ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಯಾವ ಜನ್ಮದ ಕರ್ಮವೋ
ಯಾವ ಜನ್ಮದ ಪಾಪವೋ
ತಡೆಯಲಾಗದ ಕಷ್ಟವೋ
ಅಳಿಸಲಾಗದ ದುಃಖವೋ/ಪ/

ಇಂದು ಕಾಣುವ‌ ನೋವಲಿ
ಜೀವ ಇರದ ಕಾಲಲಿ
ವ್ಯಥೆ ಯಾರಿಗೆ ಹೇಳಲಿ?
ದಿನವು ಹೇಗೆ ನೂಕಲಿ?/

ನಿತ್ಯ ಸಾಯುತ ಬದುಕಲು
ಒಂದೇ ಸಮನೆ ನರಳಲು
ಕಾಣದು ಹಿಂಸೆಯ ಅಳಲು
ಬಿಡದು ವಿಧಿಯ ಕಾವಲು/ಪ/

ಹಣೆಬರಹ ತಿಳಿಯದು
ಇರಲು ಸಾವು ಬಾರದು
ತಪ್ಪಿಗೆ ಶಿಕ್ಷೆಯು ತಪ್ಪದು
ಉಸಿರು ಶಾಶ್ವತವಲ್ಲದು/ಪ/


About The Author

6 thoughts on “ದೇವಿದಾಸ ಬಿ ನಾಯಕ ಕವಿತೆ-ಪ್ರಾರಬ್ಧ”

  1. shivaleela hunasagi

    ನೋವು,ಆದ್ರತೆ ಹಾಗೂ ಬದುಕಿನ‌ ಚಿತ್ರಣದ ನೈಜ‌ ಉದಾ.ಎಂತಹ ನೋವಿಗೂ ಪರಿಹಾರವಂತೂ ಇದ್ದೆ ಇರುತ್ತದೆ.ಇದರಿಂದ ವಿಚಲಿತನಾಗುವ ಯಾವ ಅವಶ್ಯಕತೆಯು ಇಲ್ಲ.ಧೈರ್ಯಂ ಸರ್ವತ್ರ ಸಾಧನಂ…ಎಂಬಂತೆ ಭರವಸೆಯ ಮೇಲೆ ಬದುಕು…ಕವಿತೆ ಕಣ್ಣೀರ ತಣಿಸಿತು…

  2. shivaleela hunasagi

    ನೋವು,ಆದ್ರತೆ ಹಾಗೂ ಬದುಕಿನ‌ ಚಿತ್ರಣದ ನೈಜ‌ ಉದಾ.ಎಂತಹ ನೋವಿಗೂ ಪರಿಹಾರವಂತೂ ಇದ್ದೆ ಇರುತ್ತದೆ.ಇದರಿಂದ ವಿಚಲಿತನಾಗುವ ಯಾವ ಅವಶ್ಯಕತೆಯು ಇಲ್ಲ.ಧೈರ್ಯಂ ಸರ್ವತ್ರ ಸಾಧನಂ…ಎಂಬಂತೆ ಭರವಸೆಯ ಮೇಲೆ ಬದುಕು…ಕವಿತೆ ಕಣ್ಣೀರ ತಣಿಸಿತು..

Leave a Reply

You cannot copy content of this page

Scroll to Top