ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂತಕನೇ ಬೆನ್ನೇರಿದ ಬೇತಾಳನಂತೆ ಕಾಡಿಸದಿರು ನಾನಿನ್ನೂ ಬದುಕಬೇಕಿದೆ
ಅಂತಕನೇ ಸೂಚನೆ ನೀಡದೇ ಎಳೆದೊಯ್ಯದಿರು ನಾನಿನ್ನೂ ಬದುಕಬೇಕಿದೆ

ತಿಳಿದಿದೆ ನನಗೆ ಪ್ರತಿ ಜೀವಿಯ ಹುಟ್ಟಿನ ಜೊತೆಗೂ ನಿನ್ನ ನೆರಳಿದೆಯೆಂದು
ನಿಷ್ಕರುಣಿಯಾಗಿ ಬಾಳಕೊರಳಿಗೆ ಉರುಳಾಗದಿರು ನಾನಿನ್ನೂ ಬದುಕಬೇಕಿದೆ

ಕಷ್ಟ ಸುಖದ ಬುತ್ತಿಯಲಿ ವಿಧಿ ಈ ತನಕ ಉಣಿಸಿದ್ದು ಬರೀ ನೋವು ಸಂಕಟವನ್ನೇ
ಬದುಕಲೇಬೇಕೆಂಬ ಛಲದ ಮರವನ್ನು ಕೆಡವದಿರು ನಾನಿನ್ನೂ ಬದುಕಬೇಕಿದೆ

ನಿನ್ನ ಖಚಿತ ಆಗಮನದ ಸುಳಿವನ್ನು ತಿಳಿದವರು ಇರುವರೇ ಹೇಳು ಜಗದಲ್ಲಿ
ಪಯಣದ ಹಾದಿಯನ್ನಿಂದು ಮೊಟಕುಗೊಳಿಸದಿರು ನಾನಿನ್ನೂ ಬದುಕಬೇಕಿದೆ

ನಡೆದಿಹ ಜೀವನವೆಂಬ ನಾಟಕದಲ್ಲಿ ‘ ಹೇಮ’ ಳ ಪಾತ್ರವಿನ್ನೂ ಕೊನೆಗೊಂಡಿಲ್ಲ
ಅರ್ಧದಲ್ಲೇ ಅಂಕದ ಪರದೆಯನ್ನು ಜಾರಿಸದಿರು ನಾನಿನ್ನೂ ಬದುಕಬೇಕಿದೆ


About The Author

1 thought on “ಎ. ಹೇಮಗಂಗಾ ಅವರ ಹೊಸ ಗಜಲ್”

  1. ತುಂಬಾ ಚೆನ್ನಾಗಿ ಭಾವನೆಗಳನ್ನು ವ್ಯಕ್ತಪಡಿಸಿರುವಿರಿ ಮೇಡಂ ಅಭಿನಂದನೆಗಳು

Leave a Reply

You cannot copy content of this page

Scroll to Top