ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಲಾಶಯ ಒಣಗಿ
ಹೊರಬಂದ ಗುಡಿಯು
ಆ ದೇವರೇ ಬಂದನೇ?
ಬರಗಾಲ ನೋಡಲು.
**
ಅರೆ ಬರೆ ಮಳೆಯು
ಇಲ್ಲ ತಳ ಹಸಿಯು
ನಷ್ಟ ಬಿತ್ತಿದ ಬೀಜ
ವ್ಯರ್ಥ ಬೆವರು ಹನಿ.
***
ಹಸಿವು ನೀಗಿಸುವನು-
-ರೈತ ಭುವನದಲಿ,
ಆತ ಬದುಕಿರುವ
ಹಸಿದ ಹೊಟ್ಟೆಯಲಿ.

***
ಅನ್ನದಾತ ಈ ಬಾರಿ
ಚೆಲ್ಲೋದಿಲ್ಲ “ಚರಗ”.
ಮಳೆ ಬೆಳೆ ಇಲ್ಲದೆ!
ಏನಿದೆ? ಹೊಲದಾಗ.
**
“ಬರ”ದಲ್ಲೂ ಭೂತಾಯಿ
ಪೂಜಿಸಿಯೇ ಬಿಡೋಣ!
ಮುಂದಿನ ವರುಷಕೆ
ಕೊಟ್ಟಾಳು!,ಹೊಟ್ಟೆ ತುಂಬಾ.

—————————-

About The Author

Leave a Reply

You cannot copy content of this page

Scroll to Top