ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎದ್ದೆದ್ದು ಬಿದ್ದು ಓಡಿದರು
ಸಾಹುಕಾರನ ಮನೆಯಂಗಳಕೆ
ನನ್ನ ಬಾಂಧವರು ||

ಗಾಣದೆತ್ತಿನಂತೆ ದುಡಿದು
ಬದುಕ ಮರೆತು ಬಿಟ್ಟು
ಮಸಣದಡೆಗೆ ನಡೆದು ಬಿಟ್ಟರು
ಸದ್ದಿಲ್ಲದೆ ನನ್ನ ಬಾಂಧವರು ||

ತುತ್ತು ಖೂಳಿಗೆ ಊರು -ಕೇರಿ
ಸ್ವಚ್ಛ ಮಾಡಿ, ಊರಾಚೆ ಉಳಿದು ಬಿಟ್ಟರು,
ಊರು-ಕೇರಿ ದಾಟುವಾಗ
ಮಡಿಕೆ -ಪೊರಕೆ ಕಟ್ಟಿಕೊಂಡು
ನಡೆದು ಬಿಟ್ಟರು ನನ್ನ ಬಾಂಧವರು||

ಬೆಟ್ಟ ಹೊಡೆದು ಕಟ್ಟೆ ಕಟ್ಟಿ
ದಣಿದು ದಣಿದು ಮಡಿದುಬಿಟ್ಟರು
ನನ್ನ ಬಾಂಧವರು||

ಸೂರು-ಪಾರು ಸಿಗದೆ ಅವರು
ನೆರಕೆ ಕಟ್ಟಿಕೊಂಡು ಬಾಳಿ
ಬದುಕಿದರು ನನ್ನ ಬಾಂಧವರು||

ಊರಗೌಡನ ದರ್ಪಕೆದರಿ
ಶಿರವ ತಗ್ಗಿಸಿ ನೋವು
ನುಂಗಿದರು ನನ್ನ ಬಾಂಧವರು||
ಬೆವರ ಸುರಿಸಿ ಗುಡಿಯ ಕಟ್ಟಿ
ವಿಪ್ರರ ಆಜ್ಞೆಗೆ ಹರಕೆಯ
ಕುರಿಯಾದರು ನನ್ನ ಬಾಂಧವರು||

ಬೊಗಸೆಯಲ್ಲಿ ನೀರು ಕುಡಿದು
ಧಣಿಯ ದನಿಗೆ ಸೊರಗಿ ಹೋದರು
ನನ್ನ ಬಾಂಧವರು||

ಮಳೆ-ಚಳಿಗೆ ಮೈಯೊಡ್ಡಿ
ಬೆಳೆಯ ಬೆಳೆದು
ದೂರ ನಿಂತು ಗಂಜಿಯನುಂಡರು
ನನ್ನ ಬಾಂದವರು||


About The Author

1 thought on “ವಸಂತ್. ಕೆ. ಹೆಚ್-ನನ್ನ ಬಾಂಧವರು”

  1. ಚನ್ನಾಗಿದೆ ಗೆಳೆಯ ದೀನ ದಲಿತರ ಆರ್ಥಿಕ ಗುಲಾಮಗಿರಿಯ, ಅನಕ್ಷರತೆಯ, ಅಸಂಘಟಿತ, ಅಸ್ಪೃಶ್ಯತೆ.. ಈಗಲೂ ಕೆಲ ಹಳ್ಳಿಗಳಲ್ಲಿ ಈಗಾಲೂ ಇದೆ.

Leave a Reply

You cannot copy content of this page

Scroll to Top