ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಏನೆಲ್ಲಾ ಮರೆಸುವದು
ಆ….. ನಸು ನಗು!?

ಆದರೆ…………………..

ದುರಾಸೆಯ ಧೋರಣೆಗೆ
ನಲುಗಿಹುದು ಧರಣಿ
ಸೋಗಲಾಡಿ ಸ್ವಾರ್ಥದ ಭಾರಕೆ
ಮುಳುಗುತಿಹುದು ದೋಣಿ!

ಅಂತರಂಗದ ಧ್ಯಾನ
ಮಂದಿರ, ಮಸೀದಿ, ಚರ್ಚುಗಳ
ಮೇಲೆ ನಿಲ್ಲದ ದಾಳಿ;
ದೋಷ, ದ್ವೇಶ, ಮತ್ಸರ
ಆವೇಶ, ಆಕ್ರೋಶದ ಫಿರಂಗಿಗಳು,
ಮದ್ದು ಗುಂಡು ಬಾಂಬುಗಳು,
ತೆರೆದಿವೆ ನರಕದ ಹೆಬ್ಬಾಗಿಲು!

ಅರಿಷಡ್ವರ್ಗಗಳ ಆರ್ಭಟಕ್ಕೆ
ದು:ಖ-ದುಮ್ಮಾನದ ಕಾರಣಕ್ಕೆ
ಬಾಳಿನ ಸ್ವರ್ಗಲೋಕ ಹಾಳು…..

ಲಾಭ, ಲಾಭಿಗೆ ಮಣಿದು ಮಣೆ
ಹಾಕಿದವರನು ಕಂಡು ಘನತೆ
ತಾಳಿದೆ ಗಂಭೀರ ಮೌನ!

ಭ್ರಾತೃತ್ವದ ಬಾಗಿಲಿಗೆ
ಆತ್ಮ ವಂಚನೆಯ ತೋರಣ!

ಮಾನಸ ಸರೋವರದಿ
ಸ್ವಚ್ಛಂದವಾಗಿ ತೇಲುತ ಆಡುವ
ಹಂಸ ಪಕ್ಷಿಗೂ ಹಿಂಸೆಯ ಸಿಂಚನ !
………………….


ಎಲ್ಲಾ
ಎಲ್ಲಾ ಬಿಟ್ಟು
ಒಂದು ಕ್ಷಣ ಚಿಂತಿಸೆ;
ಏನೆಲ್ಲಾ ಮರೆಸುವುದು
ಬುದ್ಧನ ಆ…. ನಸು ನಗು
ಆಗ ಬೇಕೆನಿಸುವುದು
ಪುಟ್ಟ ಮಗು!


About The Author

Leave a Reply

You cannot copy content of this page

Scroll to Top