ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಂಗೊತ್ತು..
ನಿನ್ನ ಚಿಕ್ಕ ಸಾರಾಯಿ
ಗ್ಲಾಸಿನಿಂದ ಈ ದೊಡ್ಡ ಛಳಿಯನ್ನುಓಡಿಸ..
ಲಾಗುತ್ತಿಲ್ಲ !

ನಂಗೊತ್ತು..
ನಿನಗೆ ನಿದ್ದೆಯೇನೋ ಬರುತಿದೆ ಆದರೆ..ನನ್ನ ಕನಸು ನಿನ್ನ ಮಲಗಲು ಬಿಡುತ್ತಿಲ್ಲ !

ನಂಗೊತ್ತು..
ಬಿಸಿಯಾದ ಬಿಸುಪು ತುಂಬುವ ನನ್ನಪ್ಪುಗೆ
ನಿಂಗೆ ಮತ್ತೆ ನೆನಪಾಗಿದೆ.
ನಿನ್ನೆದೆಯ ಮಿಡಿತಕ್ಕೆ
ನನ್ನೆದೆಯ ಬಡಿತವ
ಕೇಳುವಾಸೆ ಯಾಗಿದೆ.

ಕನಸಲಿ ನಾ….ಬಂದು
ನಿನ್ನ ತಬ್ಬಿದ್ದ ನೋಡಿದರೆ
ಛಳಿಗೂ…ಮತ್ತೆ..ಛಳಿ
ಯಾದರೇನು ಮಾಡುವೆ ?

ನಿಮಿಷದಲಾರುಸಲ
ಮಿಸುಕುವ ಬಾನಬಣ್ಣದ ಮೆತ್ತನಾಸಿನಲಿ ಮಲಗಿದ ನನ್ನಿನ್ಕಂದ ನೆಬ್ಬೆರಳಿನಿಡಿತ
ನನ್ನಿಂದ ಬಿಡಿಸಲಾಗುತ್ತಿಲ್ಲ

ಕಂದನೆಬ್ಬೆರಳು ಸ್ವಲ್ಲ..
ಸಡಿಲಾಗಲಿ ನೋಡು…
ನಿನ್ನ ಕನಸಿಗೆ ನನ್ನಹಾಜರಿ
ಅಲ್ಲಿಯತನಕ ಛಳಿರಾಯ
ನೊಂದಿಗೆ ಬಿಸಿಯ ಹಾಡು ಹಾಡು

About The Author

Leave a Reply

You cannot copy content of this page

Scroll to Top