ಕಾವ್ಯ ಸಂಗಾತಿ
ಡಾ.ಕಸ್ತೂರಿ ದಳವಾಯಿ
ಅಚ್ಚ ನಗುವಿನ ಬಿಚ್ಚು ಮಲ್ಲಿಗೆ


ತಾಯೆ ನೀನು
ನಮಗಿಲ್ಲಿ
ಬದುಕನೂಕಲು
ನುಣ್ಣಗೆ ಸವೆದ
ಸಕ್ಕರೆ ಅಕ್ಕರೆಯ
ಮಂದಸ್ಮಿತ ನಗೆ
ಚಲ್ಲಿ ಚಲನಚಿತ್ರ
ರಂಗದಲ್ಲಿ
ಬದುಕಿನ ಚಿತ್ತರಾ ಬರೆದ
ಚಿನ್ಮಯ ಚಿನ್ನ ನೀನಮ್ಮ
ಹೆಣ್ಣಿಗೆ
ಇರಬೇಕಾದ
ಸಹನೆ.ಶೌರ್ಯ.
ಶಕ್ತಿ. ಯುಕ್ತವಾಗಳ
ಸಂಗಮ ನೀನಬ್ಬೆ
ನಿನ್ನೂಮೆಯಲಿ
ಅರಳುವ ನಮಗೆಲ್ಲಾ
ಎಂಟದೆ ಹಮ್ಮೀರಳ
ನೀನೂಂದು ನಕ್ಷತ್ರ
ನಳನಳಿಸುವ
ನಲಮೆಯ
ನಮ್ಮೆಲ್ಲರ
ಬಾಳ ಜ್ಯೋತಿ
ಸಾವಲ್ಲಾ.ನಿನ್ನ
ಮರುಹುಟ್ಟು
ಮಾನಿನಿಯೆ
ಮಹಾತಾಯೆ
ನಿನಗೆ ನಮ್ಮೂರಿನ
ನಿಮ್ಮೂರಿನ
ಅವರಿವರೆನ್ನದೆ
ಎಲ್ಲರಗೌರವ
ಗಂಗಾವತರಣದ
ಸ್ಮರೆಣೆಯ
ಸಮತೆಯ
ಶುಭನಮನಗಳು.
——————–
ಡಾ.ಕಸ್ತೂರಿ ದಳವಾಯಿ





1 thought on “ಡಾ.ಕಸ್ತೂರಿ ದಳವಾಯಿ-ಅಚ್ಚ ನಗುವಿನ ಬಿಚ್ಚು ಮಲ್ಲಿಗೆ”