ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಕೆಂಪು ಗುಲಾಬಿ

ಅಕ್ಷತಾ ಜಗದೀಶ

Three Bright Red Roses Isolated On White Background Stock Photo - Download  Image Now - iStock

ನೀನಾದೆ ನನ್ನ ಬಾಳಲ್ಲಿ
ಮಿನುಗುವ ಧ್ರುವತಾರೆ..
ಸುರಿದೆ ಎನ್ನ ಮನದೊಳು
ಪ್ರೀತಿಯ ಅಮೃತಧಾರೆ‌‌….

ಪ್ರೇಮದ ಕಡಲಿನ ನೌಕೆಯಲಿ
ಈ ನಮ್ಮ ಒಲವಿನ ಪಯಣ…
ಬಾಳಿನುದ್ದಕ್ಕೂ ಪಿಸುಗುಡಲಿ
ಸವಿಗಾಯನದ ಚರಣ….

ನೋವು ನಲಿವಿನ ಬಾಳಲಿ
ಚಿಮ್ಮಿತು ಒಲವಿನ ಝೆಂಕಾರ…
ಹೃದಯಗಳ ಮಿಲನದೊಳು
ಮೂಡಿತು ಪ್ರೇಮದ ಓಂಕಾರ..

ಪ್ರೇಮದ ಹೂ ತೋಟದಲಿ
ಜೊತೆಯಾದ ದುಂಬಿ ನೀನು…
ನಿನ್ನಲ್ಲೇ ಬೆರೆತು ಒಂದಾದ
ಕೆಂಪು ಗುಲಾಬಿ ನಾನು….


About The Author

Leave a Reply

You cannot copy content of this page

Scroll to Top