ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇವಳು

ಮಾಜಾನ್ ಮಸ್ಕಿ

artparks-sculpture | Mother and child, Portrait sculpture, Statue

ನವಮಾಸ ಬಚ್ಚಿಟ್ಟು ಸಲುಹಿದಳು
ಮೃದು ಮಲ್ಲಿಗೆಯಾಗಿ ಬೆಳೆದವಳು
ಪ್ರೀತಿಯ ಸುಹಾಸನೆ ಬೀರಿದವಳು
ಭಾವನೆಗಳ ಗುಪ್ತಗಾಮಿನಿ ಇವಳು
ಸೋಲು ಗೆಲುವುಗಳಿಗೆ ಪ್ರೇರಕಳು
ನೊಂದು ಬೆಂದರು ಸೋಲದವಳು
ಕಿರುಕುಳ ಅತ್ಯಾಚಾರಕ್ಕೆ ಕೊಲೆ ಆಗಿರುವಳು
ಎಲ್ಲಾ ಸಹಿಸಿ ಸಮುದ್ರದಂತೆ ತುಂಬಿಹಳು
ಮಮತೆಯ ಸೆಲೆ ಆಗಿರುವಳು
ಕರುಣೆಯ ನೆಲೆ ಇವಳು
ಕಲ್ಪನೆಗೂ ಮೀರಿದವಳು
ಮನ ಪುಳಿತಕೆ ಚುಂಬಕಳು
ಬೆಳದಿಂಗಳ ತಂಪಿನವಳು
ಸೂರ್ಯ ಕಾಂತಿಗೆ ಅರಳಿದವಳು
ಭೂಮಿ ಆಕಾಶಕ್ಕೂ ಬೆಳೆದಿರುವಳು
ಜೀವ ಸಂಕುಲನಕೆ ತಾಯಿ ಬೇರು ಇವಳು


About The Author

Leave a Reply

You cannot copy content of this page

Scroll to Top