ಎ. ಹೇಮಗಂಗಾ-ತನಗಗಳು

Preview in new tab

ಪದಗಳಲ್ಲಿ ಪೂರ್ಣ
ಹಿಡಿದಿಡಲಾಗದು
ಒಲವು ಎಂಬುದೊಂದು
ಮಧುರ ಅನುಭೂತಿ

ನಿನ್ನ ನಗೆಯೇ ಸಾಕು
ನೋವನ್ನು ಮರೆಯಲು
ನಿನ್ನ ಪ್ರೀತಿಯೇ ಸಾಕು
ನಾನಿಂದು ಜೀವಿಸಲು

ಕೆನ್ನೆಯ ಕಪ್ಪುಮಚ್ಚೆ
ದೃಷ್ಟಿಬೊಟ್ಟಂತೆ ಇದೆ
ನೀ ಮುತ್ತಿಟ್ಟ ಕಾರಣ
ಕದಪು ಕೆಂಪಾಗಿದೆ

ಪ್ರತಿ ಇರುಳೂ ನಿನ್ನ
ತುಟಿ ಜೇನೇ ಮದಿರೆ
ಮತ್ತಲಿ ಬರುವುದು
ನಿಶ್ಚಿಂತೆಯ ನಿದಿರೆ

ನೀನಿರದ ಕ್ಷಣದಿ
ಬಾಳಲ್ಲಿ ಬರೀ ನಿಶೆ
ಸಂಗಾತಿ ನೀನಿರಲು
ತುಂಬಿದೆ ಪ್ರೀತಿ ನಶೆ


About The Author


Comments

Leave a Reply

You cannot copy content of this page