ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಚ್ಛ ದೇಹದಲ್ಲಿ ಸ್ವಸ್ಥ ಮನಸ್ಸು
ಸ್ವಚ್ಛ ಭಾರತ ನಮ್ಮೆಲ್ಲರ ತಪಸ್ಸು

ದ್ರವತ್ಯಾಜ್ಯ ಘನ ತ್ಯಾಜ್ಯ
ಹಸಿ ತ್ಯಾಜ್ಯ ಒಣ ತ್ಯಾಜ್ಯ
ವಿಂಗಡಿಸಿ ಸಂಗ್ರಹಿಸೋಣ

ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಕೈಜೋಡಿಸೋಣ
ಕೈತೊಳೆವ ಅಭ್ಯಾಸಕ್ಕೆ ಜೈ ಎನ್ನೋಣ

ಬಯಲು ಬಹಿರ್ದೆಸೆ ತ್ಯಜಿಸೋಣ ಶೌಚಾಲಯವನ್ನೆ ಬಳಸೋಣ

ಕಸದ ಉತ್ಪಾದನೆ ಕಡಿಮೆ ಮಾಡೋಣ
ಮರುಬಳಕೆಯ ವಸ್ತುಗಳನ್ನೇ ಬಳಸೋಣ

ಪರಿಸರ ಸ್ನೇಹಿ ಪದಾರ್ಥಗಳನ್ನು ಪ್ರೇರೇಪಿಸೋಣ
ಜವಾಬ್ದಾರಿಯುತ ನಾಗರಿಕರಾಗಿ ಪರಿಸರವ ರಕ್ಷಿಸೋಣ

ಸರಕಾರದ ನಿಲುವಿಗೆ
ಒಮ್ಮತದಿ ಸಂಕಲ್ಪ ತೊಡೋಣ
ಮಾಹಿತಿ ಸಂವಹನದಿ
ಜನ ಜಾಗೃತಿಯ ಮೂಡಿಸೋಣ

ಸ್ವಚ್ಛ ನೆಲ ನಿರ್ಮಲ ಜಲ ಶುದ್ಧ ಗಾಳಿ
ಆರೋಗ್ಯಕರ ಜೀವನದ ಭದ್ರ ಜೋಕಾಲಿ

ಮನೆ ಮನೆಯಲಿ ಶುಚಿತ್ವ ಮೆರೆಯುತಿರಲಿ
ಬೀದಿ ಬೀದಿಯಲಿ ನೈರ್ಮಲ್ಯ ನಲಿಯುತಿರಲಿ

ನಮ್ಮ ಬಲ ನಮ್ಮ ಛಲ ಒಂದಾಗಲಿ
ದೇಶ ಸ್ವಚ್ಛ ಸಮೃದ್ಧಿಯ ಸಿರಿಯಾಗಲಿ


About The Author

Leave a Reply

You cannot copy content of this page

Scroll to Top