಾತಿಗೆ
ಕಲೆಯ ಬಣ್ಣ ಬಳಿದಿರುವ ಈ ಪ್ರಕೃತಿ ದೇವಿಗೆ

ಸೃಷ್ಟಿಯ ಸೋಜಿಗದ ಜೀವರಾಶಿಯಲ್ಲಿ
ಸಕಲ ಜೀವಿಗಳಿಗೂ ಆಶ್ರಯ ವಿಹುದಿಲ್ಲಿ

ವಿಧಾತನ ಪುಸ್ತಕದ ಹಾಳೆಯೊಳಗೆ
ಬೆಲೆಯಿಹುದು ಪ್ರತಿ ಜೀವಿಯ ಅಕ್ಷರಗಳಿಗೆ

ನದಿ ತೊರೆ ಬೆಟ್ಟ ಗುಡ್ಡ ಹಸಿರು ಕಾನನ
ಜೀವಿ ವೈವಿಧ್ಯತೆಯ ಹಾಡಿನ ತನನ

ನಾನು ನನ್ನದೆನ್ನುವ ಭಾವ ತೊರೆದು
ಜೀವಿಸೋಣ ನಿಸರ್ಗ ನಿಯಮಕೆ ಮಣಿದು

ಉಳಿಸೋಣ ಪ್ರಕೃತಿ ದೇವಿಯ ಹಸಿರ ಸಿರಿಯ
ಸ್ವಾಗತಿಸೋಣ ಶುದ್ಧ ಸಮೃದ್ಧ ನಾಳೆಯ


About The Author

2 thoughts on “ಮಧುಮಾಲತಿ ರುದ್ರೇಶ್ ಕವಿತೆ- ವಿಸ್ಮಯವೀ ಜಗ”

  1. ಎಲ್ಲ ಬರಹಗಾರರನ್ನು ಪ್ರೋತ್ಸಾಹಿಸುವ ಸಂಗಾತಿ ಪತ್ರಿಕೆಗೆ ತುಂಬು ಧನ್ಯವಾದಗಳು

Leave a Reply

You cannot copy content of this page

Scroll to Top