ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಾಯಿ ಪ್ರೀತಿ
ಇನ್ನೆಲ್ಲಿ ಹುಡುಕಲು
ಸಾಧ್ಯ ?
ಮತ್ತೆಲ್ಲಿ ಕಾಣುವುದು
ಈ ಜಗದಲಿ ..?
ಆ ಪ್ರೀತಿಗೆ
ಸರಿಸಾಟಿ ಇಲ್ಲ
ಯಾವುದೂ..
ತೀರಿಸಲಾಗದ
ಋಣವು..

ಅಳಿಸಲಾಗದ
ತಾಯ್ತನದ ಮಮತೆ
ಜಗದ ಎಲ್ಲ
ಸಾಗರಗಳ ನೀರನು
ಶಾಯಿ ಮಾಡಿ
ಭೂಮಂಡಲವೆಂಬ
ಕಾಗದದಲಿ
ಬರೆದರೂ ತೀರದ
ತಾಯೊಲುಮೆಯ
ಬಣ್ಣನೆ..

ಎಷ್ಟು ಜನ್ಮವೆತ್ತಿದರೂ
ಮತ್ತಷ್ಟು ಬಯಸುವ
ತಾಯಿ ಪ್ರೀತಿಗೆ
ಸೋಲದವರಾರು ?
ದೇವರೇ ಸೋತಿದ್ದಾನೆ
ಅದು ಕಾರಣ
ತಾಯಿಗಿಂತ ದೇವರಿಲ್ಲ
ದೇವಗಿಂತ ದೊಡ್ಡವಳು
ನಮ್ಮೆಲ್ಲರ ಅವ್ವ
ದಿವ್ಯ ಬಾಂಧವ್ಯ..

ಪ್ರಕೃತಿಮಾತೆ, ಭೂದೇವಿ,
ತಾಯಿ – ಸರಿಸಮರು..
ಸಹನೆ ತ್ಯಾಗ ಸಹಾಯ
ಸಹಕಾರಗಳ ಪ್ರತಿರೂಪವು
ಅವಳು ಜಗದ ಎಲ್ಲ
ಜ್ಞಾನ,ತಿಳಿವು,ಅರಿವು
ಮಹಾ ಅನುಭವಿ,
ಅಹಂ ಇರದ
ದಿವ್ಯ ಮೌನಿಯು
ಯಾವ ಯೋಗಿಯ
ತಪಕೂ ಹೋಲಿಕೆಯಿರದು..

ಅವ್ವನಿಗೆ ನಾವು
ಏನು ಕೊಡಲು ಸಾಧ್ಯ ?
ಅವಳಿಗೆ ನೀಡುವುದು
ಮಾತ್ರ ಧರ್ಮ
ಮರಳಿಸಬೇಕೆನುವ
ಫಲಾಪೇಕ್ಷೆ ಇಲ್ಲವೇ ಇಲ್ಲ
ಒಂದಿಷ್ಟು ಸಂತೋಷ
ಎಂಥದು ? ಎಂದರೆ
ಧನ ಕನಕಾದಿ ಅಸ್ತಿ
ಅಂತಸ್ತು ಐಶ್ವರ್ಯವಲ್ಲ ..

ಅವಳ ಬಯಕೆ ಹಂಬಲ
ಸುಸಂಸ್ಕೃತತೆ, ಸನ್ನಡತೆ
ಸೌಹಾರ್ದತೆ, ಸಹಬಾಳ್ವೆ
ಅಂತಃಕರಣೆ,ಮಾನವತೆ..
ಅವಳ ಅಂತರಾಳವ
ಅರಿಯುವುದೇ ಮನುಷ್ಯತ್ವ
ಅವಳ ಉದರದಿ ಜನಿಸಿ
ಅವಳಂತಾಗದೆ ಇರುವುದೇ
ವಿಪರ್ಯಾಸ, ವೈರುಧ್ಯತೆ

ಮೀರಿದ ನಡೆ ಸಾರ್ಥಕವು..


About The Author

1 thought on “ಡಾ.ಬಸಮ್ಮ ಗಂಗನಳ್ಳಿ-ತಾಯಿ ಪ್ರೀತಿ”

Leave a Reply

You cannot copy content of this page

Scroll to Top