ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕಬೇಕು…. ಬೆಳಕಾಗಬೇಕು…..
ಬಯಕೆಯ ತೋಟದಲ್ಲಿದ್ದವಳಿಗೆ
ಬೆಳಕಿನ ಭ್ರಮೆಯ ಪೊರೆ ಕಳಚಿತಿಂದು….
ಕತ್ತಲೆಯ ಕೂಪದಲ್ಲಿ ಬೆಳಕಿಗೆ ತಡಕಾಡುತಿದ್ದೇನೆ….

ನನ್ನವರೆಂದು ಪ್ರೀತಿಸುತ್ತಿರುವವರೆಲ್ಲ
ಹೇಳುವ ಮಾತಾದಾವುದೆಂದರೆ…
“ನಿನ್ನಿಂದ ಬದುಕು ಬದಲಾಯಿತಿಂದು”
ನಿಜಾ…..! ಈ ಬದಲಾದ ಬದುಕು
ಹೋರಾಟವೆಂದು ತಿಳಿಯದಾಯಿತು….
ಸಂಕಷ್ಟಗಳ ಹಾದಿಯೆಂದು ತೋರದಾಯಿತು…..
ತನು.. ಮನ.. ಕನಸಿಗೆ ಘಾಸಿಯಾಗೊಡಗಿದೆ…
ಅರಳಬೇಕೆಂಬ ಹೂವಿಗೆ
ರವಿ ಉದಯವಾಗದಂತೆ…

ಭವಿಷ್ಯದ ಪ್ರಶ್ನೆ ಕಾಡತೊಡಗಿದೆ….
ಪ್ರಶ್ನೆಗಳು ಸರ ಮಾಲೆಯಾಗುತಲಿದೆ…
ಸ್ಪರ್ಧೆ ಓಟಕ್ಕೆ ಕಣ್ಣು ಮಿಟುಕಿಸುವಂತಾಗಿದೆ…
ಯೋಚನೆ ಆಲೋಚನೆ ಜಿದ್ದಿಗಿಳಿದಿವೆ..
ನಿರಾಸೆಯ ಕಣ್ಣೀರು ಗುಡಿಕಟ್ಟುತ್ತಲಿದೆ….

ಸಂಸಾರ ಸಾಗರದಲ್ಲಿ ಮನ
ಸಣ್ಣ ಕೀಟವಾಗಲೂ ಅಂಜುತ್ತಿದೆ ….
ಜವಾಬ್ದಾರಿಗಳ ಮೂಟೆಗೆ ಬೆನ್ನು ಬಾಗಿದೆ…..
ಬದುಕು ಭವಿಷ್ಯದ ಚಲನೆಗೆ ಶರಣಾಗುವಂತಾಗಿದೆ….
ಆತಂಕದ ಸೂರಾಗಿದೆ… ಬಿಸಿ ತುಪ್ಪತಂತೆ…. !

ಒಂದೊಮ್ಮೆ ಅನಿಸುತ್ತದೆ….
ಯಾರಿಗಾಗಿ ಈ ಬದುಕು… ಭವಿಷ್ಯ…?
ನನ್ನ ಬದುಕಲ್ಲಿ ಯಾರು ಇಲ್ಲ…
ಒಬ್ಬಂಟಿ ಮರವಾಗಿರುವೆಯೆಂದು….
ಸ್ವಾರ್ಥ ಚಿಂತನೆ ಮಾಡುವ…
ನನ್ನಿಂದ ಉಪಯೋಗ ಬಯಸುವ
ಪ್ರಪಂಚದಲ್ಲಿ ಭವಿಷ್ಯ ಕಟ್ಟುತ್ತಿದ್ದೇನೆಯೇ…?
ದ್ವಂದ್ವದಲ್ಲಿದ್ದೇನೆಯೇ.?
ನನ್ನೊಳಗೆ ಬೆಳಕಾಗಿ ಬಂದವರೆಲ್ಲ….
ಕತ್ತಲೆಯ ದರ್ಶನ ಮಾಡಿಸುತಲಿದ್ದಾರೆ..
ಸತ್ಯವರಿತರು.. ಬಳಗವನ್ನು
ಹುಚ್ಚಿಯಂತೆ ಪ್ರೀತಿಸುತಲಿದ್ದೇನೆ…..
ನಲ್ಲನ ನಗೆಯಲ್ಲಿ ಭವಿಷ್ಯ
ಬೆಳಕಿಗೆ ಹಂಬಲಿಸುತಲಿದ್ದೇನೆ…

ದಣಿದಿರುವ ಈ ದೇಹ ಮನಸ್ಸಿಗೆ
ಚೈತನ್ಯ ತುಂಬುತಲಿದ್ದೇನೆ…
ಕಸುಕಟ್ಟುವ ಪುನರ್ ಉತ್ಸಾಹ ತೋರುತಲಿದ್ದೇನೆ….
ವಿಚಿತ್ರವಾಗಿದೆ ತೋರಿದರೂ…
ಸಚಿತ್ರವಾಗಿ ಗೋಚರಿಸುವ
ಜೀವನದ ಪರರಿಗೆ ಬೆರಗಾಗಿದ್ದೇನೆ… ಬೆರಗಾಗಿದ್ದೇನೆ….


About The Author

1 thought on “ಅಂಜಲಿದೇವಿ ಎಂ ಅವರ ಕವಿತೆ-ಬದುಕ ಬೆಳಕು”

Leave a Reply

You cannot copy content of this page

Scroll to Top