ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೋಸ ಮಾಡೋ ಖಯಾಲಿಯದಲ್ಲ ಈ ಮೊಹಬ್ಬತ್
ಮೋಜ ನೋಡೋ ಮಸಲತ್ತಿನದಲ್ಲ ಈ ಮೊಹಬ್ಬತ್

ಹಾತೊರೆವ ಹಂಬಲಗಳ ಬಳ್ಳಿ ಹರಡಿ ನಿಂತಿದೆಲ್ಲೆಡೆ
ಸೊಕ್ಕು ತೋರೋ ಖದರಿನದಲ್ಲ ಈ ಮೊಹಬ್ಬತ್

ತುಳುಕೊ ಭಾವದಲೆಗಳ ತುಂಬಿ ನಿಂತಿದೆ ಭಾವಕೊಳ
ಹೊಂಚು ಹಾಕೋ ಸಂಚಿನದಲ್ಲ ಈ ಮೊಹಬ್ಬತ್

ಉಕ್ಕಿ ಹರಿವ ಆಸೆಗಳ ಬಿಂದಿಗೆ ಮನಭಾರವಾಗಿದೆ
ಮಿಂಚಿ ಮಾಯವಾಗೊ ಕ್ಷಣಿಕದಲ್ಲ ಈ ಮೊಹಬ್ಬತ್

ಮೌನದ ಬುತ್ತಿಯಲ್ಲಿ ನೋವಿನ ತುತ್ತುಗಳೆ ತುಂಬಿವೆ
ಸುರಿಸಿ ಹಗುರಾಗೋ ಮೋಡದಂತಲ್ಲ ಈ ಮೊಹಬ್ಬತ್

ಜೀವದ ಜತನದಲಿ ಕಥೆ ಹೇಳುವ ಕನಸುಗಳು ತುಂಬಿವೆ
ವ್ಯಥೆಯನೇ ಹಾಡೋ ಗಾಥೆಯಲ್ಲ ಈ ಮೊಹಬ್ಬತ್

ಕೂಗಿ ಕೂಗಿ ಅನುಳ ಕೊರಳ ಧ್ವನಿ ಕುಗ್ಗಿ ಕಂಗಾಲಾಗಿದೆ
ತಾಳದ ಬೇಗೆ ನೀಡೋ ಉರಿಯಂತಲ್ಲ ಈ ಮೊಹಬ್ಬತ್


About The Author

1 thought on “ಡಾ ಅನ್ನಪೂರ್ಣ ಹಿರೇಮಠ- ಗಜಲ್”

Leave a Reply

You cannot copy content of this page

Scroll to Top