ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹೆಚ್. ಎಸ್. ಪ್ರತಿಮಾ ಹಾಸನ್

ಹಸಿರುಟ್ಟ ಭೂತಾಯಿ

ಹೋಗಬೇಡ ಹಸಿರು ನೀ ಭೂಲೋಕವನ್ನು ಬಿಟ್ಟು
ಸಾಗುವಳಿ ಮಾಡುವರು ಬಡರೈತರು ನೋಡು
ನೀಗಿಸುತ ದಾಹವನು ಜೀವಿಗಳ ಮನತಣಿಸಿ
ಬಾಗುವರು ತಾಯೆಂದು ಭೂತಾಯಿಗೆ ನಮಿಸಿ……

ಧರೆಗಿಳಿಯುತಿರಬೇಕು ಮಳೆರಾಯ ಗುಡಿಕಟ್ಟಿ
ತರತರದ ಅನುಭವವು ಭುವಿಯಜನಕೆ ನೋಡು
ಸುರಿಯುತ್ತಿರೆ ಜಲಧಾರೆ ಮೈಮನವು ಅರಳುವುದು
ಹರುಷವಲ್ಲವೆ ಜಗಕೆ ಭೂತಾಯಿ ನೋಡು….

ಪುಟ್ಟಮಕ್ಕಳಲ್ಲಿ ಸಾಕುವೆ ನಿನ್ನೊಡಲಲ್ಲಿ ಭೂತಾಯಿ
ಬಿಟ್ಟೋಡುವರು ಕೊನೆಗಾಲ ಬಂದಾಗ
ಋಣಿ ಎಂದು ನಿನಗಾಗಿ ಭೂತಾಯಿ ನೀ ನೋಡ
ನಿಟ್ಟುಸಿರು ಬಿಡದಲೆ ಬಾಳುವೆವು ನಿನ್ನೊಡಲಲ್ಲಿ……

ಅಂತಸ್ತು ತುಂಬಿರುವ ನೂರಾರು ನಗರಗಳು
ಅಂತರಿಕ್ಷವ ಚುಂಬಿಸುತಲಿರುವುದು ನೋಡು
ಅಂತರವು ಇಲ್ಲದಿರೆ ಸೂಚನೆಯ ನೀಡುವುದು
ಅಂತಿಮ ಕ್ಷಣವದುವೆ ಪರಿಸರ ನಾಶಗೊಳಿಸೆ……


ಹೆಚ್. ಎಸ್. ಪ್ರತಿಮಾ ಹಾಸನ್.

About The Author

Leave a Reply

You cannot copy content of this page

Scroll to Top