ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇವಕಿಯು ನೌಕರಿಗಾಗಿ ತನ್ನ ಕುಟುಂಬವನ್ನು ಬಿಟ್ಟು ಬೇರೆ ಊರಿಗೆ ಬಂದಿರುತ್ತಾಳೆ. ಅಲ್ಲಿ ಬಾಡಿಗೆ ಮನೆಯೊಂದರಲ್ಲಿ ಅವಳು ಒಬ್ಬಳೇ ಇರಬೇಕಾದ ಅನಿವಾರ್ಯತೆ. ಹೇಗೋ ಅಕ್ಕ – ಪಕ್ಕವರು ದೇವಕಿಯ ಜೊತೆಗೆ ಆತ್ಮೀಯತೆಯಿಂದ ಇದ್ದರು. ಹೀಗೆಯೇ ಕೆಲವು ದಿನಗಳು ಕಳೆದವು, ಒಂದು ದಿನ ದೇವಕಿಯು ನೌಕರಿ ಮಾಡುತಿದ್ದ ಸ್ಥಳಕ್ಕೆ ಒಬ್ಬ ಸುಂದರ ಯುವಕ ಏನೋ ಕೆಲಸದ ನಿಮಿತ್ಯ ಬಂದಿರುತ್ತಾನೆ. ಆಗ ಅವನು ಅವಳನ್ನು ಮತ್ತು ಅವಳು ಅವನನ್ನು ಪರಸ್ಪರ ನೋಡುವ ಒಂದು ದೃಶ್ಯ. ನಂತರ ಇಬ್ಬರ ಮನಸಲ್ಲೂ ಏನೋ ಪ್ರಶ್ನೆಗಳು ..
ತಿಂಗಳುಗಳು ಕಳೆದವು.ಹಾಗೆ ಮುಂದುವರೆದು ಮೂರು  ವರ್ಷಗಳೇ ಕಳೆದು ಹೋದವು. ಇಬ್ಬರಲ್ಲಿಯೂ ಪ್ರಶ್ನೆಗಳ ಸುರಿಮಳೆ. ಹೇಗೆ ಮಾತನಾಡಿಸುವುದು? ಏನಾದರೂ ತಪ್ಪಾಗಿ ಭಾವಿಸಿದರೆ? ಅವರ ಮನಸ್ಸಲ್ಲಿ ಪ್ರೀತಿಯ ಭಾವನೆ ಇರದೇ ಹೋದರೆ? ಹೇಗೆ ನೂರಾರು ಪ್ರಶ್ನೆಗಳು ಹಾಗೇ ಮುಂದುವರೆಯುತ್ತಾ . ಮೂರು ವರ್ಷಗಳ ನಂತರ ಮತ್ತೇ ಅವರಿಬ್ಬರ ಭೇಟಿ. ದೇವಕಿ ಮಾರ್ಕೆಟ್ ಗೆ ಹೊದಂತ ಸಂದರ್ಭ. ಅವನು ಮತ್ತೆ ಅವಳ ಕಣ್ಣ ಮುಂದೆ ತಟ್ಟನೆ ಬಂದು ನಿಂತ ವೇಳೆ.ಅವನನ್ನು ನೋಡಿದ ದೇವಕಿ ಅವಳಿಗೆ  ಗೊತ್ತಿಲ್ಲದೆ ಕಿರುನಗೆ ಬೀರದಳು.ಅವನು ಕೂಡ ಅವಳನ್ನು ನೋಡಿ ಕಿರುನಗೆ ಬೀರಿದ.
ದೇವಕಿ ಇನ್ನೇನು ಮುಂದೆ ಹೋಗಬೇಕು ಎನ್ನುವಷ್ಟರಲ್ಲಿ ಮೇಡಂ 1 ನಿಮಿಷ ನಿಲ್ಲಿ ಅಂತ ಹೇಳಿ ತನ್ನ ವಿಸಿಟಿಂಗ್ ಕಾರ್ಡ್ ಕೊಟ್ಟು ,ನೀವು ಬಿಡುವು ಮಾಡಿಕೊಂಡು ಫೋನ್ ಮಾಡಿ ಎಂದು ಹೇಳಿ, ಹೊರಟುಹೋದ. ಇವಳಿಗೂ ಸಂತೋಷವಾಯಿತು. ಈಗಲಾದರೂ ಮನಸ್ಸಿಗೆ ಇಷ್ಟ ಅದವರ ನಂಬರ ಸಿಕ್ಕಿತಲ್ಲ ಅಂತ.

ದೇವಕಿಗೆ ನಂಬರ ಕೊಟ್ಟು ಹೋದ ಆ ಯುವಕ ಯಾರು,ಅವನ ಹೆಸರು, ಅವನು ಮಾಡುವ ಕೆಲಸ ಯಾವುದು,ಯಾವ ಮನೆತನ ಇದಾವುದೂ ಗೊತ್ತಿಲ್ಲದೆ ಅವನನ್ನು ಇಷ್ಟ ಪಟ್ಟಿದ್ದಳು ದೇವಕಿ.
ವ್ಹಿಸಿಟಿಂಗ್ ಕಾರ್ಡ್ ನೋಡಿದಾಗ ಅವನ ಹೆಸರು ರಾಜ ಅಂತ ಗೊತ್ತಾಯಿತು. ಇವಳಿಗೂ ಏನೋ ತಳಮಳ ಕಾಲ್ ಮಾಡಲಾ ಬೇಡವಾ ಅಂತ. ಕಾಲ್ ಮಾಡಿದ್ರೆ ಏನು ಮಾತನಾಡುವುದು ಅಂತ ಹೀಗೆ ಗೊಂದಲದಲ್ಲಿ ಸಿಲುಕಿ ಒದ್ದಾಡುತ್ತಾಳೆ ದೇವಕಿ. ಇಷ್ಟೆಲ್ಲ ಯೋಚನೆ ಮಾಡುವಾಗಕೊನೆಗೆ  ಒಂದು ಉಪಾಯ ಹೊಳೆಯುತ್ತದೆ ಅದು ಏನೆಂದರೆ ಅವನ ವಾಟ್ಸಪ್ ಗೆ ಸಂದೇಶ ನುಡಿಮುತ್ತನ್ನು ಕಳಿಸುವ ಮೂಲಕ ತನ್ನ ಮಾತನ್ನು ಅಲ್ಲಿ ವ್ಯಕ್ತ ಪಡಿಸುತ್ತಾಳೆ.
ಆ ಸಂದೇಶ ಏನೆಂದರೆ, “ದೇವರು ಎಲ್ಲರಿಗೂ  ಅವಕಾಶಗಳನ್ನು ಕೊಟ್ಟಿರುತ್ತಾನೆ.ಅವುಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು  ಎರಡು ಇಟ್ಟಿರುತ್ತಾರೆ. ಇದರಲ್ಲಿ ಆಯ್ಕೆ ಮಾಡಿಕೊಳ್ಳುವುದು ನಮಗೆ ಬಿಟ್ಟಿದ್ದು” ಎನ್ನುವ ನುಡಿಮುತ್ತು.
ಆ ಕಡೆ ರಾಜನಿಗೂ  ದೇವಕಿಯ ಬಗ್ಗೆ ಏನು ಗೊತ್ತಿರುವುದಿಲ್ಲ. ಕಾರ್ಡ್ ಕೊಟ್ಟು ಬಂದ ರಾಜ ದೇವಕಿಯ ಕಾಲ್ ಗೋಸ್ಕರ ಕಾಯುತ್ತ ಇರುತ್ತಾನೆ. ಕಾಲ್ ಬಾರದೆ ವಾಟ್ಸಪ್ ಸಂದೇಶ ಬಂದಾಗ ರಾಜನಿಗೆ ಎಲ್ಲಿಲ್ಲದ ಖುಷಿ ಆಗುತ್ತೆ. ದೇವಕಿ ಕಳಿಸಿದ ಸಂದೇಶಕ್ಕೆ ಪ್ರತ್ಯುತ್ತರ  ಓಕೆ ಅಂತ ಥಂಬ್   ಕಳಿಸುವ ಮೂಲಕ ಒಪ್ಪಿಗೆ ಸೂಚಿಸುತ್ತಾನೆ. ನಂತರ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುವ ಮೂಲಕ ಹತ್ತಿರವಾಗುತ್ತಾರೆ. ರಾಜನು ವಾಟ್ಸಪ್ ಗೆ ಹಾಕಿದ ಪ್ರೊಫೈಲ್ ಫೋಟೋ ದೇವಕಿಗೆ ಬಹಳ ಇಷ್ಟವಾಗಿತ್ತು. ಅದರ ಮೇಲೆ ಒಂದು ಕವನ ಕೂಡ ಬರೆದಿದ್ದಳು.


About The Author

1 thought on “”

  1. ಅಂಕಣಕತೆ ಚನ್ನಾಗಿ

    ಶುರುಹಚ್ಚಿದಿರಿ ಸಹಜವಾಗಿ ನಿಮ್ಮದೆ ಶೈಲಿಯೊಳಗೆ ಕವಲೊಡೆದು ತಿರುವು ,,,,,,,,,,

Leave a Reply

You cannot copy content of this page

Scroll to Top