ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಾಯಿಯ ಗರ್ಭದಿ ಚಿಗುರುವ ಕುಡಿಯಿರೆ
ಮಾಯದ ಲೋಕವ ಸೃಷ್ಟಿಸಿದೆ/
ನೋಯಿಸಲಾರೆನು ನನ್ನಯ ಮಾತೆಯ
ಬಾಯಿಯ ತೆರೆಯದೆ ಆಡುತಿದೆ//

ಉದರದ ಒಳಗಡೆ ಬೆಳಕಿನ ಗೂಡಿದೆ
ಮಧುರವು ಇಲ್ಲಿನ ಆಸರೆಯು/
ಹೃದಯವು ಅಮೃತ ಸಿಂಚನ ಗೈದಿದೆ
ಒದೆಯಲು ಮೆತ್ತನೆ ಹಾಸಿಗೆಯು//

ಮೆಲ್ಲಗೆ ಕರಗಳು ಮಗುವನು ಸ್ಪರ್ಶಿಸಿ
ಮಲ್ಲಿಗೆ ಹಾಗೆಯೆ ಹಿಡಿಯುತಿವೆ/
ಕಲ್ಲಿನ ಮನವನು ಕರಗಿಸೊ ಕಂದನ
ಮೆಲ್ಲನೆ ತುಳಿತಕೆ ಕಾಯುತಿವೆ//

ಅಮ್ಮನ ಮೊಗದಲಿ ಏನೋ ಹರುಷವು
ಸುಮ್ಮನೆ ತಳಮಳ ಎದೆಯಲ್ಲಿ/
ಘಮ್ಮನೆ ಕಂಪನು ಬೀರಿದೆ ತನುವಿದು
ಹೊಮ್ಮಿದೆ ಕಂಪನ ಒಡಲಲ್ಲಿ//


About The Author

1 thought on “ಮಂಜುಳಾ ಭಟ್ ಕವಿತೆ-ತಾಯ್ತನ”

  1. ನನ್ನ ರಚನೆಯ ತಾಯ್ತನ ಕವಿತೆಯನ್ನು, ತಮ್ಮ ಸಂಗಾತಿ ಪತ್ರಿಕೆಯಲ್ಲಿ ಪ್ರಕಟಿಸಿದ, ಶ್ರೀ ಮಧುಸೂದನ್ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು
    ಇದನ್ನು ಪತ್ರಿಕೆಗೆ ಕಳುಹಿಸಲು ಕಾರಣರಾದ ಮುಖಪುಟ ಸಹೋದರಿ ರುಕ್ಮಿಣಿ ನಾಯರ್ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು

Leave a Reply

You cannot copy content of this page

Scroll to Top