ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮತ್ತೇಕೋ ನಿನ್ನದೇ ನೆನಪು
ಕಾಡುತಿದೆ ಚೆಲುವ
ಅದೆಷ್ಟು ಸಂಭ್ರಮದ ಸವಿಯ
ತುಂಬಿದೆ ಒಲವ

ಅದೇಕೋ ಕಾಣೆ ಕಣ್ತುಂಬಿದೆ
ನಿನ್ನ ಆ ರೂಪ
ನಿನ್ನ ಮುಗ್ಧತನವೇ ಬಿಂಬಿಸಿತು
ಕಾಣಲಿಲ್ಲ ಕೋಪ

ಅದೇನು ಮೋಡಿ ಮಾಡಿದೆ
ನಿನ್ನ ಒಡನಾಟ
ಮರೆತರೂ ಮರೆಯಲಾಗದ
ಆ ನಿನ್ನ ತುಂಟಾಟ

ಮತ್ತೆ ಬಯಸುತಿದೆ ಮನವು
ನಿನ್ನಯ ಆಗಮನ
ಜೊತೆಯಾಗಿ ಸಾಗುವ ಒಲವಿನಲಿ
ಈ ಬಾಳ ಪಯಣ


About The Author

Leave a Reply

You cannot copy content of this page

Scroll to Top