ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಖಾಲಿ ಮನೆ

.

ಪ್ರೊ ರಾಜನಂದಾ ಘಾರ್ಗಿ

A girl walking in shallow the water, Cook Islands, Rarotonga

ನನ್ನ ನಿನ್ನ ಮಿಲನಕೆ
ಸಾಕ್ಷಿಯಾದ ಮನೆ
ನಿಂತಿದೆ ಒಂಟಿಯಾಗಿ
ನನ್ನ ಖಾಲಿ ಹೃದಯದಂತೆ

ನೆನಪುಗಳ ಸುಡು ಬಿಸಿಲಲಿ
ಸುಟ್ಟು ಸುಡುಗಾಡಿನಂತೆ
ಪ್ರೀತಿಯ ಗೋರಿ ಹೊತ್ತು
ನಿಂತಿದೆ ತಾಜಮಹಲಿನಂತೆ

ಪ್ರೀತಿ ಹೊತ್ತಿಸಿಟ್ಟಿದ್ದ
ಪಣತಿಗಳೆಲ್ಲ ಆರಿ ಹೊಗಿ
ಅಂಧಕಾರ ಆವರಿಸಿದೆ
ಮನದ ಹತಾಶೆಯಂತೆ

ಭಾವಗಳು ಜೊತಾಡುತ್ತಿವೆ
ಜೇಡರ ಬಲೆಯಾಗಿ ಮೂಲೆಯಲಿ
ಗೋಡೆಗಳಲ್ಲಿ ಬಿರುಕುಗಳು
ಮನದ ಒಡೆದ ಕನ್ನಡಿಯಂತೆ

ಸತ್ತ ಕನಸುಗಳೆಲ್ಲ ಎಚ್ಚೆತ್ತು
ಇಣುಕುತ್ತವೆ ಕಿಡಕಿಯಿಂದ.
ಅತ್ತಿತ್ತ ಸುಳಿಯುವಾಗ ಕೆಣಕಿ
ಕಾಡುತಿವೆ ಭೂತಗಳಂತೆ

ಮನೆಯೊಂದು ಸ್ಮಶಾನವಾಗಿ
ನಿಂತಿದೆ ನೀರವತೆಯಲ್ಲಿ
ಕಾಯುತಿದೆ ವಿಮೋಚನೆಗೆ
ಶಾಪಗ್ರಸ್ಥ ದೇವತೆಯಂತೆ


About The Author

2 thoughts on “ಖಾಲಿ ಮನೆ”

Leave a Reply

You cannot copy content of this page

Scroll to Top