ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಮುತ್ತು ಬಳ್ಳಾ ಕಮತಪುರ

ಮತಗಳ ಜಗಳದಲಿ ಈ ಮಣ್ಣ ಗುಣವನು ಮುರಿಯದಿರು |
ಆಚರಣೆ ನೆಪದಲಿ ಈ ನೆಲದ ಪ್ರೀತಿಯನು ಮುರಿಯದಿರು ||

ಮುಖದ ಛಾಯೆ ತೋರದ ನಿಷ್ಠೆಯನು ತಲ್ಲಣಿಸದಿರು |
ಪ್ರತಿದಿನ ಧರಣಿ ನಮಿಸುವೆ ಪ್ರೇಮವನು ಮುರಿಯದಿರು ||

ಬಿರುಕು ಬಿಟ್ಟ ಮಿನಾರಿನ ಗೋಡೆಗೆ ಉಸಿರುಗಳೆ ಆಧಾರ |
ನಿನ್ನನ್ನು ಕ್ಷಮಿಸದು ಇತಿಹಾಸ ಗುರುತನು ಮುರಿಯದಿರು ||

ಕುಗ್ಗುವೆವು ಕುಹಕದ ಕೊಂಕು ನುಡಿಗೆ ಸಂಶಯಸದಿರು |
ಪುನಃ ಸಾಬೀತೆ ? ಭೂಮಿಯ ತಳವನು ಮುರಿಯದಿರು ||

ಬಣ್ಣಗಳ ಮೇಲಾಟ ಮನುಜಪಥ ಮರೆಯದಿರು ಮುತ್ತು |
ಚಂದ್ರತಾರೆಗಳ ಜೋಗುಳದ ಬೆಳಕನು ಮುರಿಯದಿರು ||


About The Author

Leave a Reply

You cannot copy content of this page

Scroll to Top