ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೋಗೋಣಾ
ನಾನು ನೀನು
ಯಾರು ಇರದ ಊರಿಗೆ
ಸದ್ದಿರದ ಹಾದಿಗೆ
ಒಲುಮೆಯ ಗೂಡಿಗೆ
ಹೊಸ ದಿಕ್ಕಿನ ಹೆಜ್ಜೆಗೆ

ಜಾತಿ ಧರ್ಮ ಇರದ
ಕಷ್ಟ ನೋವು ಹೊರದ
ಸಾಲ ಶೂಲವಿರದ
ಒಡಲ ಚೀಲಕೆ ಹಸಿವಿರದ
ನಡೆವ ಪಯಣ ಕತ್ತಲೆ
ಹೊಸ ಸೂರ್ಯದ ಬೆಳಕಿಗೆ

ಬೇಡ ಮಠ ಮಸೀದೆ
ಚರ್ಚು ಗುಡಿ ವಿಹಾರವು.
ಕೊರೆವ ಘಂಟೆ ಕರ್ಕಶ .
ಭಜನೆ ನಮಾಜಿನ ಶಬ್ದವು .
ಸಾಗಬೇಕು ನಾನು ನೀನು
ಹೊಸ ಬದುಕಿನ ಭಾಷೆಗೆ.

ಸತ್ಯ ಸಮತೆಯ ಬಟ್ಟೆಗೆ
ಶಾಂತಿ ಪ್ರೀತಿಯ ಮಂತ್ರಕೆ.


About The Author

12 thoughts on “ಡಾ.ಶಶಿಕಾಂತ .ಪಟ್ಟಣ ಪುಣೆ ಕವಿತೆ-ಹೋಗೋಣಾ”

  1. ಜೀವನದ ಆಗುಹೋಗುಗಳನ್ನು ಬಿಟ್ಟು … ಸತ್ಯ ಸಮತೆಯ ಹಾದಿಯಲ್ಲಿ … ಶಾಂತಿ ಮಂತ್ರವ
    ಅರಸುತ್ತಾ ಬೆಳಕಿನ ಕಡೆಗೆ ಸಾಗುವ ಕವನ ಅರ್ಥಪೂರ್ಣವಾಗಿ ಮೂಡಿ ಬಂದಿದೆ…

  2. ಡಾ.ಶಶಿಕಾಂತ ಪಟ್ಟಣರವರ ಕವಿತೆ ಸಂವೇದನೆ ನಾನು ನೀನು ಎನ್ನುವಲ್ಲಿ ವಿಶ್ವ ಪ್ರತಿನಿಧಿಸು ಏ.
    ಕತೆಯ ಹರಿಕಾರಾಗಿ ಮನ.ಮನಗಳ ಸಮ್ಮೀಲಕ್ಕೆ
    ಕರೆ ಕೋಡುತ್ತಾರೆ.ಅಲ್ಲದೆ ನಾವು ಮತಾಂದತೆಯಲಿ ಕಟ್ಟಿಕೊಂಡ ಸಾಂಕೇತಿಕ ಕುರುಗಳು ಬಿಟ್ಟು.ನಮಗೆ ಬೇಕಾದ ಪ್ರೀತಿ. ಸಮತೆ ಬಾಳಯಾಣದ ಕಡಗೆಯೆಂದು ಕವಿಯ ಅಂತರಂಗದ ತುಡಿತವಾಗಿದೆ.
    ಡಾ.ಕಸ್ತೂರಿ ದಳವಾಯಿ. ಗದಗ.ಕಾಲೇಜು.

  3. ಡಾ.ಕಸ್ತೂರಿ ದಳವಾಯಿ.ಕವಿಯ ಅಂತರಂಗದ ತಮುಲವು.ನಾನ.ನೀನು ಜಾಗತಿಕ ಪ್ರತಿನಿಧಿಯಾಗಿ ಏಕತೆಯ ಕಡಗೆ ಸಾಗೋಣ ಅಲ್ಲದೆ. ಜನನ ಅವುಕಟ್ಟಕೂಂಡ ಸಾಂಜೇತಿಕೆಳ.ಬಿಸೋಡೋಣ.
    ಅಗತ್ಯ ವಿರುವ.ಪ್ರೀತಿ. ಭಾತೃತ್ವ ಬಿತ್ತೋಣ ವೆನ್ನತ್ತಾರೆ.ಕವಿ .

  4. ದೀಪಾ ಜಿಗಬಡ್ಡಿ

    ಎಂತಹ ಅದ್ಭುತ ಕಲ್ಪನೆ ಮತ್ತು ಅಭಿವ್ಯಕ್ತಿ ಸರ್ ನಾನು ನಿಮ್ಮ ಸಾಹಿತ್ಯ ಅಭಿಮಾನಿ

  5. ಯಾರೂ ಇರದ,ಯಾರೂ ಬರದ ಪಯಣ ಅದು ಒಲವ ಪಯಣ.ಸುಂದರ ಭಾವ ಸರ್

  6. ಸರ್ ಅತ್ಯಂತ ಸುಂದರವಾಗಿ ಮೂಡಿ ಬಂದಿದೆ

    ಲಕ್ಷ್ಮಿ ಕಾಯಕದ ಗದಗ

  7. ಏಂಜಲೀನಾ ಗ್ರೆಗರಿ

    ಅಪ್ರತಿಮ ಸಾಹಿತ್ಯ ಸರ್ ಭರವಸೆಯ ಬೆಳಕು

  8. Raju Kalyanshetti

    ಪ್ರಭುದ್ದ ಚಿಂತನೆ ಕವನ ಕಾವ್ಯ ದಲ್ಲಿ ಮೂಡಿ ಬಂದಿದೆ ಸರ್

Leave a Reply

You cannot copy content of this page

Scroll to Top