ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸನ್ಮಾರ್ಗದಲ್ಲಿ ನಡೆವವಗೆ
ಸಂಕಟವು ತಪ್ಪದು
ದುರುಳರ ಸುಳ್ಳಿಗೆ
ಉಳಿಗಾಲವಿರದು

ಸುಳ್ಳು ಸಿಹಿಯಾದರೂ
ಭಾದಕವು
ರುಚಿಸದ ಕಹಿಯಾದರೂ
ಸತ್ಯವೇ ನಿಜವು

ಭಾಧೆಗಳಲಿ ಬೆಂದವಗೆ
ಸಿಗಬಹುದು ಗೆಲುವು
ಮಿಥ್ಯದ ಮಾತುಗಳಿಗೆ
ಸಿಗದೆಂದಿಗೂ ವಿಜಯವು

ಮೊಸರಿನಲಿ ಕಲ್ಲು
ಹುಡುಕುವವರ ನಡುವೆ
ಬೇಸರಿಸದೇ ಅರ್ಥೈಸಿಕೊ
ತಪ್ಪುಗಳು ಸಹಜವೇ

ಸತ್ಯಮೇವ ಜಯತೆ
ಭಾರತೀಯರ ಮೂಲಮಂತ್ರ
ಸತ್ಯದ ಹಾದಿಯಲ್ಲೇ
ಪಡೆದೆವು ಸ್ವತಂತ್ರ


About The Author

Leave a Reply

You cannot copy content of this page

Scroll to Top