ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಒಂಥರಾ ಭಯ

ಸಂತೆಬೆನ್ನೂರು ಫೈಜ್ನಟ್ರಾಜ್

Best Abstract Artists of All Time Including Jackson Pollock

ಬೆಳೆದಷ್ಟೂ ಭಯ
ಬಿದಿರಿಗೆ
ಬೆತ್ತ, ಬುಟ್ಟಿ, ಕೊಳಲಾಗುವ ಹುನ್ನಾರಕೆ
*

ಹರಿದಷ್ಟೂ ನದಿಗೆ ಭಯ
ಸಾಗರದಿ
ಕಳೆದೇ ಹೋಗುವ ದುಗುಡಕೆ
*

ಮಣ್ಣಲಿ ಮಲಗಿದಷ್ಟೂ ಬೀಜಕ್ಕೆ ಭಯ
ಟಿಸಿಲೊಡೆದು
ಮಣ್ಣ ಬಂಧ ದೂರಾದೀತೆಂದು
*

ನಡೆದಷ್ಟು ಆತಂಕ
ಗುರಿ ಮುಟ್ಟಿ ಮುಂದೆ
ಮೈಲಿಗಲ್ಲಾಗಿ ತಟಸ್ಥನಾಗೋ ತುಮುಲ
*

ಒಲವೂ ಅಷ್ಟೇ ಪ್ರೀತಿಸಿದಷ್ಟು ಭಯ
ಕಳೆದುಕೊಂಡು
ಒಳಗೇ ಸತ್ತು ಹೋಗಬಹುದೆಂದು!


About The Author

3 thoughts on “ಒಂಥರಾ ಭಯ”

Leave a Reply

You cannot copy content of this page

Scroll to Top