ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಯಾವುದು ಒಳಿತು?

ಒಲವು

ನೋವುಗಳ ಬುತ್ತಿಯನ್ನು
ಯಾರ ಮುಂದೆಯೂ ಬಿಚ್ಚಬಾರದು
ಬಿಚ್ಚಿದ ಬುತ್ತಿಯ ಕಂಡು
ನಗುವವರು ಹೆಚ್ಚಾಗಿದ್ದಾರೆ

ಹೇಗೆ ಮುಚ್ಚಿಡುವುದು
ಎದೆಯ ಸೀಳುವ ನೋವುಗಳ
ಹೇಗೆ ಇಲ್ಲವಾಗಿಸುವುದು
ಗಾಯದ ಗುರುತುಗಳ

ನಗು-ಅಳು
ಕೋಪ-ಬೇಸರ
ಪ್ರೇಮ-ಕಾಮ ಎಲ್ಲವನ್ನೂ
ಹೊರಹಾಕುವುದು ಒಳಿತು

ಮನದೊಳಗೆ
ನಿಗ್ರಹದ ಸೂತ್ರವೊಂದಿರದಿದ್ದರೆ
ಎಲ್ಲ ಭಾವನೆಗಳ ಮನದೊಳಗೇ
ಹುದುಗಿಸಿಡುವುದು ಒಳಿತು.


About The Author

Leave a Reply

You cannot copy content of this page

Scroll to Top