ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಹಾ ನೋಡು
ಎಂಥಾ ಚೆಂದ ನಮ್ಮೂರ ಹಳ್ಳೀ
ಸುತ್ತಾ ಮುತ್ತಾ ಹಸುರು ಗದ್ದೀನ್
ನೋಡಾಕ್ ಚೆಂದಿಲ್ಲಿ ||

ಹಳ್ಳಾ- ಕೊಳ್ಳ ದಾಗ ಮುಳ್ಳು
ಇರತಾವಾ ಇಲ್ಲೀ….
ಆ ಮುಳ್ಳಾ ನಮಗ ಬದುಕು
ಬೆಳೆಸಿನ ಬೇಯ್ಸಾಕ್ ನಾವ್ ಬಲ್ವಿ ||

Pric

ಭತ್ತ ಜೋಳ ಹತ್ತಿ ಬಿತ್ತಿ
ಬೆಳಿತಾರೋ ಇಲ್ಲೀ
ಭೂಮಿ ತಾಯಿಗೆ ನಮಿಸಿ
ಸೇವೆಯ ಮಾಡ್ತಾರೋ ಇಲ್ಲಿ ||

ವೀರಭದ್ರನ ಕೃಪೆ ಇರತೈತೆ
ಎಂದೂ ನಮಗಿಲ್ಲೀ
ದಾರೀ ತಪ್ಪಿ ನಡದರ
ನಿನಗ ಉಳಿಗಾಲ ಎಲ್ಲೀ ||

ತಾಯಿ ಅಂಬಾ ಕುಂತಾಳ್ ನೋಡು
ನಗತಾ ಗುಡಿಯಲ್ಲೀ
ಅಮ್ಮನ ಹಸ್ತ ಇರೋತನಕ
ಚಿಂತೀ ನಮಗೆಲ್ಲಿ ||


About The Author

3 thoughts on “ಆದಪ್ಪ ಹೆಂಬಾ ಮಸ್ಕಿಯವರ ಕವಿತೆ-ಆಹಾ ನೋಡು….”

Leave a Reply

You cannot copy content of this page

Scroll to Top